ಒಮ್ಮೆಲೆ 10 ಕಾಮೋದ್ರೇಕ ಮಾತ್ರೆ ಸೇವಿಸಿದವ ಸಾವು!

Published : Dec 13, 2020, 08:25 AM ISTUpdated : Dec 13, 2020, 08:45 AM IST
ಒಮ್ಮೆಲೆ 10 ಕಾಮೋದ್ರೇಕ ಮಾತ್ರೆ ಸೇವಿಸಿದವ ಸಾವು!

ಸಾರಾಂಶ

ಒಮ್ಮೆಲೆ 10 ಕಾಮೋದ್ರೇಕ ಮಾತ್ರೆ ಸೇವಿಸಿದ| ತೀವ್ರ ಅಸ್ವಸ್ಥರಾಗಿ ನಾಲ್ಕೇ ದಿನದಲ್ಲಿ ಮೃತ| ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದರೂ, ಆತ್ಮಹತ್ಯೆ ಪತ್ರವಿಲ್ಲ

ಭೋಪಾಲ್‌(ಡಿ.13): 10 ಕಾಮೋದ್ರೇಕ ಮಾತ್ರೆಗಳನ್ನು ಸೇವಿಸಿದ್ದ ವ್ಯಕ್ತಿಯೊಬ್ಬರು, ತೀವ್ರ ಅಸ್ವಸ್ಥರಾಗಿ ನಾಲ್ಕೇ ದಿನದಲ್ಲಿ ಮೃತಪಟ್ಟಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಬಾಬು ಮೀನಾ (25) ಎಂಬವರೇ ಮಾತ್ರೆ ಓವರ್‌ಡೋಸ್‌ನಿಂದಾಗಿ ಮೃತಪಟ್ಟವರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದರೂ, ಆತ್ಮಹತ್ಯೆ ಪತ್ರ ಸಿಗದೆ ಇರುವುದರಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮೀನಾ ಡಿ.7ರಂದು 10 ಕಾಮೋದ್ರೇಕ ಮಾತ್ರೆಗಳನ್ನು ಸೇವಿಸಿದ್ದರು. ಇದಾದ ಬಳಿಕ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭವಾಗಿತ್ತು. ವಾಕರಿಕೆ, ವಾಂತಿ, ತಲೆ ಸುತ್ತುವುದು ಹಾಗೂ ತೀವ್ರ ಹೊಟ್ಟೆನೋವು ಅವರನ್ನು ಕಾಡಿತ್ತು. ಚಿಕಿತ್ಸೆ ಪಡೆದ ಬಳಿಕವೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ.

ಬಳಿಕ ಉಸಿರಾಟದ ತೊಂದರೆಯೂ ಕಾಡಿದ್ದು, ಡಿ.9 ರಂದು ಸಂಜೆ 6 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಮರುದಿನ ನಡುರಾತ್ರಿ 2 ಗಂಟೆಗೆ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Keralam Election Results: ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?
5 State Assembly Election results 2026 Live: Keralam Election Results - ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?