
ನವದೆಹಲಿ (ಏ.18): ಸದಾ ಕಾಲ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಸುದ್ದಿಯಾಗುತ್ತಿದ್ದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಮಹುವಾ ಮೊಯಿತ್ರಾ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕ್ಷೇತ್ರಕ್ಕೆ ನಾಲನೇ ಹಂತದಲ್ಲಿ ಅಂದರೆ, ಮೇ 13ರಂದು ಚುನಾವಣೆ ನಡೆಯಲಿದೆ. ಇಲ್ಲಿ ಮಹುವಾ ಮೊಯಿತ್ರಾಗೆ ಎದುರಾಳಿಯಾಗಿ ಬಿಜೆಪಿಯಿಂದ ರಾಜಮಾತೆ ಅಮೃತಾ ರಾಯ್ ಅವರನ್ನು ಕಣಕ್ಕಿಳಿಸಿದೆ. ಇನ್ನು ಸಿಪಿಐ (ಎಂ) ಪಕ್ಷದಿಂದ ಎಸ್‌ಎಂ ಸಾದಿ ಸ್ಪರ್ಧೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕೃಷ್ಣನಗರದಲ್ಲಿ ಪ್ರಚಾರ ಮಾಡುತ್ತಿದ್ದ ಮಹುವಾ ಮೊಯಿತ್ರಾಗೆ ನ್ಯೂಸ್ ಟ್ರುಥ್ ವರದಿಗಾರ ಪ್ರಶ್ನೆ ಕೇಳಿದ್ದರು. ನಿಮ್ಮ ಎನರ್ಜಿಯ ರಸಹ್ಯವೇನು ಎಂದು ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಒಂಚೂರು ಯೋಚನೆ ಮಾಡದೇ 'ಸೆಕ್ಸ್' ಎಂದು ಹೇಳಿದ್ದಲ್ಲದೆ, ಇದು ನಿಜ ಎಂದೂ ತಿಳಿಸಿದ್ದರು. ಈ ವಿಡಿಯೋವಿಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಕೆಲವರು ಆಕೆ ಹೇಳಿದ್ದು ಸೆಕ್ಸ್ ಅಲ್ಲ, ಎಗ್ಸ್ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕ್ಲಿಪ್ ವೈರಲ್ ಆದ ಬೆನ್ನಲ್ಲಿಯೇ ನ್ಯೂಸ್ ಟ್ರುಥ್ ವರದಿಗಾರ ತಮಲ್ ಸಾಹ ಸ್ಪಷ್ಟೀಕರಣ ನೀಡಿದ್ದಾರೆ.'ನಾನು ಸ್ಪಷ್ಟೀಕರಣ ನೀಡುತ್ತಿದ್ದೇವೆ. ಯಾಕೆಂದರೆ, ಇದು ನನ್ನ ಸಂದರ್ಶನ. ನಾನು ಮಹುವಾ ಮೊಯಿತ್ರಾಗೆ ಬೆಳಗ್ಗಿನ ನಿಮ್ಮ ಎನರ್ಜಿಯ ಮೂಲ ಯಾವುದು ಎಂದು ಹೇಳಿದೆ. ಅದಕ್ಕೆ ಮಹುವಾ ಎಗ್ಸ್ (ಮೊಟ್ಟೆ) ಎಂದು ಹೇಳಿದ್ದರು. ಭಕ್ತ ಮಂಡಳಿಯವರು ಅದನ್ನು ಸೆಕ್ಸ್ ಎಂದು ಹೇಗೆ ವಿರೂಪಗೊಳಿಸಿದ್ದಾರೆ ಎಂಬುದು ಹಾಸ್ಯಾಸ್ಪದವಾಗಿದೆ. ಉದ್ದೇಶಪೂರ್ವಕವಾಗಿ ಆಡಿಯೋವನ್ನು ತಿರುಚಲಾಗುತ್ತಿದೆ. ಸಂಪೂರ್ಣ ವೀಡಿಯೊದ ಲಿಂಕ್ ಅನ್ನು ಇಲ್ಲಿ ಹಂಚಿಕೊಳ್ಳಲಾಗಿದೆ' ಎಂದು ಬರೆದುಕೊಂಡಿದ್ದಾರೆ. ತಮಲ್ ಸಾಹಾ ಸ್ಪಷ್ಟೀಕರಣ ನೀಡಿದ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಮಹುವಾ ಮೊಯಿತ್ರಾ ಅವರ ಮಾತಿನ ಕುರಿತಾಗಿ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
'ಇದು ಮಹುವಾ ಮೊಯಿತ್ರಾ ಅವರ ಎನರ್ಜಿಯ ರಹಸ್ಯ. ಈಕೆಯ ಉತ್ತರ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದೂ ಪೈಸೆ ಖರ್ಚು ಮಾಡದೇ ಪಬ್ಲಿಸಿಟಿ ಪಡೆಯುವ ದೊಡ್ಡ ಮಾಸ್ಟರ್ ಸ್ಟ್ರೋಕ್ ಇದು. ಪಶ್ಚಿಮ ಬಂಗಾಳದ ಕೃಷ್ಣನಗರದ ಜನರು ಆಕೆಯ ಇಂತಹ ಚೇಷ್ಟೆಗಳಿಗೆ ಮರುಳಾಗುವುದಿಲ್ಲ ಎಂದು ಭಾವಿಸುತ್ತೇವೆ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಹುವಾ ಮೊಯಿತ್ರಾ ತಮ್ಮ ಎನರ್ಜಿಯ ಸೋರ್ಸ್ ಸೆಕ್ಸ್ ಎಂದು ಹೇಳಿದ್ದಾರೆ. ಹಾಗಿದ್ದರೆ ನಿಮ್ಮ ಪತಿ ಯಾರು? ಹೋಗಲಿ ಸಂಗಾತಿ ಯರು? ಅದು ಬಹುಪತ್ನಿತ್ವವಲ್ಲವೇ? ಆ ಲೈಂಗಿಕ ನಡವಳಿಕೆಯನ್ನು ಹೊಂದಿರುವ ಜನರಿಗೆ ಅವಳು ಯಾವ ಉದಾಹರಣೆಯನ್ನು ಹೊಂದಿಸಲು ಬಯಸುತ್ತಾಳೆ ಎಂದು ಪ್ರಶ್ನೆ ಮಾಡಿದ್ದಾರೆ. ಟಿಎಂಸಿಯಲ್ಲಿ ಮಹಿಳೆಯನ್ನು ಹೇಗೆ ಟ್ರೀಟ್ ಮಾಡುತ್ತಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಟಿಎಂಸಿ ನಾಯಕಿ Mahua Moitra ಅವರ ಶಕ್ತಿಯ ಮೂಲದ ಬಗ್ಗೆ ಕೇಳಿದಾಗ, "ಸೆಕ್ಸ್" ಎಂದು ಉತ್ತರ ನೀಡಿದ್ದಾರೆ. ಆದರೆ, ಇವರ ಮೈತ್ರಿಕೂಟದ ಎದುರು ಸ್ಪರ್ಧೆ ಮಾಡುತ್ತಿರುವ ವ್ಯಕ್ತಿ ದಿನದ 18 ರಿಂದ 20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಹಾಗೂ ದಿನಗಟ್ಟಲೆ ಉಪವಾಸವಿದ್ದರೂ ಎನರ್ಜಿಯಿಂದಲೇ ಇರುತ್ತಾರೆ. ಇಂಡಿಯಾ ಮೈತ್ರಿಕೂಟ ಯಾಕೆ ಕುಸಿಯುತ್ತಿದ್ದೆ, ಮೋದಿ ಸರ್ಕಾರ ಯಾಕೆ ಹೊಳೆಯುತ್ತಿದೆ ಅನ್ನೋದಕ್ಕೆ ಇದು ಸಣ್ಣ ಉದಾಹರಣೆಯಷ್ಟೇ ಎಂದು ಬರೆದಿದ್ದಾರೆ.
ಪಶ್ಚಿಮ ಬಂಗಾಳ: ಟಿಎಂಸಿ ಫೈರ್ ಬ್ರಾಂಡ್ ಮಹುವಾಗೆ ರಾಜಮಾತೆ ಸವಾಲು..!
ಈಕೆ ಬಂಗಾಳದ ಮತ್ತೊಮ್ಮೆ ಶೇಖ್ ಶಹಜಹಾನ್ ಅಷ್ಟೇ. ಆದರೆ, ವುಮೆನ್ ವರ್ಷನ್ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಬೂಸ್ಟ್‌ನಿಂದ ಎನರ್ಜಿ ಪಡೆದುಕೊಳ್ಳುತ್ತಾರೆ. ಇನ್ನೂ ಕೆಲವರು ಸೆಕ್ಸ್‌ನಿಂದ ಎನರ್ಜಿ ಪಡೆದುಕೊಳ್ಳುತ್ತಾರೆ ಎಂದು ಮಹುವಾ ಮಾತನ್ನು ಲೇವಡಿ ಮಾಡಿದ್ದಾರೆ.
ಉಚ್ಛಾಟಿತ ಟಿಎಂಸಿ ಸಂಸದೆ ಮಹುವಾ ವಿರುದ್ಧ ರಾಜಮಾತೆ ಅಮೃತಾ ಸ್ಪರ್ಧೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ