ತನ್ನ ಮೂರ್ತಿ​ಯನ್ನು ತಾನೇ ನಿರ್ಮಿ​ಸಿದ ಟಿಎಂಸಿ ಶಾಸ​ಕ!

Published : Mar 15, 2020, 04:33 PM IST
ತನ್ನ ಮೂರ್ತಿ​ಯನ್ನು ತಾನೇ ನಿರ್ಮಿ​ಸಿದ ಟಿಎಂಸಿ ಶಾಸ​ಕ!

ಸಾರಾಂಶ

ತನ್ನ ಮೂರ್ತಿ​ಯನ್ನು ತಾನೇ ನಿರ್ಮಿ​ಸಿದ ಟಿಎಂಸಿ ಶಾಸ​ಕ!| 71 ವರ್ಷದ ದಕ್ಷಿಣ 24 ಪರ​ಗಣ ಜಿಲ್ಲೆಯ ಶಾಸ​ಕ ಜಯಂತ್‌ ನಾಸ್ಕರ್‌ 

ಕೋಲ್ಕತ್ತಾ[ಮಾ.15]: ದೇಶಕ್ಕೆ ಕೊಡುಗೆ ನೀಡಿದ ಮಹಾನ್‌ ನಾಯ​ಕ​ರನ್ನು ಸ್ಮರಿ​ಸಲು ಅಂಥ​ವ​ರ ಪ್ರತಿ​ಮೆ​ಗ​ಳನ್ನು ನಿರ್ಮಿಸುತ್ತೇವೆ. ಆದರೆ, ಪಶ್ಚಿಮ ಬಂಗಾ​ಳ​ದಲ್ಲಿ ಟಿಎಂಸಿ ಶಾಸ​ಕ​ನೊಬ್ಬ ತನ್ನ ಪ್ರತಿ​ಮೆ​ಯನ್ನು ತಾನೇ ನಿರ್ಮಿ​ಸಿ​ಕೊಂಡಿ​ದ್ದಾನೆ.

ಒಂದು ವೇಳೆ ತಾನು ಸಾವ​ನ್ನ​ಪ್ಪಿ​ದ​ರೆ ಮುಂದಿನ ಪೀಳಿ​ಗೆ​ಯ​ವರೂ ತನ್ನನ್ನು ನೆನ​ಪಿ​ನಲ್ಲಿ ಇಟ್ಟು​ಕೊ​ಳ್ಳ​ಬೇಕು ಎಂಬುದು 71 ವರ್ಷದ ದಕ್ಷಿಣ 24 ಪರ​ಗಣ ಜಿಲ್ಲೆಯ ಶಾಸ​ಕ ಜಯಂತ್‌ ನಾಸ್ಕರ್‌ ಅವರ ಮಹ​ದಾಸೆ. ಹೀಗಾಗಿ ಕೋಲ್ಕ​ತಾ​ದಿಂದ ಶಿಲ್ಪಿ​ಗ​ಳನ್ನು ಕರೆ​ತಂದು ತನ್ನಷ್ಟೇ ಗಾತ್ರದ ಎರಡು ಪ್ರತಿ​ಮೆ​ಗ​ಳನ್ನು ನಿರ್ಮಿ​ಸಿಕೊಂಡಿ​ದ್ದಾನೆ.

ತನಗೆ ಹಲವು ವೈರಿ​ಗ​ಳಿ​ದ್ದಾರೆ. ಟಿಎಂಸಿ​ಯಲ್ಲೂ ತನ​ಗೆ ವೈರಿ​ಗ​ಳಿ​ದ್ದಾರೆ. ಒಂದು ವೇಳೆ ನನ್ನನ್ನು ಕೊಲೆ ಮಾಡಿ​ದ​ರೆ ಮುಂದಿ​ನ ಪೀಳಿ​ಗೆ​ಯ​ವರು ಈ ಮೂರ್ತಿ​ಗ​ಳ ಮೂಲಕ ತನ್ನನ್ನು ನೆನ​ಪಿ​ನಲ್ಲಿ ಇಟ್ಟು​ಕೊ​ಳ್ಳು​ತ್ತಾರೆ. ಹೀಗಾಗಿ ಮೂರ್ತಿ​ಗ​ಳನ್ನು ನಿರ್ಮಿ​ಸಿ​ದ್ದೇನೆ ಎಂದು ಜಯಂತ್‌ ಹೇಳಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಪೈರಸಿಗೆ ಕಡಿವಾಣ:ಟೆಲಿಗ್ರಾಂಗೆ ಕೇಂದ್ರ 15 ದಿನಗಳ ಗಡುವು
Badarinath Temple: ಅಯೋಧ್ಯೆ ಬಳಿಕ ಬದರೀನಾಥ ದೇಗುಲದಲ್ಲೂ ಹುಂಡಿ ಅಕ್ರಮ, ತನಿಖೆಗೆ ಆದೇಶ