ಕೆಎಂಎಫ್‌ ತುಪ್ಪ ಬಳಸಲು ಆರಂಭ ಮಾಡಿದ ಬಳಿಕ ತಿರುಪತಿ ಲಡ್ಡುಗೆ ಭಾರೀ ಬೇಡಿಕೆ ; ಒಂದು ದಿನಕ್ಕೆ ಎಷ್ಟು ಮಾರಾಟವಾಗುತ್ತೆ ಗೊತ್ತಾ?

Published : Dec 13, 2024, 08:33 AM ISTUpdated : Dec 13, 2024, 08:37 AM IST
ಕೆಎಂಎಫ್‌ ತುಪ್ಪ ಬಳಸಲು ಆರಂಭ ಮಾಡಿದ ಬಳಿಕ ತಿರುಪತಿ ಲಡ್ಡುಗೆ ಭಾರೀ ಬೇಡಿಕೆ ; ಒಂದು ದಿನಕ್ಕೆ ಎಷ್ಟು ಮಾರಾಟವಾಗುತ್ತೆ ಗೊತ್ತಾ?

ಸಾರಾಂಶ

ತಿರುಮಲದಲ್ಲಿ ಲಡ್ಡುಗಳ ಬೇಡಿಕೆ ಹೆಚ್ಚಿರುವುದರಿಂದ ಟಿಟಿಡಿ 84 ಹೆಚ್ಚುವರಿ ನೌಕರರನ್ನು ನೇಮಿಸಿಕೊಳ್ಳುತ್ತಿದೆ. ದಿನಕ್ಕೆ 50,000 ಸಣ್ಣ ಲಡ್ಡು, 4,000 ದೊಡ್ಡ ಲಡ್ಡು ಮತ್ತು 3,500 ಹೆಚ್ಚುವರಿ ವಡೆಗಳನ್ನು ತಯಾರಿಸಲು ಈ ನೇಮಕಾತಿ ನಡೆಯುತ್ತಿದೆ.

ತಿರುಪತಿ (ಡಿ.13): ತಿರುಮಲದ ತಿರುಪತಿ ದೇವಸ್ಥಾನದ ಪ್ರಸಿದ್ಧ ಶ್ರೀವಾರಿ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಿದ್ದು, ಲಡ್ಡು ತಯಾರಿಕೆಗೆ ಇನ್ನೂ 84 ನೌಕರರನ್ನು ನೇಮಕ ಮಾಡಿಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ನಿರ್ಧರಿಸಿದೆ.

ಪ್ರಸ್ತುತ ಪ್ರತಿ ದಿನ 3.5 ಲಕ್ಷ ಸಣ್ಣ ಲಡ್ಡುಗಳು, 6,000 ದೊಡ್ಡ ಲಡ್ಡುಗಳು ಹಾಗೂ 3,500 ವಡೆಗಳನ್ನು ತಯಾರಿಸಲಾಗುತ್ತಿದೆ. ಆದರೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿರುವ ಕಾರಣ ಬೇಡಿಕೆಯೂ ಹೆಚ್ಚಿದೆ. ಆದ್ದರಿಂದ ಇನ್ನುಮುಂದೆ ಅನುದಿನ 50,000 ಸಣ್ಣ ಲಡ್ಡು, 4,000 ದೊಡ್ಡ ಲಡ್ಡು ಹಾಗೂ 3,500 ವಡೆಗಳನ್ನು ಹೆಚ್ಚಿಗೆ ತಯಾರಿಸಲಾಗುವುದು. ಇದಕ್ಕಾಗಿ 74 ವೈಷ್ಣವರು ಹಾಗೂ 10 ವೈಷ್ಣವರಲ್ಲದವರನ್ನು ಪೊಟ್ಟು(ಲಡ್ಡು ತಯಾರಿಸುವ ಸ್ಥಳ)ವಿನಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ.

ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ಆಂಡ್ ಗೀತಕ್ಕ; ಫ್ಯಾಮಿಲಿ ಫೋಟೋ ವೈರಲ್

ಇನ್ನು ನೌಕರರಿಗೆ ಬ್ಯಾಡ್ಜ್‌:

ಟಿಟಿಡಿಯಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೆ ಅವರ ಹೆಸರುಳ್ಳ ಬ್ಯಾಡ್ಜ್‌ಗಳನ್ನು ನೀಡುವುದಾಗಿ ಅಧ್ಯಕ್ಷ ಬಿ.ಆರ್‌. ನಾಯ್ಡು ಘೋಷಿಸಿದ್ದಾರೆ. ಭಕ್ತರೊಂದಿಗೆ ನೌಕರರ ಅನುಚಿತ ವರ್ತನೆ ಪ್ರಕರಣಗಳ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ಅಂತಹ ನೌಕರರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಸುಲಭವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ