ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಉಪರಾಷ್ಟ್ರಪತಿಯ ಅವಮಾನದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ವಿಶಿಷ್ಟ ಪ್ರತಿಭಟನೆ ಎನ್ನುವ ರೀತಿಯಲ್ಲಿ ಎನ್‌ಡಿಎ ಸಂಸದರು ಒಂದು ಗಂಟೆ ಕಾಲ ಸಂಸತ್ ಕಲಾಪದಲ್ಲಿ ನಿಂತುಕೊಂಡೇ ಭಾಗವಹಿಸಿದ್ದರು. ಧನ್‌ಕರ್ ಪ್ರಕರಣದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.
ನವದೆಹಲಿ (ಡಿ.20): ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಉಪರಾಷ್ಟ್ರಪತಿಯ ಅವಮಾನದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಕಲಾಪದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ. ಜಗದೀಪ್ ಧನಕರ್‌ಗೆ ಅವಮಾನ ಮಾಡಿದ ಬಿಜೆಪಿ ಸದಸ್ಯರು ಒಂದು ಗಂಟೆ ಕಾಲ ನಿಂತು ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸಿದ್ದರು. ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಜಾಟ್ ಸಮುದಾಯದ ರೈತನ ಮಗನಿಗೆ ಈ ದೊಡ್ಡ ಸಾಂವಿಧಾನಿಕ ಹುದ್ದೆ ಸಿಕ್ಕಿದೆ. ಇದನ್ನು ತಾಳಲಾರದೆ ವಿರೋಧ ಪಕ್ಷಗಳು ಅವರಿಗೆ ಅವಮಾನ ಮಾಡಿವೆ ಎಂದು ಬಿಜೆಪಿ ಟೀಕಿಸಿದೆ.
ಇದು ರೈತರು ಮತ್ತು ಜಾಟ್ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಪ್ರತಿಪಕ್ಷಗಳು ಮೊದಲು ಪ್ರಧಾನಿಯನ್ನು ಅವಮಾನಿಸಿದವು. ಇದೀಗ ಉಪರಾಷ್ಟ್ರಪತಿಗೆ ಅವಮಾನ ಮಾಡಲಾಗಿದೆ. ಉಪರಾಷ್ಟ್ರಪತಿಯ ಅವಮಾನವನ್ನು ಭಾರತ ಸಹಿಸುವುದಿಲ್ಲ. ಇದು ಪ್ರತಿಪಕ್ಷಗಳ ಅಧಃಪತನದ ಹೊಸ ಹಂತವಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಜೋಶಿ ಹೇಳಿದರು. ಈ ಜನರು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಜನರನ್ನು ಅವಮಾನಿಸುತ್ತಾರೆ. ಪ್ರಧಾನಿಯವರನ್ನೂ ಅವಮಾನಿಸುತ್ತಾರೆ. ಏಕೆಂದರೆ ಅವರೆಲ್ಲರೂ ಬಡ ಹಿನ್ನೆಲೆಯಿಂದ ಬಂದವರು. ನಿಮ್ಮನ್ನೂ ಕೂಡ ಅವಮಾನಿಸಿದ್ದಾರೆ. ನೀವು ರೈತ ಹಿನ್ನೆಲೆಯಿಂದ ಬಂದವರು. ಉಪರಾಷ್ಟ್ರಪತಿಯ ಅವಮಾನವನ್ನು ಭಾರತ ಸಹಿಸುವುದಿಲ್ಲ. ನಿಮಗೆ ಗೌರವವಿದೆ ಮತ್ತು ನಾವು (ಎನ್‌ಡಿಎ ಸಂಸದರು) ಅವರ ವಿರುದ್ಧ ನಿಲ್ಲುತ್ತೇವೆ ಮತ್ತು ಸಂಸತ್ತಿನ ಕಲಾಪದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
'ನನ್ನ ಜಾತಿಗೆ ಅವಮಾನ ಮಾಡಿದೆ': ಇದೇ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಾತನಾಡಿ, ನನ್ನ ಬಗ್ಗೆ ನನಗೇನೂ ಕಾಳಜಿ ಇಲ್ಲ, ಇದನ್ನು ನಾನು ಸಹಿಸಿಕೊಳ್ಳಬಲ್ಲೆ. ಆದರೆ ಕುರ್ಚಿಗೆ ಅಗೌರವ ತೋರುವುದನ್ನು ನಾನು ಸಹಿಸುವುದಿಲ್ಲ. ಈ ಕುರ್ಚಿಯ ಘನತೆ ಕಾಪಾಡುವುದು ನನ್ನ ಜವಾಬ್ದಾರಿ. ನನ್ನ ಜಾತಿ, ನನ್ನ ಹಿನ್ನೆಲೆ, ಈ ಕುರ್ಚಿಗೆ ಅವಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಿಮಿಕ್ರಿ ಒಂದು ಕಲೆ: ಇನ್ನು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಉಪಾಧ್ಯಕ್ಷ ಧನ್‌ಕರ್ ಮಿಮಿಕ್ರಿ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಲ್ಯಾಣ್ ಮುಖರ್ಜಿ ಮಾತನಾಡಿ, ಉಪರಾಷ್ಟ್ರಪತಿ ಬಗ್ಗೆ ನನಗೆ ಅಪಾರ ಗೌರವವಿದೆ. ಮಿಮಿಕ್ರಿ ಒಂದು ಕಲೆ. ಪ್ರಧಾನಿಯೂ ಮಿಮಿಕ್ರಿ ಮಾಡಿದರು. ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ...ರಾಜ್ಯಸಭೆಯಲ್ಲಿ ಅವರು ಈ ರೀತಿ ವರ್ತಿಸುತ್ತಾರಾ? 2014-2019ರ ನಡುವೆ ಲೋಕಸಭೆಯಲ್ಲಿ ಪ್ರಧಾನಿಯವರು ಮಿಮಿಕ್ರಿ ಮಾಡಿದ್ದಾರೆ. ಕ್ಷಮೆ ಕೇಳುತ್ತೀರಾ ಎನ್ನುವ ಪ್ರಶ್ನೆಗೆ ಅವರು 'ಇಲ್ಲ' ಎಂದು ಹೇಳಿದ್ದಾರೆ.
ಧನ್‌ಕರ್ ಅವರನ್ನು ಗೇಲಿ ಮಾಡಿದ ಟಿಎಂಸಿ ನಾಯಕ: ಈ ಘಟನೆ ಮಂಗಳವಾರ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಯ ಸಮಯದಲ್ಲಿ ಮಾಡಲಾಗಿದೆ. ಆಗ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ, ಧನ್‌ಕರ್ ಅವರನ್ನು ಗೇಲಿ ಮಾಡುವ ಮೂಲಕ ಮಿಮಿಕ್ರಿ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಸಂಪೂರ್ಣ ಘಟನೆಯ ವಿಡಿಯೋ ಮಾಡಿದ್ದರು.
ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗೆ ಅವಮಾನ : ವೀಡಿಯೋ ಮಾಡಿ ಪ್ರೋತ್ಸಾಹಿಸಿದ ರಾಹುಲ್ ಗಾಂಧಿ
'ಟಿಎಂಸಿ ಸಂಸದ (ಕಲ್ಯಾಣ್ ಬ್ಯಾನರ್ಜಿ) ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಭಾರತದಾದ್ಯಂತ ಲಕ್ಷಾಂತರ ರೈತರ ಕ್ಷಮೆಯಾಚಿಸಬೇಕು, ಅಥವಾ ನಾವು ಇಂದು ದೊಡ್ಡ ಸಭೆಯನ್ನು ಕರೆದು ಟಿಎಂಸಿ ವಿರುದ್ಧ ಪ್ರತಿಭಟಿಸುತ್ತೇವೆ. ನಾವು ಮಾತನಾಡಬೇಕಾಗಿ ಬಂದಿರುವುದು ದುರದೃಷ್ಟಕರ. ಕಾಂಗ್ರೆಸ್, ವಿಶೇಷವಾಗಿ ರಾಹುಲ್ ಗಾಂಧಿ, ಇಡೀ ಪರಿಸ್ಥಿತಿಯ ಬಗ್ಗೆ ಅವರ ದೃಷ್ಟಿಕೋನವು ಅತ್ಯಂತ ವೃತ್ತಿಪರವಲ್ಲದ ಮತ್ತು ಹಾಸ್ಯಾಸ್ಪದವಾಗಿತ್ತು ... ನಮ್ಮ ಏಕೈಕ ಬೇಡಿಕೆ ಎಂದರೆ ನಾವು ರೈತ ಕುಟುಂಬದ ಅವಮಾನವನ್ನು ಸಹಿಸುವುದಿಲ್ಲ' ಎಂದು ಪಾಲಂ 360 ಖಾಪ್ ಪ್ರಧಾನ್‌ನ ಚೌಧರು ಸುರೇಂದರ್ ಸೋಲಂಕಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ 30 ನಿಮಿಷದ ನಮಾಜ್ ಬ್ರೇಕ್ ರದ್ದು ಮಾಡಿದ ಚೇರ್ಮನ್ ಜಗದೀಪ್ ಧನ್‌ಕರ್!