Toothache Helped Detect Omicron: ಹಲ್ಲುನೋವಿನಿಂದ ಗೊತ್ತಾಯ್ತು ಒಮಿಕ್ರಾನ್‌ ಕೇಸ್‌ ಇದು ಹೇಗೆ..?

By Suvarna NewsFirst Published Dec 13, 2021, 5:02 PM IST
Highlights
  • ಹಲ್ಲು ನೋವಿನಿಂದ ಪತ್ತೆಯಾಯ್ತು ಒಮಿಕ್ರಾನ್‌ ಕೇಸ್‌
  • ನವೆಂಬರ್ 24 ರಂದು ನೈಜೀರಿಯಾದಿಂದ ಭಾರತಕ್ಕೆ ಮರಳಿದ್ದ ಕುಟುಂಬ
  • ಹಲ್ಲು ನೋವಿನಿಂದ ಬಳಲುತ್ತಿದ್ದ12 ವರ್ಷದ ಬಾಲಕಿ
  • ಚಿಕಿತ್ಸೆಗೆ ಆರ್‌ಟಿ-ಪಿಸಿಆರ್ ನೆಗೆಟಿವ್‌ ಪ್ರಮಾಣಪತ್ರ ತರುವಂತೆ ಹೇಳಿದ್ದ ವೈದ್ಯರು

ಮುಂಬೈ: 12 ವರ್ಷದ ಬಾಲಕಿಗೆ ಓಮಿಕ್ರಾನ್‌ ಪಾಸಿಟಿವ್ ಆಗಿರುವುದು ಹಲ್ಲು ನೋವಿನಿಂದಾಗಿ ಗೊತ್ತಾದ ಘಟನೆ ಮಹಾರಾಷ್ಟ್ರ(Maharashtra)ದಲ್ಲಿ ನಡೆದಿದೆ.  ಇತ್ತೀಚೆಗೆ 12 ವರ್ಷದ ಬಾಲಕಿ ನೈಜೀರಿಯಾ(Nigeria)ದಿಂದ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್‌(Pimpri Chinchwad)ಗೆ ತನ್ನ ಪೋಷಕರೊಂದಿಗೆ ಹಿಂದಿರುಗಿದ್ದಳು. ನಂತರ, ಆಕೆಗೆ ಹಲ್ಲುನೋವು ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ಕೋವಿಡ್‌ ಸೋಂಕಿನ ಜೊತೆ ರೂಪಾಂತರಿ ಒಮಿಕ್ರಾನ್‌ ಇರುವುದು ಗೊತ್ತಾಗಿದೆ. ನಂತರ ಆಕೆಯ ಮತ್ತು ಕುಟುಂಬದ ಇತರ ಐವರನ್ನು ತಪಾಸಣೆ ನಡೆಸಿದಾಗ ಅವರಿಗೂ ಒಮಿಕ್ರಾನ್ ರೂಪಾಂತರಿ ಇರುವುದು ಗೊತ್ತಾಗಿದೆ. ಈ ಕುಟುಂಬ  ನವೆಂಬರ್ 24 ರಂದು ನೈಜೀರಿಯಾದಿಂದ ಭಾರತಕ್ಕೆ ಮರಳಿದ್ದರು. 

ಹಲ್ಲು ನೋವಿಗೆ ಒಳಗಾದ ಬಾಲಕಿಯನ್ನು ಪರೀಕ್ಷಿಸುವ ಮೊದಲು ದಂತ ವೈದ್ಯರು ಆರ್‌ಟಿ-ಪಿಸಿಆರ್ ನೆಗೆಟಿವ್‌ ಪ್ರಮಾಣಪತ್ರವನ್ನು ತರುವಂತೆ ಒತ್ತಾಯಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಬಾಲಕಿಗೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂದಿದೆ. ಕೋವಿಡ್  ಪಾಸಿಟಿವ್  ಇರುವ ಜನರ ನಿಕಟ ಸಂಪರ್ಕಗಳನ್ನು ಪತ್ತೆಹಚ್ಚುವ ಮತ್ತು ಪರೀಕ್ಷಿಸುವ ಅಧಿಸೂಚನೆಗಳನ್ನು ಎಲ್ಲಾ ರೋಗಿಗಳಿಗೆ ಅನುಸರಿಸಲಾಗುತ್ತದೆ. ಬಾಲಕಿಯ ಪ್ರಕರಣದಲ್ಲಿ ಅದೇ ವಿಧಾನವನ್ನು ಅನುಸರಿಸಲಾಗಿದೆ ಎಂದು ವಲಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Omicron Effect ಏನು ಮಾಡಬೇಕು ಮುಖ್ಯಮಂತ್ರಿಗಳೇ? ಎಂದು ಕಠಿಣ ಪ್ರಶ್ನೆ ಮುಂದಿಟ್ಟ ನಿರ್ದೇಶಕ ಮಂಸೋರೆ!

ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಯುವುದಕ್ಕೂ ಕೆಲವು ದಿನಗಳ ಮೊದಲು ಹುಡುಗಿ ನೈಜೀರಿಯಾ(Nigeria)ದಿಂದ ಪಿಂಪ್ರಿ ಚಿಂಚ್‌ವಾಡ್‌ ಅವಳಿ ಪಟ್ಟಣಕ್ಕೆ ಮರಳಿದ್ದಳು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈಕೆಯ ನಾಲ್ವರು ಕುಟುಂಬದ ಸದಸ್ಯರು ಮೊದಲ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ನಂತರ ಎರಡನೇ ಬಾರಿ ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ (Covid positive)ಬಂದಿದೆ.  ಅವರೆಲ್ಲರನ್ನೂ ಜೀಜಾಮಾತಾ ಆಸ್ಪತ್ರೆ(Jijamata hospital)ಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ಹೇಳಿದರು.

ಕೋರೋನಾ ತಪಾಸಣೆ ಬಗ್ಗೆ ತಮ್ಮ ಕಾರ್ಯವಿಧಾನವನ್ನು ವಿವರಿಸುತ್ತಾ ಅಧಿಕಾರಿಯೊಬ್ಬರು ಮಾತನಾಡಿ, ಒಂದು ವೇಳೆ ಪ್ರಯಾಣಿಕರು ಕೋವಿಡ್‌ ಪಾಸಿಟಿವ್‌ ಬಂದರೆ ಆರ್‌ಟಿ-ಪಿಸಿಆರ್ ಪರೀಕ್ಷೆಯು ಕೋವಿಡ್ ಪಾಸಿಟಿವ್ ಪ್ರಕರಣವನ್ನು ಬಹಿರಂಗಪಡಿಸಿದರೆ, ಅವರು ವ್ಯಕ್ತಿಯ ಮನೆಗೆ ಭೇಟಿ ನೀಡುತ್ತಾರೆ  ಮತ್ತು ರೋಗಲಕ್ಷಣಗಳನ್ನು ಅವಲಂಬಿಸಿ, ಅವರು ಮನೆ ಅಥವಾ  ಸ್ಥಳೀಯ ಜನರ ಸಂಪರ್ಕಗಳನ್ನು ತಡೆಯಬೇಕೆ  ಬೇಡವೇ ಎಂದು ಅವರು ರೋಗಿಗೆ ಹೇಳುತ್ತಾರೆ. ಬಾಲಕಿಯ ಕುಟುಂಬದ ವಿಷಯದಲ್ಲಿ, ಒಮಿಕ್ರಾನ್ ರೂಪಾಂತರಿ ಪತ್ತೆಯಾದ ನಂತರ ಅಪಾಯದಲ್ಲಿರುವ ರಾಷ್ಟ್ರಗಳು ಎಂದು ವರ್ಗೀಕರಿಸಲಾದ ರಾಷ್ಟ್ರಗಳಿಂದ ಹಿಂದಿರುಗುವ ಜನರಿಗೆ ಸಂಬಂಧಿಸಿದ ಮಾನದಂಡಗಳಿಗೆ ಅನುಗುಣವಾಗಿ ಅವರು ಮಾದರಿಗಳನ್ನು NIV ಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

India Most Pro Vaccine Country: ವಿಶ್ವದ ಲಸಿಕೆ ಪರವಾಗಿರುವ ಜನರಲ್ಲಿ ಭಾರತವೇ ಟಾಪ್

ಪಾಸಿಟಿವ್‌ ಬಂದ ಈ  ಕುಟುಂಬದ ಸದಸ್ಯರಲ್ಲಿ 18 ತಿಂಗಳ ಮಗು ಕೂಡ ಸೇರಿದೆ. ಆದರೆ ಇವರಿಗೆ ಯಾವುದೇ ಲಕ್ಷಣಗಳಿಲ್ಲ. ಅವರಿಗೆ ಬಹು ಪೋಷಕಾಂಶಗಳ ನಿಯಮಿತ ಡೋಸ್ ಅನ್ನು ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಇತ್ತ ರಾಜ್ಯದ  ಶಾಲಾ-ಕಾಲೇಜುಗಳಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಭಾನುವಾರ ಮತ್ತೆ ಮೂರು ಶಾಲೆಗಳಲ್ಲಿ 32 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕಳೆದ ಹದಿನೆಂಟು ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 603 ತಲುಪಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 19, ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 9 ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇರಹಳ್ಳಿಯ ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಕಳೆದ ವಾರವಷ್ಟೇ 11 ವಿದ್ಯಾರ್ಥಿಗಳು ಪಾಸಿಟಿವ್‌ ಆಗಿದ್ದರು. ಈ ಮೂಲಕ ಶಾಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 20ಕ್ಕೇರಿದೆ.

click me!