
ತಿರುಪತಿ(ಡಿ.13): ತಿರುಮಲದ ವಿಶ್ವಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ಇನ್ನು ಮುಂದೆ 10 ವರ್ಷದ ಒಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟವೃದ್ಧರು ಹಾಗೂ ಗರ್ಭಿಣಿಯರಿಗೂ ದೇವರ ದರ್ಶನಭಾಗ್ಯ ಲಭಿಸಲಿದೆ.
ಕೊರೋನಾ ಲಾಕ್‌ಡೌನ್ ಕಾರಣ ಬಂದ್ ಆಗಿದ್ದ ದೇವರ ದರ್ಶನ ಜೂನ್‌ನಲ್ಲಿ ಆರಂಭವಾಗಿತ್ತಾದರೂ ಈ ಮೂರೂ ವರ್ಗದವರಿಗೆ ದೇಗುಲದ ಪ್ರವೇಶ ನಿರ್ಬಂಧಿಸಲಾಗಿತ್ತು. ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇವರಿಗೂ ದರ್ಶನ ಅವಕಾಶ ನೀಡುವಂತೆ ಭಕ್ತಗಣದಿಂದ ಒತ್ತಡ ಹೆಚ್ಚಿತ್ತು.
ಇದಕ್ಕೆ ಮಣಿದಿರುವ ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ), ಭಕ್ತರು ತಮ್ಮದೇ ‘ರಿಸ್ಕ್’ನಲ್ಲಿ ಇನ್ನು ಆಗಮಿಸಬಹುದು. ಆನ್‌ಲೈನ್‌ನಲ್ಲಿ ಮಾತ್ರ ದರ್ಶನ ಟಿಕೆಟ್ ಪಡೆಯಬೇಕು. ಕೇಂದ್ರ ಸರ್ಕಾರದ ಕೋವಿಡ್-19 ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಸೂಚಿಸಿದೆ.
ಚಿಕ್ಕಮಕ್ಕಳಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಅನ್ನಪ್ರಾಶನ, ಕಿವಿ ಚುಚ್ಚಿಸುವಿಕೆ, ಕೇಶಮುಂಡನ- ಇತ್ಯಾದಿ ಸಂಪ್ರದಾಯಗಳನ್ನು ಭಕ್ತರು ಪಾಲಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ