ಬೆಂಗಳೂರು ಹೈ 'ಟೆಕ್': ಗ್ರಾಹಕನ ಆರ್ಡರ್ ತಲುಪಿಸಲು ಡುಂಜೋ ಬುಕ್ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್!

Published : May 05, 2022, 09:48 PM IST
 ಬೆಂಗಳೂರು ಹೈ 'ಟೆಕ್': ಗ್ರಾಹಕನ ಆರ್ಡರ್ ತಲುಪಿಸಲು ಡುಂಜೋ ಬುಕ್ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್!

ಸಾರಾಂಶ

ಹಾವು ಸಾಯಬಾರದು ಕೋಲು ಮುರಿಯಬಾರದು ಅಂತಾ ಹೇಳೋದು ಇಂಥ ವಿಚಾರಗಳಿಗೆ. ಗ್ರಾಹಕನಿಗೆ ನಿಗದಿತ ಅವಧಿಯಲ್ಲಿ ಆರ್ಡರ್ ತಲುಪಿಸಲು ಸೋಮಾರಿಯಾಗಿದ್ದ ಸ್ವಿಗ್ಗಿಯ ಡೆಲಿವರಿ ಏಜೆಂಟ್, ಗ್ರಾಹಕ ನೀಡುವ ಫೈವ್ ಸ್ಟಾರ್ ರೇಟಿಂಗ್ ಅನ್ನೂ ಕಳೆದುಕೊಳ್ಳಬಾರದು ಎನ್ನುವ ಇರಾದೆಯಲ್ಲಿದ್ದ. ಅದಕ್ಕಾಗಿ ಆತ ಮಾಡಿದ ಪ್ಲ್ಯಾನ್ ಮಾತ್ರ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಬೆಂಗಳೂರು (ಮೇ.5): ಟೆಕ್ನಾಲಜಿಯನ್ನೇ (technology) ಅರೆದು ಕುಡಿದಂತೆ ಆಡುವ ಬೆಂಗಳೂರಿನ (Bengaluru) ಹೈ 'ಟೆಕ್' (High Tech) ಜನರಿಗೆ ಕುರಿತಾದ ಸುದ್ದಿಯಿದು. ಗ್ರಾಹಕನ ಆರ್ಡರ್ ಅನ್ನು ಅವರ ಸ್ಥಳಕ್ಕೆ ತಲುಪಿಸಲು ಸೋಮಾರಿಯಾಗಿದ್ದ ಸ್ವಿಗ್ಗಿಯ ಡೆಲಿವರಿ ಏಜೆಂಟ್ ( Swiggy Delivery Agent), ದಿನಸಿ ಹಾಗೂ ದೈನಂದಿನ ಅಗತ್ಯ ವಸ್ತುಗಳನ್ನು ಮನೆಮನೆಗೆ ಡೆಲಿವರಿ ಮಾಡುವ ಇನ್ನೊಂದು ಕಂಪನಿಯಾದ ಡುಂಜೋ (Dunzo )  ಮೂಲಕ ಗ್ರಾಹಕನ ಆರ್ಡರ್ ಅನ್ನು ತಲುಪಿಸಿದ್ದಾನೆ.

ಭಾರತದ ಟೆಕ್ ಹಬ್ ನ ಕುರಿತಾಗಿ ಇದಕ್ಕಿಂತ ದೊಡ್ಡ ಉದಾಹರಣೆಗಳು ಬೇಕಿಲ್ಲ. ಟ್ವಿಟರ್ ಬಳಕೆದಾರ ಓಂಕಾರ್ ಜೋಶಿ (@omkar__joshi) ಅವರು ಇತ್ತೀಚೆಗೆ ಕಾಫಿಗಾಗಿ ಕಫೆ ಕಾಫಿ ಡೇ ಔಟ್‌ಲೆಟ್‌ನಲ್ಲಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಸ್ನೇಹಿತನೊಂದಿಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ನಂತರ ಈ ಕಥೆ ಬೆಳಕಿಗೆ ಬಂದಿದೆ.

"ನಾನು ಕಫೆ ಕಾಫಿ ಡೇಯಿಂದ ಸ್ವಿಗ್ಗಿಯಲ್ಲಿ ಕಾಫಿಯನ್ನು ಆರ್ಡರ್ ಮಾಡಿದ್ದೇನೆ" ಎಂದು ಓಂಕಾರ್ ಜೋಶಿ ಅವರ ಸ್ನೇಹಿತ ಅವರಿಗೆ ತಿಳಿಸಿದ್ದ. "ಸ್ವಿಗ್ಗಿಯ ಒಬ್ಬ ಡೆಲಿವರಿ ಏಜೆಂಟ್ ಇದನ್ನು ತಲುಪಿಸವ ಆರ್ಡರ್ ಪಡೆದುಕೊಂಡಿದ್ದ. ಆದರೆ, ಇದನ್ನು ಮನೆಯ ತನಕ ತಲುಪಿಸಲು ಆತ ತುಂಬಾ ಸೋಮಾರಿಯಾಗಿದ್ದ' ಎಂದು ಸ್ನೇಹಿತ ಹೇಳಿದ್ದಾನೆ.

ಡೆಲಿವರಿ ಏಜೆಂಟ್ ಆರ್ಡರ್ ಅನ್ನು ತಲುಪಿಸಲು ತುಂಬಾ ಸೋಮಾರಿಯಾಗಿರಬಹುದು. ಆದರೆ, ಆರ್ಡರ್ ಅನ್ನು ತಲುಪಿಸದೇ ಇದ್ದರೆ ಸಮಸ್ಯೆಗೆ ಈಡಾಗುತ್ತೇನೆ ಎನ್ನುವುದು ತಿಳಿದಿತ್ತು ಅದರೊಂದಿಗೆ ಫೈವ್ ಸ್ಟಾರ್ ರೇಟಿಂಗ್ ಅನ್ನು ಕಳೆದುಕೊಳ್ಳುವ ಅಪಾಯವನ್ನೂ ಹೊಂದಿದ್ದ. ಆದ್ದರಿಂದ, ಸ್ವಿಗ್ಗಿಯ ಏಜೆಂಟ್ ಆರ್ಡರ್ ಅನ್ನು ತಲುಪಿಸಲು ಡುಂಜೋ ಡೆಲಿವರಿ ಪಾರ್ಟ್ನರ್ ಅನ್ನು ಬುಕ್ ಮಾಡಿದ್ದಾನೆ.

'ಆತ ಆರ್ಡರ್ ಅನ್ನು ತಲುಪಿಸಲು ತುಂಬಾ ಸೋಮಾರಿಯಾಗಿದ್ದ. ಅದಕ್ಕಾಗಿ ಡುಂಜೋ ಮೂಲಕ ಆರ್ಡರ್ ಅನ್ನು ಕಳುಹಿಸಿಕೊಟ್ಟ' ಎಂದು ಜೋಶಿ ಅವರ ಸ್ನೇಹಿತ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಸ್ವಿಗ್ಗಿಯ ಡೆಲಿವರಿ ಏಜೆಂಟ್ ನಿಂದ ಕರೆ ಕೂಡ ಅವರ ಸ್ವೀಕರಿಸಿದ್ದರು. ನಾನು ನಿಮ್ಮ ಆರ್ಡರ್ ಅನ್ನು ಡುಂಜೋ ಮೂಲಕ ಕಳುಹಿಸಿದ್ದೇನೆ. ನನಗೆ ಸ್ವಿಗ್ಗಿ ಆಪ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ನೀಡಿ' ಎಂದು ವಿನಂತಿಯನ್ನೂ ಮಾಡಿದ್ದಾನೆ.

ಇದನ್ನು ಇಂಟರ್ ನೆಟ್ ನಲ್ಲಿ ಶೇರ್ ಮಾಡಿಕೊಂಡ ಬಳಿಕ, ಓಂಕಾರ್ ಜೋಶಿ ಅವರ ಟ್ವೀಟ್ ಗೆ 4 ಸಾವಿರಕ್ಕೂ ಅಧಿಕ ಲೈಕ್ ಗಳು 400ಕ್ಕಿಂತ ಅಧಿಕ ರೀಟ್ವೀಟ್ ಗಳು ಬಂದಿವೆ. ಅದರೊಂದಿಗೆ ಮಜವಾದ ಕಾಮೆಂಟ್ ಗಳೂ ದಾಖಲಾಗಿವೆ. 

PM MODI REVIEW MEETING ಗೋಧಿ ಪೂರೈಕೆ, ರಫ್ತು, ದಾಸ್ತಾನು ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಪರಿಶೀಲನಾ ಸಭೆ!

ಡುಂಜೋ ಹೈಪರ್-ಲೋಕಲ್ ಡೆಲಿವರಿ ಅಪ್ಲಿಕೇಶನ್ ಆಗಿದ್ದು ಅದು ಬಳಕೆದಾರರನ್ನು ಹತ್ತಿರದ ವಿತರಣಾ ಪಾಲುದಾರರಿಗೆ ಸಂಪರ್ಕಿಸುತ್ತದೆ. ವಿತರಣಾ ಮತ್ತು ಇ-ಕಾಮರ್ಸ್ ಕಂಪನಿಯು ಪ್ಯಾಕೇಜ್‌ಗಳು, ದಿನಸಿಗಳು, ಆಹಾರ, ಔಷಧಗಳು, ಸಾಕುಪ್ರಾಣಿಗಳ ಸರಬರಾಜು ಮತ್ತು ಹೆಚ್ಚಿನವುಗಳ ವಿತರಣೆಯನ್ನು ಒಳಗೊಂಡಿರುವ ಸೇವೆಗಳನ್ನು ನೀಡುತ್ತದೆ.

Trains Cancel ಕಲ್ಲಿದ್ದಲ್ಲು ಸಮಸ್ಯೆಯಿಂದ ಇದುವರೆಗೆ 1,081 ಪ್ರಯಾಣಿಕ ರೈಲು ಸಂಚಾರ ರದ್ದು!

'ನಾನು ಬೆಂಗಳೂರನ್ನು ಇಷ್ಟ ಪಡೋದು ಇದೇ ಕಾರಣಕ್ಕಾಗಿ. ಇಡೀ ನಗರ ಇಂಥ ಜೋಕ್ ಗಳಿಂದಲೇ ತುಂಬಿದೆ' ಎಂದು ಮಿ.ಕ್ರಿಕೆಟ್ ಎನ್ನುವ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. ಬಹುಶಃ ಸಿಲಿಕಾನ್ ವ್ಯಾಲಿನ ಒಂದು ಎಪಿಸೋಡ್ ಕಂಡ ರೀತಿ ಆಗಿದೆ ಎಂದು ರೊನೊಜೋಯ್ ಮಜುಂದಾರ್ ಬರೆದುಕೊಂಡಿದ್ದಾರೆ. ಬಹುಶಃ ಕಫೆ ಕಾಫಿ ಡೇ ಕಾಫಿಯನ್ನು ವೈಯಕ್ತಿಕವಾಗಿ ಹೋಗಿ ಡೆಲಿವರಿ ಮಾಡುವ ಅಗತ್ಯವಿಲ್ಲ ಎಂದು ಆತ ತಿಳಿದುಕೊಂಡ ಕಾರಣಕ್ಕಾಗಿಯೇ ಡುಂಜೋ ಮಾಡಿದ್ದಾನೆ ಎಂದು ಕೋಮಲ್ ಶರ್ಮ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು