ಇಂದು 75ನೇ ಗಣರಾಜ್ಯೋತ್ಸವ: ಮಿಲಿಟರಿ ಬ್ಯಾಂಡ್ ಬದಲು ಮೊಳಗಲಿದೆ ಶಂಖ, ನಾದಸ್ವರ

Published : Jan 26, 2024, 07:07 AM ISTUpdated : Jan 26, 2024, 08:36 AM IST
ಇಂದು 75ನೇ ಗಣರಾಜ್ಯೋತ್ಸವ: ಮಿಲಿಟರಿ ಬ್ಯಾಂಡ್ ಬದಲು ಮೊಳಗಲಿದೆ ಶಂಖ, ನಾದಸ್ವರ

ಸಾರಾಂಶ

75ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಜ್ಜಾಗಿದ್ದು, ಪ್ರಧಾನ ಕಾರ್ಯಕ್ರಮ ನವದೆಹಲಿಯಲ್ಲಿ ಇಂದು ಬೆಳಗ್ಗೆ ನಡೆಯಲಿದೆ. ದೇಶದ ಸೇನಾ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿಯು ದೆಹಲಿಯ ಕರ್ತವ್ಯ ಪಥದಲ್ಲಿ ಒಂದೂವರೆ ಗಂಟೆ ಅನಾವರಣಗೊಳ್ಳಲಿದೆ.

ನವದೆಹಲಿ: 75ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಜ್ಜಾಗಿದ್ದು, ಪ್ರಧಾನ ಕಾರ್ಯಕ್ರಮ ನವದೆಹಲಿಯಲ್ಲಿ ಇಂದು ಬೆಳಗ್ಗೆ ನಡೆಯಲಿದೆ. ದೇಶದ ಸೇನಾ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿಯು ದೆಹಲಿಯ ಕರ್ತವ್ಯ ಪಥದಲ್ಲಿ ಒಂದೂವರೆ ಗಂಟೆ ಅನಾವರಣಗೊಳ್ಳಲಿದೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ನೇತೃತ್ವ ವಹಿಸಲಿದ್ದು, ಸಮಾರಂಭದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪಾಲ್ಗೊಳ್ಳಲಿದ್ದಾರೆ.

ಹಲವು ಪ್ರಥಮ: ಈ ಬಾರಿಯ ಗಣರಾ ಜ್ಯೋತ್ಸವ ಪರೇಡ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಮೂರೂ ಸೇನಾ ಪಡೆಗಳ ಸಂಪೂರ್ಣ ಮಹಿಳಾ ಬ್ಯಾಚ್ ಪಥಸಂಚಲನದಲ್ಲಿ ಭಾಗವಹಿಸಲಿದೆ. ಸೇನಾ ವಾದ್ಯವೃಂದದ ಬದಲಿಗೆ 100 ಮಹಿಳಾ ಕಲಾವಿದರು ಪ್ರಥಮ ಬಾರಿಗೆ ಭಾರತೀಯ ಸಂಗೀತ ಸಾಧನಗಳಾದ ಶಂಖ, ನಾದಸ್ವರ ಹಾಗೂ ಡೊಳ್ಳು ಬಾರಿಸಲಿದ್ದಾರೆ.

ರಾಷ್ಟ್ರಪತಿ ಗಣರಾಜ್ಯೋತ್ಸವದ ಭಾಷಣ; ಇಸ್ರೋ ಯೋಜನೆ, ರಾಮ ಮಂದಿರ ಕಾರ್ಯ ಶ್ಲಾಘಿಸಿದ ದ್ರೌಪದಿ ಮುರ್ಮು!

ಬೆಳಗ್ಗೆ 10.30ಕ್ಕೆ ಶುರು: ಬೆಳಗ್ಗೆ 10.30ಕ್ಕೆ ಸಮಾರಂಭ ಆರಂಭವಾಗಲಿದ್ದು, ಒಂದೂವರೆ ತಾಸು ನಡೆಯಲಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸೇನಾ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಷ್ಟ್ರ ಪತಿ ಮುರ್ಮು ಹಾಗೂ ಮ್ಯಾಕ್ರೋನ್ ಅವರು ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಬರಲಿದ್ದಾರೆ. 40 ವರ್ಷಗಳ ಬಳಿಕ ಈ ಸಂಪ್ರದಾಯವನ್ನು  ಪುನಾರಂಭಿಸಲಾಗುತ್ತಿದೆ.

ರಾಷ್ಟ್ರ ಧ್ವಜ ಹಾರಿಸಿದ ಬಳಿಕ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಇದೇ ವೇಳೆ ಸ್ವದೇಶಿಗನ್ ಬಳಸಿ 21 ಕುಶಾಲತೋಪು ಹಾರಿಸಲಾಗುತ್ತದೆ. ಕಾರ್ಯಕ್ರಮದ ಸಂದರ್ಭದಲ್ಲಿ ಹೆಲಿಕಾಪ್ಟರ್‌ಮೂಲಕ ಸಮಾರಂಭದಲ್ಲಿ ನೆರೆದವರ ಮೇಲೆ ಪುಷ್ಪವೃಷ್ಟಿಗರೆಯಲಾಗುತ್ತದೆ. ಇದೇ ವೇಳೆ 46 ವಿಮಾನಗಳ ಹಾರಾಟ (ಪ್ರೈಪಾಸ್ಟ್) ಕೂಡ ಇರುತ್ತದೆ. ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ 4 ತೇಜಸ್ ಯುದ್ಧ ವಿಮಾನಗಳು ಕೂಡ ಪ್ರದರ್ಶನ ನೀಡಲಿವೆ. ಕಳೆದ ಬಾರಿ 1 ತೇಜಸ್ ಮಾತ್ರ ಹಾರಾಡಿತ್ತು. ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರ ಸಚಿವಾಲಯ 16 ಸ್ತಬ್ದಚಿತ್ರಗಳು ಕರ್ತವ್ಯಪಥದಲ್ಲಿ ಹಾದು ಹೋಗಲಿವೆ. ಈ ಬಾರಿ ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ಸಿಕ್ಕಿಲ್ಲ.

2024ರ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ, ರಾಜ್ಯದ 8 ಮಂದಿಗೆ ಪದ್ಮಶ್ರೀ, ಒಬ್ಬರಿಗೆ ಪದ್ಮಭೂಷಣ ಗೌರವ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲಿನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?