'ವಕ್ಫ್‌ ಬೋರ್ಡ್‌ ರಿಯಲ್‌ ಎಸ್ಟೇಟ್‌ ಕಂಪನಿ..' ಓವೈಸಿಗೆ ತಿರುಗೇಟು ನೀಡಿದ ಟಿಟಿಡಿ ಚೇರ್ಮನ್‌!

By Santosh Naik  |  First Published Nov 3, 2024, 8:00 PM IST

ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್ ಬೋರ್ಡ್‌ಗೆ ಮುಸ್ಲಿಮೇತರರನ್ನು ಸೇರಿಸಿಕೊಳ್ಳುವುದನ್ನು ಓವೈಸಿ ಪ್ರಶ್ನೆ ಮಾಡಿದ ಬೆನ್ನಲ್ಲಿಯೇ  ತಿರುಮಲ ತಿರುಪತಿ ದೇವಸ್ಥಾನದ ನೂತನ ಅಧ್ಯಕ್ಷ ಬಿಆರ್ ನಾಯ್ಡು ತಿರುಗೇಟು ನೀಡಿದ್ದಾರೆ. 


ಹೈದರಾಬಾದ್‌ (ನ.3): ಮುಂದಿನ ನವೆಂಬರ್ 6 ರಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬೊಳ್ಳಿನೇನಿ ರಾಜಗೋಪಾಲ್ ನಾಯ್ಡು, ದೇವಸ್ಥಾನದ ಮಂಡಳಿಯನ್ನು ವಕ್ಫ್ ಮಂಡಳಿಯೊಂದಿಗೆ ಹೋಲಿಸಿದ್ದಕ್ಕಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯನ್ನು ಟೀಕಿಸಿದ್ದಾರೆ. ತಿರುಮಲ ದೇವಸ್ಥಾನದ ಟ್ರಸ್ಟ್‌ನಲ್ಲಿ ಹಿಂದೂಗಳನ್ನು ಮಾತ್ರ ನೇಮಿಸಿಕೊಳ್ಳುವ ಪ್ರಸ್ತಾಪದ ಕುರಿತು ನಡೆಯುತ್ತಿರುವ ಗದ್ದಲದ ನಡುವೆ ಈ ಹೇಳಿಕೆ ಬಂದಿದೆ. ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್ ಮಂಡಳಿಗೆ ಮುಸ್ಲಿಮೇತರ ಸದಸ್ಯರನ್ನು ಸೇರಿಸಿಕೊಳ್ಳುವ ಬಗ್ಗೆ ಓವೈಸಿ ಪ್ರಶ್ನೆ ಮಾಡಿದ ಬೆನ್ನಲ್ಲಿಯೇ ನಾಯ್ಡು ಅವರ ಈ ಹೇಳಿಕೆ ಬಂದಿದೆ. ಟಿಟಿಡಿ ಬೋರ್ಡ್‌ನಲ್ಲಿ ಹಿಂದೂಯೇತರ ಸದಸ್ಯ ಯಾರೊಬ್ಬರೂ ಇಲ್ಲ ಎಂದಿದ್ದಾರೆ. "ವಕ್ಫ್ ಮಂಡಳಿಯು ರಿಯಲ್ ಎಸ್ಟೇಟ್ ಕಂಪನಿಯಾಗಿದೆ, ಅವರಂತಹ ಹಿರಿಯ ರಾಜಕಾರಣಿ (ಒವೈಸಿ) ಅದನ್ನು ಟಿಟಿಡಿಗೆ ಹೇಗೆ ಹೋಲಿಸುತ್ತಾರೆ? ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ" ಎಂದು ಹೇಳಿದರು.

ಟಿಟಿಡಿ ಚೇರ್ಮನ್‌ ಆಗಿ ನಾಯ್ಡು ನೇಮಕವಾದ ಬೆನ್ನಲ್ಲಿಯೇ ಕೇವಲ ಹಿಂದೂಗಳು ಮಾತ್ರವೇ, ದೇವಸ್ಥಾನದಲ್ಲಿ ನೇಮಕಗೊಳ್ಳಬೇಕು ಎಂದು ಹೇಳಿದ್ದರು. ತಿರುಪತಿಯಲ್ಲಿ ಕಲಬೆರಕೆ ತುಪ್ಪ ಬಳಕೆ ಮಾಡಿದ್ದಾರೆ ಎನ್ನುವ ವಿವಾದದ ನಡುವೆ ಈ ಹೇಳಿಕೆ ನೀಡಿದ್ದರು.

Latest Videos

ಮುಂದಿನ ಎರಡೇ ತಿಂಗಳಲ್ಲಿ ದೇಶದಲ್ಲಿ 48 ಲಕ್ಷ ಮದುವೆ, 6 ಲಕ್ಷ ಕೋಟಿ ವ್ಯವಹಾರ ನಿರೀಕ್ಷೆ!

ಲಡ್ಡು ವಿವಾದದ ಕುರಿತು ನಾಯ್ಡು, ಸಾರ್ವಜನಿಕರಿಗೆ ಭರವಸೆ ನೀಡಿದ್ದು, "ಈಗ ಎಲ್ಲವೂ ಚೆನ್ನಾಗಿದೆ, ಮತ್ತು ಸದ್ಯಕ್ಕೆ ನಾನು ನಿಮಗೆ ಭರವಸೆ ನೀಡಬಲ್ಲೆ" ಎಂದಿದ್ದಾರೆ. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸನಾತನ ಧರ್ಮ ಮಂಡಳಿಯನ್ನು ಜಾರಿಗೊಳಿಸುವ ವಿಚಾರದ ಬಗ್ಗೆ ಕೇಳಿದಾಗ, ನಾಯ್ಡು ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ, ಅವರು (ಪವನ್ ಕಲ್ಯಾಣ್) ಹೇಳಿದ್ದೆಲ್ಲವೂ ನೂರಕ್ಕೆ ನೂರು ನಿಜ, ನಾನು ಅದನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

ಪಾಪ ಬಿಜೆಪಿ ಪಕ್ಷ ಕಟ್ಟಿದ ಅವರನ್ನೆಲ್ಲ ಮುಗಿಸಿದ್ದಾರೆ: ವಿಜಯೇಂದ್ರ ವಿರುದ್ಧ ಯತ್ನಾಳ್‌ ವಾಗ್ದಾಳಿ

ಆಂಧ್ರಪ್ರದೇಶ ಸರ್ಕಾರವು ಅಕ್ಟೋಬರ್ 30 ರಂದು ಹೊಸದಾಗಿ ರಚಿಸಲಾದ 24 ಸದಸ್ಯರ ಟಿಟಿಡಿ ಮಂಡಳಿಯ ಅಧ್ಯಕ್ಷರಾಗಿ ನಾಯ್ಡು ಅವರನ್ನು ನೇಮಿಸಿತು. ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ನೆಲೆಯಾಗಿರುವ ತಿರುಮಲ ಬೆಟ್ಟಗಳನ್ನು ಟಿಟಿಡಿ ನಿರ್ವಹಿಸುತ್ತದೆ.

click me!