
ತಿರುಮಲ: ಸಾಲು ಸಾಲು ರಜಾದಿನಗಳ ಹಿನ್ನೆಲೆಯಲ್ಲಿ ತಿರುಮಲ (Tirumala) ತಿರುಪತಿ (Tirupati) ದೇವಾಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದು, ದೇವರ ದರ್ಶನಕ್ಕಾಗಿ 48 ಗಂಟೆಗಳಿಗಿಂತಲೂ ಹೆಚ್ಚು ಕಾಯಬೇಕಾದ ಪ್ರಸಂಗ ಶುಕ್ರವಾರ ಹಾಗೂ ಶನಿವಾರ ನಡೆದಿದೆ. ಭಕ್ತರ ಸರತಿ ಸಾಲು ಸುಮಾರು 4 ಕಿ.ಮೀ.ಗಿಂತಲೂ ಉದ್ದವಾಗಿದ್ದು, ನಾರಾಯಣಗಿರಿ ಉದ್ಯಾನದಲ್ಲಿರುವ 15,000 ಭಕ್ತರು ವಿಶ್ರಾಂತಿ ಪಡೆಯಬಹುದಾದ ಹಾಲ್‌ಗಳು ಭರ್ತಿಯಾಗಿವೆ. ಒಮ್ಮೆಲೆ ಭಾರಿ ಪ್ರಮಾಣದಲ್ಲಿ ನೆರೆದ ಭಕ್ತರ ಅವಶ್ಯಕತೆಗಳನ್ನು ಪೂರೈಸಲು ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanam) (ಟಿಟಿಡಿ) (TTD) ಸಿಬ್ಬಂದಿ ಪೂರೈಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಶ್ರೀವಾರಿ ಸೇವಾ ಸ್ವಯಂಸೇವಕರು ಸರತಿ ಸಾಲಲ್ಲಿ ನಿಂತ ಭಕ್ತರಿಗೆ ನೀರು, ಮಜ್ಜಿಗೆ ಹಾಗೂ ಆಹಾರದ ಪ್ಯಾಕೆಟ್‌ಗಳನ್ನು ಒದಗಿಸಲು ಹೆಣಗಾಡುತ್ತಿದ್ದಾರೆ.
ದರ್ಶನಕ್ಕಾಗಿ ಭಕ್ತರನ್ನು ವೈಕುಂಠಂ ಕಾಂಪ್ಲೆಕ್ಸ್‌ಗೆ ತಲುಪಲು ಹೊಸದಾಗಿ ನಿರ್ಮಿಸಲಾದ ಹೊರ ವರ್ತುಲ ರಸ್ತೆಯಲ್ಲೂ ಸರತಿ ಸಾಲಲ್ಲಿ ನಿಲ್ಲುವಂತೆ ಸೂಚಿಸಲಾಗಿದೆ. ಭಾನುವಾರವೂ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ವೆಂಕಟೇಶ ಗೋವಿಂದ... ಪತ್ನಿಯ ಹೆಗಲ ಮೇಲೆ ಕೂರಿಸಿಕೊಂಡು ತಿರುಪತಿ ಬೆಟ್ಟವೇರಿದ ಪತಿ
ಇತ್ತೀಚೆಗೆ ತಿರುಮಲದಲ್ಲಿ ಒಂದೇ ದಿನ 75 ಸಾವಿರ ಭಕ್ತರು ಉಚಿತ ದರ್ಶನ ಪಡೆದು ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದರು. ಕೊರೊನಾ ಕಾರಣ 2 ವರ್ಷ ಕುಂಠಿತ ಆಗಿದ್ದ ದರ್ಶನ, ಈಗ ಪುನಾರಂಭಗೊಂಡಿದ್ದು ಹೆಚ್ಚು ಜನಸ್ತೋಮ ಹರಿದು ಬರಲು ಕಾರಣವಾಗಿದೆ.
9 ದಿನಗಳ ವಾರ್ಷಿಕ ಬ್ರಹ್ಮೋತ್ಸವವು ಬುಧವಾರ ರಾತ್ರಿ ಮುಕ್ತಾಯಗೊಂಡರೂ ಸಹ ತಿರುಮಲ ಬೆಟ್ಟದಲ್ಲಿ ಭಕ್ತರ ನೂಕುನುಗ್ಗಲು ಮುಂದುವರೆದಿದೆ. ಮಹಾಮಾರಿಯ ಕಾರಣ ಎರಡು ವರ್ಷಗಳ ನಂತರ ಶ್ರೀವಾರಿ ದೇವಸ್ಥಾನದ ಸುತ್ತಲಿನ ನಾಲ್ಕು ಪವಿತ್ರ ಮಾದ ಬೀದಿಗಳಲ್ಲಿ ಸಾರ್ವಜನಿಕರ ನಡುವೆ ಈ ಉತ್ಸವ ನಡೆದಿತ್ತು.
ಇದನ್ನೂ ಓದಿ: ತಿರುಪತಿ ದೇವಸ್ಥಾನಕ್ಕೆ ಒಂದೇ ದಿನ 75,000 ಭಕ್ತರ ಭೇಟಿ: ದಾಖಲೆ
ಅತ್ಯಂತ ಬೇಡಿಕೆಯ ಗರುಡ ಸೇವೆಯ ದಿನವೇ 81,318 ಯಾತ್ರಾರ್ಥಿಗಳು ವೆಂಕಟೇಶ್ವರನ ದರ್ಶನ ಪಡೆದರೆ 3 ಲಕ್ಷಕ್ಕೂ ಹೆಚ್ಚು ಭಕ್ತರು ಗರುಡ ವಾಹನ ಸೇವೆಯಲ್ಲಿ ಪಾಲ್ಗೊಂಡರು. ಟಿಟಿಡಿ ಈ ವೇಳೆ 24.89 ಲಕ್ಷ ಲಡ್ಡುಗಳನ್ನು ಮಾರಾಟ ಮಾಡಿದ್ದು, ಬ್ರಹ್ಮೋತ್ಸವದ ವೇಳೆ ಹುಂಡಿಗೆ 20.43 ಕೋಟಿ ರೂ. ಸಂಗ್ರಹವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ