
ಹೈದರಾಬಾದ್ (ಜು.26): ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ತೆಲಂಗಾಣದ ರಾಜಧಾನಿ ಭಾರಿ ಮಳೆಯಿಂದ ಮಾತ್ರವಲ್ಲ, ಅಲ್ಲಿನ ಉದ್ಯೋಗಿಗಳು ಟ್ರಾಫಿಕ್ ಜಾಮ್‌ನ ಕಾರಣದಿಂದಾಗಿಯೂ ನಿತ್ಯನರಕ ಅನುಭವಿಸುತ್ತಿದ್ದಾರೆ. ರಾಜಧಾನಿಯ ಹಲವು ಭಾಗಗಳಲ್ಲಿ ಸಂಜೆಯಾಯಿತೆಂದರೆ ಸಾಕು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತದೆ. ಈಗ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಹೊಸ ಆಲೋಚನೆಯನ್ನು ಐಟಿ ಕಂಪನಿಗಳ ಮುಂದೆ ಇಟ್ಟಿದ್ದಾರೆ. ಅದರಂತೆ ಟ್ರಾಫಿಕ್ ಜಾಮ್ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಹಂತಹಂತವಾಗಿ ಲಾಗ್‌ಔಟ್ ಆಗಲು ಸೂಚನೆ ನೀಡುವಂತೆ ಮನವಿ ಮಾಡಿದೆ. ಇಲ್ಲಿಯವರೆಗೂ ಸೈಬರಾಬಾದ್‌ನಲ್ಲಿ ಹೆಚ್ಚಿನ ಕಂಪನಿಗಳ ಉದ್ಯೋಗಿಗಳು ಸಂಜೆ 5 ಅಥವಾ 6 ಗಂಟೆ ಆಯಿತೆಂದರೆ ಲಾಗ್‌ಔಟ್ ಮಾಡುತ್ತಿದ್ದರು. ಇದರಿಂದಾಗಿ ಒಂದೇ ಸಮಯಕ್ಕೆ ರಸ್ತೆಯಲ್ಲಿ ಸಾವಿರಾರು ವಾಹನಗಳು ಬರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಆದರೆ, ಹಂತಹಂತವಾಗಿ ಲಾಗ್‌ಔಟ್ ಆಗುವುದರಿಂದ ಸಂಜೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಇರೋದಿಲ್ಲ. ಮೂರು ಹಂತಗಳಲ್ಲಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುವಂತೆ ಪೊಲೀಸರು ಕಂಪನಿಗಳಿಗೆ ಸೂಚಿಸಿದ್ದಾರೆ.
ಹಂತ-1: 1: ಐಕಿಯಾದಿಂದ ಸೈಬರ್ ಟವರ್ಸ್ ರಸ್ತೆಯಲ್ಲಿರುವ ಕಂಪನಿಗಳು ಮಧ್ಯಾಹ್ನ 3 ಗಂಟೆಗೆ ಲಾಗ್ ಔಟ್
ಐಕಿಯಾದಿಂದ ಸೈಬರ್ ಟವರ್ಸ್ ರಸ್ತೆಯ ನಡುವೆ ಟಿಸಿಎಸ್, ಟೆಕ್ ಮಹೀಂದ್ರಾ, ಕ್ವಾಲ್ಕಂ, ಒರಾಕಲ್, ಡೆಲ್ ಮತ್ತು ಎಚ್‌ಎಸ್‌ಬಿಸಿ ಮತ್ತು ರಹೇಜಾ ಮೈಂಡ್‌ಸ್ಪೇಸ್, ಫೀನಿಕ್ಸ್ ಮಾದಾಪುರ ಮತ್ತು ಕೊಂಡಾಪುರ ಅವಾನ್ಸ್‌ನಲ್ಲಿರುವ ಕಂಪನಿಗಳು ಮತ್ತು ಪೂರ್ವ ಶೃಂಗಸಭೆ, ವಾಟರ್‌ಮಾರ್ಕ್ ಕಂಪನಿಗಳಿವೆ. ಈ ಕಂಪನಿಯ ಉದ್ಯೋಗಿಗಳು ಮಧ್ಯಾಹ್ನ 3 ಗಂಟೆಯ ವೇಳೆಗೆ ತಮ್ಮ ಕೆಲಸ ಮುಗಿಸಲಿದ್ದಾರೆ.
ಹಂತ-2: ಐಕಿಯಾ ಮತ್ತು ಸುತ್ತಮುತ್ತಲಿನ ಕಂಪನಿಗಳು ಸಂಜೆ 4:30 ಕ್ಕೆ ಲಾಗ್ ಔಟ್
ಬಯೋ ಡೈವರ್ಸಿಟಿ ಮತ್ತು ರಾಯದುರ್ಗಂ ಬಳಿ ಇರುವ ಕಂಪನಿಗಳು ನಾಲೆಡ್ಜ್ ಸಿಟಿ, ನಾಲೆಡ್ಜ್ ಪಾರ್ಕ್, ಟಿ ಹಬ್, ಮತ್ತು ಗ್ಯಾಲಕ್ಸಿ, ಎಲ್‌ಟಿಐ & Twitza, COMmerzone, ಆರ್‌ಎಂಝಡ್ ನೆಕ್ಸ್ಟಿ, ಸ್ಕೈವೀವ್ 10 & 20, ದಿವ್ಯಶ್ರೀ ಓರಿಯಾನ್ ಮತ್ತು Ascendas ನಲ್ಲಿರುವ ಕಂಪನಿಗಳು ಸಂಜೆ 4.30ರ ವೇಳೆಗೆ ಲಾಗ್ ಔಟ್ ಆಗಬೇಕು.
ಹಂತ 3: ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಮತ್ತು ಗಚಿಬೌಲಿಯಲ್ಲಿರುವ ಕಂಪನಿಗಳು ಮಧ್ಯಾಹ್ನ 3 ರಿಂದ 6ರ ಸಮಯದಲ್ಲಿ ಲಾಗ್‌ಔಟ್
ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಮತ್ತು ಗಚಿಬೌಲಿಯಲ್ಲಿರುವ ಕಂಪನಿಗಳಾದ ಮೈಕ್ರೋಸಾಫ್ಟ್, ಇನ್ಫೋಸಿಸ್, ವಿಪ್ರೋ, ಸೆಂಟಾರಸ್, ಬ್ರಾಡ್ವೇ, ವರ್ಚುಸಾ, ಐಸಿಐಸಿ, ಅಮೆಜಾನ್, ಹನಿವೆಲ್, ಹಿಟಾಚಿ, ಸತ್ವ ಕ್ಯಾಪಿಟಲ್, ಕ್ಯಾಪ್ ಜೆಮಿನಿ, ಫ್ರಾಂಕ್ಲಿನ್ ಟೆಂಪಲ್ಟನ್, ಮತ್ತು ಜಿಎಆರ್, ಕ್ಯೂ ಸಿಟಿ, ಡಿಎಲ್‌ಎಫ್ ಮತ್ತು ಈ ಪ್ರದೇಶದಲ್ಲಿರುವ ಇತರ ಐಟಿ ಪಾರ್ಕ್‌ಗಳಲ್ಲಿರುವ ಎಲ್ಲಾ ಕಂಪನಿಗಳ ಉದ್ಯೋಗಿಗಳು ಮಧ್ಯಾಹ್ನ 3 ರಿಂದ 6ರ ಸಮಯದಲ್ಲಿ ಲಾಗ್‌ಔಟ್ ಆಗಬೇಕು.
ಬಿಜೆಪಿ ಸರ್ಕಾರ ಅಮಾಯಕರ ಮೇಲೆ ಕೇಸ್ ಹಾಕಿದೆ: ಡಿಸಿಎಂ ಡಿಕೆ ಶಿವಕುಮಾರ್
ಹೆಚ್ಚಿನ ಕಂಪನಿಗಳು ಸುತ್ತೋಲೆಯಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಲು ಒಪ್ಪಿಕೊಂಡಿವೆ ಮತ್ತು ಟ್ರಾಫಿಕ್ ಪೊಲೀಸರು ನೀಡಿದ ಸಮಯದ ಪ್ರಕಾರ ಲಾಗ್‌ಔಟ್ ಅನ್ನು ನಿಗದಿಪಡಿಸುತ್ತವೆ ಎಂದು ವರದಿಯಾಗಿದೆ. ಹೈದರಾಬಾದ್‌ನ ನಿವಾಸಿಗಳು ಸೋಮವಾರ ಸಂಜೆ ಭಾರೀ ಮಳೆಯ ನಂತರ ಐಕಿಯಾ, ಹೈಟೆಕ್ ಸಿಟಿ ಮತ್ತು ಇತರ ಭಾಗಗಳ ಬಳಿ ಭಾರಿ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್ ಜಾಥಾದಲ್ಲಿ ಘೋಷಣೆ!
ಹೈದರಾಬಾದ್ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಜುಲೈ 27 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಸಮಯದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಸೈಬರಾಬಾದ್ ಪೊಲೀಸರು ಹಂತ ಹಂತವಾಗಿ ಲಾಗ್ ಔಟ್ ಮಾಡಲು ಯೋಜಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ