'ಶ್ರೀರಾಮ ಬಿಪಿಎಲ್‌ ಕಾರ್ಡ್‌ ಹೋಲ್ಡರ್‌..' ರಾಮಮಂದಿರ ಲೇವಡಿ ಮಾಡಿದ ಇಂಡಿಯಾ ಮೈತ್ರಿ ನಾಯಕಿ!

By Santosh Naik  |  First Published Jan 13, 2024, 5:42 PM IST

ರಾಮನಿಗೆ ಮಾತ್ರವಲ್ಲ, ರಾಮನ ಮಕ್ಕಳಾದ ಲವ-ಕುಶರಿಗೂ ಬಿಜೆಪಿ ಒಂದೊಂದು ಮನೆ ನೀಡಿದರೆ ಅವರ ಕೆಲ ಸಂಪೂರ್ನವಾಗುತ್ತದೆ ಎಂದು ಇಂಡಿ ಮೈತ್ರಿಯ ಭಾಗವಾಗಿರುವ ಟಿಎಂಸಿ ಸಂಸದೆ ಶತಾಬ್ದಿ ರಾಯ್‌ ಲೇವಡಿ ಮಾಡಿದ್ದಾರೆ.


ನವದೆಹಲಿ (ಜ.13): ಹಿಂದುಗಳ ಆರಾಧ್ಯದೈವವಾಗಿರುವ ಶ್ರೀರಾಮನ ಮೇಲೆ ಇಂಡಿ ಮೈತ್ರಿಯ ನಾಯಕರ ಟೀಕೆ ಮುಂದುವರಿಯುತ್ತಿದೆ. ಶನಿವಾರ ಇಂಡಿಯಾ ಮೈತ್ರಿಯ ಭಾಗವಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ ಸಂಸದೆ ಶತಾಬ್ದಿ ರಾಯ್‌ ಶ್ರೀರಾಮನ ಬಗ್ಗೆ ವಿವಾದಿತ ಮಾತನಾಡಿದ್ದಾರೆ. ಭಗವಾನ್‌ ರಾಮ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕಾರ್ಡ್‌ ಹೊಂದಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯ ಮೇಲೆ ಟೀಕೆ ಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿರುವ ವಿಡಿಯೋದಲ್ಲಿ ಲೋಕಸಭಾ ಸಂಸದೆಯಾಗಿರುವ ಶತಾಬ್ದಿ ರಾಯ್‌, ಬಿಜೆಪಿ ತಾನು ಭಗವಾನ್‌ ರಾಮನಿಗೆ ಮನೆಯನ್ನು ನೀಡಿದ್ದಾಗಿ ಹೇಳಿಕೊಳ್ಳುತ್ತಿದೆ. ಇದನ್ನು ಕೇಳಿ ನನಗೆ ಆಘಾತವಾಯಿತು. ರಾಮನಿಗೆ ಮನೆಯನ್ನು ನೀಡುವಷ್ಟು  ಶಕ್ತಿ ಬಿಜೆಪಿಯವರಿಗೆ ಬಂದಿದೆ. ಬಹುಶಃ ರಾಮ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕಾರ್ಡ್‌ ಹೊಂದಿರಬೇಕು. ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮನೆಗಳು ನೀಡುತ್ತಿರುವಂತೆ, ಬಿಜೆಪಿ ಕೂಡ  ಶ್ರೀರಾಮನಿಗೆ ಬಿಪಿಎಲ್‌ ಕಾರ್ಡ್‌ನ ಅಡಿಯಲ್ಲಿಯೇ ಮನೆಯನ್ನು ನೀಡಿದೆ' ಎಂದು ಹೇಳಿದ್ದಾರೆ.

ಬಹುಶಃ ಇದೇ ರೀತಿಯ ಮನೆಗಳನ್ನು ರಾಮನ ಮಕ್ಕಳಾದ ಲವ ಹಾಗೂ ಕುಶರಿಗೆ ನೀಡಿದ್ದರೆ, ಅವರ ಕೆಲಸ ಸಂಪೂರ್ಣವಾಗುತ್ತಿತ್ತು ಎಂದು ತೃಣಮೂಲ ಕಾಂಗ್ರೆಸ್‌ ನಾಯಕಿ ಶ್ರೀರಾಮ ಮಂದಿರವನ್ನು ಲೇವಡಿ ಮಾಡಿದ್ದಾರೆ.

ಶತಾಬ್ದಿ ರಾಯ್‌ ಮಾತನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಶಕುಂತಾ ಮಜುಂದಾರ್‌, ' ಪ್ರಭು ಶ್ರೀರಾಮನ ಕುರಿತಾಗಿ ಶತಾಬ್ದಿ ರಾಯ್‌ ಅವರ ಹೇಳಿಕೆಗಳು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಹಿಂದೂ ಧರ್ಮ ಹಾಗೂ ನಮ್ಮಲ್ಲಿರುವ ಆಳವಾದ ನಂಬಿಕೆಗಳ ಕುರಿತಾಗಿ ಇರುವ ತಾತ್ಸಾರವನ್ನು ತೋರಿಸಿದೆ. ಇದು ವಿಶ್ವದಲ್ಲಿರುವ ಎಲ್ಲಾ ಹಿಂದೂಗಳಿಗೂ ಅವಮಾನ' ಎಂದಿದ್ದಾರೆ.

'ಗಾಂಧಿ ಕುಟುಂಬಕ್ಕಿದೆ ಗೋಪಾಷ್ಟಮಿ ಶಾಪ..' ಅನಂತ್‌ ಕುಮಾರ್‌ ಹೆಗಡೆ ಮಾತಿನ ಅಸಲಿಯತ್ತೇನು?

Tap to resize

Latest Videos

ಭಗವಾನ್‌ ಶ್ರೀರಾಮನ ಕುರಿತಾಗಿ ತೃಣಮೂಲಕ ಕಾಂಗ್ರೆಸ್‌ ವಿವಾದಿತ ಮಾತನಾಡಿದ್ದು ಇದು ಮೊದಲೇನಲ್ಲ. 2020ರ ನವೆಂಬರ್‌ನಲ್ಲಿ ಟಿಎಂಸಿ ನಾಯಕರೊಬ್ಬರು ಹಿಂದುಗಳು ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್‌ ಎನ್ನುವ ಘೋಷಣೆ ಕೂಗಬಾರದು ಎಂದು ಹೇಳಿದ್ದ ವಿಡಿಯೋ ವೈರಲ್‌ ಆಗಿತ್ತು. ಭಗವಾನ್‌ ರಾಮನ ಕುರಿತಾಗಿ ಟಿಎಂಸಿಯ ಇಂಥ ಮಾತುಗಳು ಈಗೇನೂ ಗೌಪ್ಯವಾಗಿ ಉಳಿದಿಲ್ಲ. 2019ರ ಮೇ ತಿಂಗಳಲ್ಲಿ, ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದ ವೇಳೆ ಸಿಟ್ಟಾಗಿದ್ದರು. ಆ ಘೋಷಣೆಯನ್ನು ಕೂಗುತ್ತಿರುವವರು ಕ್ರಿಮಿನಲ್‌ಗಳು ಎಂದಿದ್ದ ಆಕೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲಿಯೇ ಸಿಎಂ ಎದುರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದ 12ಕ್ಕೂ ಅಧಿಕ ವ್ಯಕ್ತಿಗಳನ್ನು ಬಂಧಿಸಲಾಗಿತ್ತು.

ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳು: ಅನಂತ್‌ ಕುಮಾರ್‌ ಹೆಗಡೆ

click me!