ತಿರುಪತಿ ಮೃಗಾಲಯದಲ್ಲಿ ಸಿಂಹದ ಜೊತೆ ಸೆಲ್ಫಿ ಸಾಹಸ, ತಿಂದು ತೇಗಿದ ಕಾಡಿನ ರಾಜ!

By Santosh NaikFirst Published Feb 15, 2024, 11:03 PM IST
Highlights

ಸಿಂಹದ ಜೊತೆ ಸೆಲ್ಫಿ ಕ್ಲಿಕ್‌ ಮಾಡಿಕೊಳ್ಳಬೇಕು ಎನ್ನುವ ಹುಚ್ಚಿನಲ್ಲಿ ಮೃಗಾಲಯದಲ್ಲಿ ಸಿಂಹದ ಆವರಣಕ್ಕೆ ಹೊಕ್ಕಿದ್ದ ವ್ಯಕ್ತಿಯನ್ನು ಕಾಡಿನ ರಾಜ ತಿಂದು ತೇಗಿದೆ. ಆಂಧ್ರಪ್ರದೇಶದ ತಿರುಪತಿ ಮೃಗಾಲಯದಲ್ಲಿ ಈ ಘಟನೆ ನಡೆದಿದೆ.
 

ನವದೆಹಲಿ (ಫೆ.15): ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಮೃಗಾಲಯದಲ್ಲಿ ಸಿಂಹದ ಆವರಣಕ್ಕೆ ನುಗ್ಗಿದ ವ್ಯಕ್ತಿಯೊಬ್ಬನನ್ನು ಸಿಂಹ ಕೊಚ್ಚಿ ತಿಂದು ತೇಗಿದೆ. ಗುರುವಾರ, ರಾಜಸ್ಥಾನ ಮೂಲದ ಪ್ರಹ್ಲಾದ್ ಎಂದು ಗುರುತಿಸಲಾದ ವ್ಯಕ್ತಿ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಮೃಗಾಲಯದ ಸಿಬ್ಬಂದಿಗಳ ಎಚ್ಚರಿಕೆಯ ಹೊರತಾಗಿಯೂ ಅವರು ಸಿಂಹ ಇದ್ದ ಆವರಣಕ್ಕೆ ಹೊಕ್ಕು ಸೆಲ್ಫಿ ಕ್ಲಿಕ್‌ ಮಾಡಲು ಮುಂದಾಗಿದ್ದು. ಸಿಂಹದ ಆವರಣವನ್ನು ಪ್ರವೇಶಿಸುವ ಮೂಲಕ ಅವರು ನಿಯಮವನ್ನೂ ಉಲ್ಲಂಘನೆ ಮಾಡಿದ್ದರು. ತನ್ನ ಆವರಣಕ್ಕೆ ಮೃಗಾಲಯದ ಸಿಬ್ಬಂದಿಯ ಹೊರತಾಗಿ ಬೇರೊಬ್ಬರು ಬರುವುದನ್ನು ಕಂಡ ಸಿಂಹ ಆತ ಮೇಲೆ ತೀವ್ರವಾದ ದಾಳಿ ಮಾಡಿದೆ. ಸಿಂಹದ ದಾಳಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಹ್ಲಾದ್‌ ಮರವನ್ನು ಕೂಡ ಏರಿದ್ದ. ಆದರೆ, ಸಿಂಹದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನೋಡನೋಡುತ್ತಿದ್ದಂತೆಯೇ ಆತನನ್ನು ಸಿಂಹ ತಿಂದು ಹಾಕಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆತನನ್ನು ತಿನ್ನುವ ಪ್ರಯತ್ನದಲ್ಲಿ ಸಿಂಹ ಮೊದಲಿಗೆ ಆತನ ಕುತ್ತಿಗೆಗೆ ಬಾಯಿ ಹಾಕಿದ್ದರಿಂದ ಪ್ರಹ್ಲಾದ್‌ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಮೃಗಾಯಲದ ಸಿಬ್ಬಂದಿ ಈ ಹಂತದಲ್ಲಿ ಕ್ಷಿಪ್ರ ಕ್ರಮ ಕೈಗೊಳ್ಳುವ ಮೂಲಕ ತಕ್ಷಣವೇ ಮೃಗಾಲಯದಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಹೊರಕಳಿಸಿದ್ದಾರೆ. ಹೊಸದಾಗಿ ಬರುವವವರಿಗೆ ಪ್ರವೇಶವನ್ನು ನಿರಾಕರಿಸಿದ್ದರು.

ಶಿವಮೊಗ್ಗ ಸಫಾರಿ ಕಿಂಗ್ ಸರ್ವೇಶ್ ಇನ್ನಿಲ್ಲ: ಹಿಮೋ ಫ್ರೋಟೋಜೋನ್ ಕಾಯಿಲೆಗೆ ಬಲಿ

ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಆವರಣ ಪ್ರವೇಶಿಸಿದಾಗ ಪ್ರಹ್ಲಾದ್ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದೆ. ಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧನರಾಜ್ ಅವರು ಪ್ರಹ್ಲಾದ್ ಅವರ ಕ್ರಮಗಳು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿವೆ ಮತ್ತು ಅವರು ಮೃಗಾಲಯದ ಸಿಬ್ಬಂದಿಯ ಸ್ಪಷ್ಟ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ನಿಮ್​ ಲೈಫ್​ನಲ್ಲಿ ನಾನು ಶನಿ ಆಗ್ತೀನಿ, ಆಗಿದ್ದೀನಿ, ಆಗ್ಬೇಕು! ಕಪ್​ ಗೆಲ್ತೇನೆಂದ ಕಾರ್ತಿಕ್ ವಿರುದ್ಧ ಸಿಡಿದೆದ್ದ ಸಿಂಹಿಣಿ

click me!