
ಕೋಲ್ಕತ್ತಾ (ನ.26): 2026 ರ ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರ ಮಾಡಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಇನ್ನಷ್ಟು ಅಸ್ತ್ರಗಳನ್ನು ನೀಡುತ್ತಿರುವ ಟಿಎಂಸಿ ಶಾಸಕ ಹುಮಾಯೂನ್ ಕಬೀರ್, ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ "ಬಾಬರಿ ಮಸೀದಿ"ಯ ಅಡಿಪಾಯ ಹಾಕಲಾಗುವುದು ಎಂದು ಮಂಗಳವಾರ ಪುನರುಚ್ಚರಿಸಿದ್ದಾರೆ. 1992ರ ಡಿಸೆಂಬರ್ 6 ರಂದು ಕರಸೇವಕರು ಅಯೋಧ್ಯೆಯಲ್ಲಿ ವಿವಾದಿತ ಬಾಬರಿ ಮಸೀದಿ ರಚನೆಯನ್ನು ಕೆಡವಿದ 33 ನೇ ವಾರ್ಷಿಕೋತ್ಸವವಾಗಿದೆ. ಕಬೀರ್ ಅವರ ಹೇಳಿಕೆಯು ಪಶ್ಚಿಮ ಬಂಗಾಳದಾದ್ಯಂತ ತೀಕ್ಷ್ಣವಾದ ರಾಜಕೀಯ ಟೀಕೆಗಳನ್ನು ಹುಟ್ಟುಹಾಕಿದೆ.
"ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಪಾಯ ಹಾಕುತ್ತೇವೆ" ಎಂದು ಕಬೀರ್ ಘೋಷಣೆ ಮಾಡಿದ್ದಾರೆ. ಮೂರು ವರ್ಷಗಳಲ್ಲಿ ಮಸೀದಿಯನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಟಿಎಂಸಿ ಮುಖಂಡರು ಹೇಳಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ನಾಯಕರು ಭಾಗವಹಿಸಲಿದ್ದಾರೆ' ಎಂದು ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಿಎಂಸಿ ಶಾಸಕನ ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಪ್ರತಿಕ್ರಿಯೆ ನೀಡಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಶಾಸಕರ ಘೋಷಣೆಯನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದರು.
ಈ ಯೋಜನೆಯನ್ನು "ಟಿಎಂಸಿಯ ಓಲೈಕೆಯ ಪ್ರೋ ಮ್ಯಾಕ್ಸ್ ಪಾಲಿಟಿಕ್ಸ್" ಎಂದು ಕರೆದ ಪೂನವಾಲ್ಲಾ, ಈ ಹೇಳಿಕೆಗಳು ಮತಬ್ಯಾಂಕ್ ತಂತ್ರವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಟಿಎಂಸಿ ನಾಯಕತ್ವವು ಚುನಾವಣಾ ಲಾಭಕ್ಕಾಗಿ ಹಿಂದೂಗಳ ವಿರುದ್ಧ ನಿಂದನೀಯ ಮಾತುಗಳನ್ನು ಬೆಂಬಲಿಸುತ್ತದೆ ಎಂದು ಅವರು ಆರೋಪಿಸಿದರು.
"ಇದು ಟಿಎಂಸಿಯ ಓಲೈಕೆಯ ಪ್ರೋ ಮ್ಯಾಕ್ಸ್ ಪಾಲಿಟಿಕ್ಸ್. ಟಿಎಂಸಿ ಈಗ 'ತುಷ್ಟಿಕರಣ್ ಮುಜೆ ಚಾಹಿಯೇ' ಎಂದರ್ಥ. ಹಿಂದೂಗಳನ್ನು ಕತ್ತರಿಸಿ ಭಾಗೀರಥಕ್ಕೆ ಎಸೆಯುತ್ತೇನೆ ಎಂದು ಹೇಳಿದ್ದ ವಿವಾದಾತ್ಮಕ ವ್ಯಕ್ತಿ ಹುಮಾಯೂನ್ ಕಬೀರ್, ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಆತನ ಫಿಲಾಸಫಿ ಏನೆಂದರೆ, ಹಿಂದೂಗಳಿಗೆ ಗಾಲಿ ನೀಡಿ ಮತ್ತು ಮತ ಬ್ಯಾಂಕ್ ಕಿ ತಾಲಿ ತೆಗೆದುಕೊಳ್ಳಿ (ಮತ ಬ್ಯಾಂಕ್ ಪಡೆಯಲು ಹಿಂದೂಗಳನ್ನು ನಿಂದಿಸಿ)" ಎಂದು ಪೂನಾವಾಲ್ಲಾ ಹೇಳಿದರು.
ಆದರೆ, ಕಬೀರ್ ಅವರ ಹೇಳಿಕೆಗಳನ್ನು ಪಕ್ಷವು ಅನುಮೋದಿಸುವುದಿಲ್ಲ ಎಂದು ಟಿಎಂಸಿಯ ಉತ್ತರ 24 ಪರಗಣ ಶಾಸಕ ನಿರ್ಮಲ್ ಘೋಷ್ ಸ್ಪಷ್ಟಪಡಿಸಿದ್ದಾರೆ. "ಅವರು (ಹುಮಾಯೂನ್ ಕಬೀರ್) ಪಕ್ಷದೊಂದಿಗೆ ಸಂಪರ್ಕದಲ್ಲಿಲ್ಲ. ಅವರ ಭಾಷಣಗಳಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವು ಅವರ ಸ್ವಂತ ಹೇಳಿಕೆಗಳಾಗಿವೆ, ಆದರೆ ಪಕ್ಷವು ಅವುಗಳನ್ನು ಒಪ್ಪುವುದಿಲ್ಲ. ಅವರು ಮಿತಿಗಳನ್ನು ಮೀರಿದ್ದಾರೆ" ಎಂದು ಘೋಷ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ