
ಚೆನ್ನೈ(ಅ.16): ತಮಿಳುನಾಡು(Tamil Nadu) ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ(Local Body Elections) ನಟ ವಿಜಯ್(Actor Vijay) ಅವರ ಅಭಿಮಾನಿ ಸಂಘಟನೆಗಳು ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿವೆ. ಇದು ಡಿಎಂಕೆ, ಅಣ್ಣಾಡಿಎಂಕೆ(ADMK) ರಾಜಕೀಯ ನಾಯಕರು ಹುಬ್ಬೇರಿಸುವಂತೆ ಮಾಡಿದ್ದಾರೆ. ಜೊತೆಗೆ ಇದು ಮುಂಬರುವ ದಿನಗಳಲ್ಲಿ ವಿಜಯ್ ಥಳಪತಿ(Vijay) ರಾಜಕೀಯ ಪ್ರವೇಶದ ಸುಳಿವಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ವಿಜಯ್ ಅಭಿಮಾನಿಗಳು ‘ಥಲಪತಿ ವಿಜಯ್ ಮಕ್ಕಲ್ ಇಯಕ್ಕಮ್’ ಸಂಘದ ಅಡಿ ಚುನಾವಣೆಗೆ ಸ್ಪರ್ಧಿಸಿದ್ದರು. ವಿಜಯ್ ಕೂಡ ತಮ್ಮ ಭಾವಚಿತ್ರ ಮತ್ತು ಹೆಸರು ಬಳಕೆಗೆ ಅನುಮತಿ ನೀಡಿದ್ದರು. ಅಭಿಮಾನಿಗಳ ಸಂಘದ 115 ಜನ ಗೆಲುವು ಸಾಧಿಸಿದ್ದು, 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೆಲುವು ಸಾಧಿಸಿದವರಲ್ಲಿ ರೈತರು, ವಿದ್ಯಾರ್ಥಿಗಳು, ಶಿಕ್ಷಕರು, ವ್ಯಾಪಾರಿಗಳು ಮತ್ತು 45 ಮಂದಿ ಮಹಿಳೆಯರೂ ಸೇರಿದ್ದಾರೆ. ಹೀಗಾಗಿ ವಿಜಯ್ ಅಭಿಮಾನಿ ಸಂಘದ ಭರ್ಜರಿ ಗೆಲುವು ತಮಿಳುನಾಡು ರಾಜಕೀಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ವಿಜಯ ಸಕ್ರಿಯ ರಾಜಕಾರಣ ಪ್ರವೇಶಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಜಯ್‌ರ ಹಿಂದಿನ ಚಿತ್ರ ಮರ್ಸೆಲ್‌ನ ಕೆಲ ಡೈಲಾಗ್‌ಗಳು ಅವರ ರಾಜಕೀಯ ಒಲವಿನ ಸುಳಿವು ನೀಡಿತ್ತು. ಆನಾರೋಗ್ಯದ ಕಾರಣದಿಂದ ಈಗಾಗಲೇ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿದಿದ್ದು, ಕಮಲ್ ಹಾಸನ್ ಅವರ ‘ಮಕ್ಕಳ್ ನಿಧಿ ಮಯ್ಯಮ್’ ಮುಗ್ಗರಿಸಿದೆ. ಹೀಗಾಗಿ ವಿಜಯ್ ಮೇಲೆ ಭಾರಿ ನಿರೀಕ್ಷೆ ಮೂಡಿದೆÜ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ