'ಇನ್ನೊಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್‌ ಪ್ಲಾಜಾಗಳು ಬಂದ್!'

By Suvarna NewsFirst Published Mar 18, 2021, 3:26 PM IST
Highlights

ಲೋಕಸಭೆಯಲ್ಲಿ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ| ಮುಂದಿನ ಒಂದು ವರ್ಷದೊಳಗೆ ಎಲ್ಲಾ ಟೋಲ್‌ ಪ್ಲಾಜಾಗಳು ಬಂದ್| ಜಿಪಿಎಸ್‌ ಸಿಸ್ಟಂ ಅಳವಡಿಕೆ

ನವದೆಹಲಿ(ಮಾ.18): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಟೋಲ್‌ ಪ್ಲಾಜಾಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಲೋಕಸಭೆಯಲ್ಲಿ ನಿತಿನ್ ಗಡ್ಕರಿ ಮುಂದಿನ ಒಂದು ವರ್ಷದೊಳಗೆ ಟೋಲ್‌ ಪ್ಲಾಜಾಗಳನ್ನು ಬಂದ್‌ ಮಾಡುವುದಾಗಿ ಘೋಷಿಸಿದ್ದಾರೆ. 

ಹೀಗೆಂದರೆ ಟೋಲ್‌ಗಳಲ್ಲಿ ಹಣ ನೀಡುವುದು ತಪ್ಪುತ್ತದೆ ಎಂದಲ್ಲ, ಬದಲಾಗಿ ವಾಹನಗಳಲ್ಲಿ ಜಿಪಿಎಸ್‌ ಅಳವಡಿಸಲಾಗುತ್ತದೆ. ಈ ಮೂಲಕ ಟೋಲ್‌ ಹಣ ಪಾವತಿಯಾಗುತ್ತದೆ.

ಗುರುವಾರ ಈ ಬಗ್ಗೆ ಮಾತನಾಡಿದ ನಿತಿನ್ ಗಡ್ಕರಿ ಹಿಂದಿನ ಸರ್ಕಾರ ನಗರ ಭಾಗಗಳಲ್ಲಿ ಅನೇಕ ಕಡೆ ಟೋಲ್‌ ಪ್ಲಾಜಾಗಳನ್ನು ನಿರ್ಮಿಸಲಾಗಿತ್ತು. ಇದು ತಪ್ಪು ಹಾಗೂ ಅನ್ಯಾಯದ ನಡೆಯಾಗಿತ್ತು. ಆದರೀಗ ಇದನ್ನು ತೆರವುಗೊಳಿಸುವ ಕಾರ್ಯ ನಡೆಯಲಿದೆ. 

ವಾಹನಗಳಲ್ಲಿ ಇನ್ಮುಂದೆ ಜಿಪಿಎಸ್‌ ಅಳವಡಿಸಲಾಗುತ್ತದೆ. ಇದರ ಸಹಾಯದಿಂದ ಇನ್ಮುಂದೆ ಟೋಲ್‌ನಲ್ಲಿ ಕಟ್ಟುತ್ತಿದ್ದ ಹಣ ಸ್ವೀಕರಿಸಲಾಗುತ್ತದೆ ಎಂದಿದ್ದಾರೆ. 

click me!