ನಾವು ಮೋದಿಯನ್ನ ಕೊಲ್ಲುತ್ತೇವೆ, 6 ವರ್ಷ ಬಾಲಕನ ಬಾಯಲ್ಲಿ ಇದೆಂತಾ ಮಾತು!

Published : May 16, 2020, 04:44 PM ISTUpdated : May 16, 2020, 05:03 PM IST
ನಾವು ಮೋದಿಯನ್ನ ಕೊಲ್ಲುತ್ತೇವೆ, 6 ವರ್ಷ ಬಾಲಕನ ಬಾಯಲ್ಲಿ ಇದೆಂತಾ ಮಾತು!

ಸಾರಾಂಶ

ಕೊರೋನ ಸೋಲಿಸಿ ಮನೆಗೆ ತೆರಳುವ ವೇಳೆ ಎಡವಟ್ಟು| ಕೊರೋನಾ ವಾರಿಯರ್ಸ್‌ಗೆ ಧನ್ಯವಾದ ಹೇಳುವ ವೇಳೆ ಪುಟ್ಟ ಬಾಲಕನ ಬಾಯಲ್ಲಿ ಶಾಕಿಂಗ್ ಮಾತು| ನಾವು ಮೋದಿಯನ್ನು ಕೊಲ್ಲುತ್ತೇವೆ ಎಂಬ ಬಾಲಕ

ಇಂದೋರ್(ಮೇ.16): ಕೊರೋನಾ ಸೋಲಿಸಿ ಆಸ್ಪತ್ರೆಯಿಂದ ತನ್ನ ಕುಟುಂಬ ಸದಸ್ಯರೊಂದಿಗೆ ಬಿಡುಗಡೆ ಪಡೆದ 6 ವರ್ಷದ ಪುಟ್ಟ ಬಾಲಕನೊಬ್ಬ  ಪ್ರಧಾನಿ ಮೋದಿಯನ್ನ ನಾವು ಕೊಲ್ಲುತ್ತೇವೆ ಎನ್ನುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಸದ್ಯ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ಈತನ ಮನಸ್ಸಲ್ಲಿ ಇಂತಹ ವಿಷ ಹಾಕಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಇಂಧೋರ್‌ನ ಇಂಡೆಕ್ಸ್ ಮೆಡಿಕಲ್ ಕಾಲೇಜು ಹಾಸ್ಪಿಟ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳುವ ವೇಳೆ ಕೋವಿಡ್‌ ಕಿಟ್‌ಗಳನ್ನು ಧರಿಸಿ, ಮಾಸ್ಕ್‌ಗಳನ್ನ ಹಾಕಿ ನಿಂತ ಗುಂಪೊಂದು ಕೊರೊನಾ ವಾರಿಯರ್ಸ್‌ಗೆ ಧನ್ಯವಾದ ಹೇಳುವ ಸಂದರ್ಭದಲ್ಲಿ ಈ ಬಾಲಕ ಅಚಾನಕ್ಕಾಗಿ ಈ ಮಾತುಗಳನ್ನಾಡಿದ್ದಾನೆ. ಬಾಲಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇನ್ನು ವಿಡಿಯೋವನ್ನು ಟ್ವಿಟ್ ಮಾಡಿರುವ ಅಮಿತ್ ಮಾಳವೀಯ 'ನಾವು ಮೋದಿಯನ್ನು ಕೊಲ್ಲುತ್ತೇವೆ...,  ಈ ರೀತಿ ಹೇಳಿದ ಬಾಲಕ ತನ್ನ ಕುಟುಂಬಸ್ಥರೊಂದಿಗೆ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮೇ 13ರಂದು ಇಂದೋರ್‌ನ ಇಂಡೆಕ್ಸ್‌ ಮೆಡಿಕಲ್‌ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ. ಆದರೆ ಈ ಆರು ವರ್ಷದ ಮಗುವಿನ ಮನಸ್ಸಲ್ಲಿ ಈ ವಿಷ ಬೀಜ ಯಾರು ಬಿತ್ತುತ್ತಿದ್ದಾರೆ? ಎಂಬುವುದೇ ಪ್ರಶ್ನೆ ಎಂದು ಟ್ವೀಟ್ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇಂದ್ರದಿಂದ MNREGA ಹೆಸರು ಬದಲಾವಣೆ, ಹೊಸ ನಿಯಮಗಳು ಜಾರಿ, ಕೆಲಸದ ಅವಧಿ, ಕನಿಷ್ಟ ವೇತನ ಹೆಚ್ಚಳ!
Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌