
ಹರ್ಯಾಣ(ಜ.13) ಅಚ್ಚರಿಯಾದರೂ ಸತ್ಯ. 80 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಮೃತದೇಹ ಸಾಗಿಸಲಾಗಿದೆ. ಆದರೆ ಆ್ಯಂಬುಲೆನ್ಸ್ ರಸ್ತೆ ಗುಂಡಿಗೆ ಬಡಿದಿದೆ. ಇದರಿಂದ ಒಂದೇ ಬಾರಿ ಆ್ಯಂಬುಲೆನ್ಸ್ ಮೇಲಕ್ಕೆ ಜಿಗಿದಿದೆ. ಇದರ ಬೆನ್ನಲ್ಲೇ ಪವಾಡವೊಂದು ನಡೆದಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ಮತವ್ಯಕ್ತಿಗೆ ಮರುಜೀವ ಸಿಕ್ಕಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
80 ವರ್ಷದ ದರ್ಶನ್ ಸಿಂಗ್ ಬ್ರಾರ್ ವಯೋಸಹದ ಆರೋಗ್ಯ ಸಮಸ್ಯೆಯಿಂದ ತೀವ್ರವಾಗಿ ಬಳಲಿದ್ದಾರೆ. ಹೀಗಾಗಿ ಕುಟುಂಬಸ್ಥರು ತಮ್ಮ ಕರ್ನಲ್ ಗ್ರಾಮದಿಂದ 100 ಕಿಲೋಮೀಟರ್ ದೂರದ ಪಟಿಯಾಲಾದಲ್ಲಿನ ಅತ್ಯುತ್ತಮ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದರ್ಶನ್ ಸಿಂಗ್ ಬ್ರಾರ್ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ನಾಲ್ಕು ದಿನಗಳ ಹಿಂದೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿದೆ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗಿ ದರ್ಶನ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಆಸ್ಪ್ರೆ ವೈದ್ಯರು ದೃಢಪಡಿಸಿದ್ದಾರೆ.
Chitradurga: ರಾಯರ ಮಠದಲ್ಲಿ ನಡೀತು ಪವಾಡ..! ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಬಂತು ಮರು ಜೀವ..!
ಆಸ್ಪತ್ರೆಯಲ್ಲಿದ್ದ ಮೊಮ್ಮಗ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಇತ್ತ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇತ್ತ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ 100 ಕಿ.ಮೀ ದೂರದಲ್ಲಿರುವ ಮನೆಗೆ ಮೃದೇಹ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಮೃತದೇಹದ ಜೊತೆಗೆ ದರ್ಶನ್ ಸಿಂಗ್ ಬ್ರಾರ್ ಮೊಮ್ಮಗ ಕುಳಿತು ಪ್ರಯಾಣ ಆರಂಭಿಸಿದ್ದಾನೆ.
ಹರ್ಯಾಣದ ಧಂದ್ ಗ್ರಾಮಕ್ಕೆ ಬರುತ್ತಿದ್ದಂತೆ ಹಾಳಾದ ರಸ್ತೆ ಎದುರಾಗಿದೆ. ಸಣ್ಣ ಸಣ್ಣ ಗುಂಡಿ ಬಿದ್ದ ರಸ್ತೆ ಮೂಲಕ ಆ್ಯಂಬುಲೆನ್ಸ್ ಸಾಗಿದೆ. ಆದರೆ ದಿಡೀರ್ ಆಗಿ ದೊಡ್ಡ ರಸ್ತೆ ಗುಂಡಿ ಮೇಲಿಂದ ಆ್ಯಂಬುಲೆನ್ಸ್ ಸಾಗಿದೆ. ಇದರಿಂದ ಒಮ್ಮೆಲ್ಲೇ ಆ್ಯಂಬುಲೆನ್ಸ್ ಮೇಲಕ್ಕೆ ಜಿಗಿದಿದೆ. ಆಂಬ್ಯುಲೆನ್ಸ್ ಒಳಗೆ ಅಲ್ಲೋಲಕಲ್ಲೋಲವಾಗಿದೆ. ಗುಂಡಿಗೆ ಬಿದ್ದು ಮೇಲಕ್ಕೆ ಜಿಗಿದ ಬಳಿಕ ಆ್ಯಂಬುಲೆನ್ಸ್ ಪ್ರಯಾಣ ಮುಂದುವರಿದೆ.
ಆದರೆ ಈ ಗುಂಡಿಯ ಹೊಡೆತಕ್ಕೆ ಮೃತಪಟ್ಟ ದರ್ಶನ್ ಸಿಂಗ್ ಮೃತದೇಹ ಒಮ್ಮಲೆ ಮೇಲಕ್ಕೆ ಜಿಗಿದಿದೆ. ಈ ವೇಳೆ ಮೊಮ್ಮಗ ಗಟ್ಟಿಯಾಗಿ ಹಿಡಿದು ಬೀಳದಂತೆ ನೋಡಿಕೊಂಡಿದ್ದಾರೆ. ಇದಾದ ಮರುಕ್ಷಣದಲ್ಲೇ ದರ್ಶನ್ ಸಿಂಗ್ ಬ್ರಾರ್ ಕೈಗಳು ಚಲಿಸಲು ಆರಂಭಿಸಿದೆ. ಉಸಿರಾಟ, ಎದಬೆಡಿತ ಕಾಣಿಸಿಕೊಂಡಿದೆ. ತಕ್ಷಣವೇ ಆ್ಯಂಬುಲೆನ್ಸ್ ಚಾಲನಕಲ್ಲಿನ ಹತ್ತಿದರ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾನೆ.
ಸತ್ತ ಆರು ದಿನಗಳ ನಂತ್ರ ಬದುಕಿ ಬಂದ ಮಹಿಳೆ ಹೇಳಿದ್ದೇನು?
ತಕ್ಷಣವೇ ಸ್ಥಳೀಯ ಆಸ್ಪತ್ರೆ ದರ್ಶನ್ ಸಿಂಗ್ ಬ್ರಾರ್ ಅವರನ್ನು ದಾಖಲಿಸಿದ್ದಾರೆ. ಇದೀಗ ದರ್ಶನ್ ಸಿಂಗ್ ಬ್ರಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕುಟುಂಬಸ್ಥರು ದರ್ಶನ್ ಸಿಂಗ್ ಬ್ರಾರ್ ಶೀಘ್ರದಲ್ಲೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಡೀ ಕುಟುಂಬ ದುಃಖಲ್ಲಿತ್ತು.ಬಹುತೇಕ ಸದಸ್ಯರು ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಎಲ್ಲರೂ ಸಂತಸಗೊಂಡಿದ್ದಾರೆ. ಇದೀಗ ದರ್ಶನ್ ಸಿಂಗ್ ಬ್ರಾರ್ ಗುಣಮುಖರಾಗಲು ಕುಟುಂಬ ಸದಸ್ಯರು ಪ್ರಾರ್ಥಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ