ತಿರುಪತಿ ತಿಮ್ಮಪ್ಪನ 500 ಕೋಟಿ ರೂ. ಆಸ್ತಿ ಮಾರಾಟ?

By Kannadaprabha NewsFirst Published May 17, 2020, 7:42 AM IST
Highlights

ತಿರುಪತಿ ತಿಮ್ಮಪ್ಪನ .500 ಕೋಟಿ ಆಸ್ತಿ ಮಾರಾಟ?| ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ| ಜೂನ್‌ಗೂ ದೇಗುಲ ತೆರೆಯಲಾಗದಿದ್ದರೆ ಆಸ್ತಿ ಮಾರಾಟಕ್ಕೆ ಚಿಂತನೆ

ಹೈದರಾಬಾದ್‌(ಮೇ.17): ವಿಶ್ವದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪನಿಗೂ ಲಾಕ್‌ಡೌನ್‌ ಬಿಸಿ ಜೋರಾಗಿಯೇ ತಟ್ಟಿದೆ. ಜೂನ್‌ ವೇಳೆಗೆ ದೇಗುಲದ ಬಾಗಿಲು ತೆರೆಯಲು ಸಾಧ್ಯವಾಗದೇ ಹೋದಲ್ಲಿ, ಹಣಕಾಸಿನ ಅಗತ್ಯ ಪೂರೈಸಿಕೊಳ್ಳಲು, ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಕೆಲ ಸ್ಥಿರಾಸ್ತಿ ಮಾರಾಟಕ್ಕೆ ತಿರುಪತಿ ತಿರುಮಲ ದೇಗುಲ (ಟಿಟಿಡಿ)ದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

"

ಮುಂಬೈ, ಚೆನ್ನೈ ಸೇರಿದಂತೆ ಕೆಲ ಮಹಾನಗರಗಳಲ್ಲಿ ಕೆಲ ಸ್ಥಿರಾಸ್ತಿಗಳು ದಶಕಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದ್ದು, ಅವುಗಳ ಪೈಕಿ ಅಂದಾಜು 500 ಕೋಟಿ ರು ಮೌಲ್ಯದ ಆಸ್ತಿ ಮಾರಾಟ ಮಾಡಿ ಹಣ ಸಂಗ್ರಹಿಸುವ ಚಿಂತನೆಯಲ್ಲಿ ಟಿಟಿಡಿ ಇದೆ ಎಂದು ಮೂಲಗಳು ತಿಳಿಸಿವೆ.

55 ದಿನಗಳ ಬಳಿಕ ತಿರುಪತಿ ಲಡ್ಡು ಮಾರಾಟ ಆರಂಭ: 1 ತಾಸಿನಲ್ಲಿ ಎಲ್ಲ ಖಾಲಿ!

2020-21ನೇ ಸಾಲಿನಲ್ಲಿ ಹುಂಡಿ ಮೂಲಕ 1350 ಕೋಟಿ, ಲಡ್ಡು, ವಿಶೇಷ ದರ್ಶನ ಟಿಕೆಟ್‌ ಮೂಲಕ 900 ಕೋಟಿ ರು. ಸಂಗ್ರಹದ ನಿರೀಕ್ಷೆಯನ್ನು ಟಿಟಿಡಿ ಹೊಂದಿತ್ತು. ಆದರೆ ಲಾಕ್ಡೌನ್‌ ಹಿನ್ನೆಲೆಯಲ್ಲಿ ಮಾ.20ರಿಂದಲೂ ದೇಗುಲ ಬಂದ್‌ ಆಗಿರುವ ಕಾರಣ ದೇಗುಲಕ್ಕೆ ಮಾಸಿಕ ಅಂದಾಜು 200 ಕೋಟಿ ರು. ಆದಾಯ ಖೋತಾ ಆಗುತ್ತಿದೆ.

ಟಿಟಿಡಿಯಲ್ಲಿ ಖಾಯಂ ಮತ್ತು ಗುತ್ತಿಗೆ ರೂಪದಲ್ಲಿ 22000 ಸಿಬ್ಬಂದಿ ಇದ್ದಾರೆ. ಇವರಿಗೆ ಮಾಸಿಕ ವೇತನ ನೀಡಲು 115 ಕೋಟಿ ರು. ಬೇಕು. ಆದಾಯ ಖೋತಾ ಹಿನ್ನೆಲೆ ಈಗಾಗಲೇ 7000 ಕಾಯಂ ಸಿಬ್ಬಂದಿಗಳಿಗೆ ಮಾಚ್‌ರ್‍ನಿಂದ ಅರ್ಧ ವೇತನ ಪಾವತಿ ಮಾಡಲಾಗುತ್ತಿದೆ. ಜೂನ್‌ ತಿಂಗಳಿಗೂ ಇದೇ ರೀತಿಯಲ್ಲಿ ವೇತನ ನೀಡಲಾಗುವುದು. ಒಂದು ವೇಳೆ ಜೂನ್‌ ತಿಂಗಳಲ್ಲೂ ದೇಗುಲ ಆರಂಭ ಸಾಧ್ಯವಾಗದೇ ಹೋದಲ್ಲಿ ಆಗ ತೀವ್ರ ಸಂಕಷ್ಟಎದುರಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಮೇ 28ರಂದು ನಡೆಯಲಿರುವ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಕೆಲ ಸ್ಥಿರಾಸ್ತಿ ಮಾರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ದೇಗುಲ ವಿವಿಧ ಬ್ಯಾಂಕ್‌ಗಳಲ್ಲಿ 14000 ಕೋಟಿ ರು. ನಗದು ಮತ್ತು 8000 ಕೆ.ಜಿ.ಯಷ್ಟುಚಿನ್ನವನ್ನು ಟಿಟಿಡಿ ಇಟ್ಟಿದೆ. ಇದರಿಂದ ವಾರ್ಷಿಕ ಅಂದಾಜು 750 ಕೋಟಿ ರು. ಬಡ್ಡಿ ಬರುತ್ತದೆ. ಆದರೆ ಸದ್ಯಕ್ಕೆ ಈ ಆಸ್ತಿಗಳನ್ನು ಮುಟ್ಟುವ ಯಾವುದೇ ಉದ್ದೇಶ ಇಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ಕೊರೋನಾ ಎಫೆಕ್ಟ್: ದೇವಸ್ಥಾನ, ಭಕ್ತರಿಗೆ ಸಿದ್ಧವಾಗ್ತಿದೆ ಹೊಸ ರೂಲ್ಸ್..!

200 ಕೋಟಿ ರು.: ತಿರುಪತಿ- ತಿರುಮಲ ದೇಗುಲಕ್ಕೆ ಮಾಸಿಕ ಆದಾಯ ಖೋತಾ

115 ಕೋಟಿ ರು.: ವೇತನ ಪಾವತಿಗೆ ಪ್ರತಿ ತಿಂಗಳೂ ಬೇಕಿರುವ ಹಣ

2250 ಕೋಟಿ ರು.: ಈ ವರ್ಷ ನಿರೀಕ್ಷಿಸಿದ್ದ ವರಮಾನ

click me!