ತಿರುಪತಿ ದೇವಸ್ಥಾನದ 18 ಹಿಂದುಯೇತರ ನೌಕರರ ಕಿತ್ತೆಸೆದ ಆಂಧ್ರ ಸರ್ಕಾರ

Published : Feb 05, 2025, 05:33 PM IST
ತಿರುಪತಿ ದೇವಸ್ಥಾನದ 18 ಹಿಂದುಯೇತರ ನೌಕರರ ಕಿತ್ತೆಸೆದ ಆಂಧ್ರ ಸರ್ಕಾರ

ಸಾರಾಂಶ

ತಿರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ 18 ಹಿಂದೂಯೇತರ ನೌಕರರನ್ನು ವಜಾ ಮಾಡಲಾಗಿದೆ. ದೇವಸ್ಥಾನದ ಟಿಟಿಡಿ ಈ ಕ್ರಮ ಕೈಗೊಂಡಿದ್ದೇಕೆ?  

ತಿರುಪತಿ(ಫೆ.05) ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ, ಹಿಂದೂ ಆಚರಣೆ ಹಾಗೂ ಪದ್ಧತಿ, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿರುವ ಆರೋಪ ಹಿನ್ನಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಈಗಾಗಲೇ ಮಹತ್ವದ ಕ್ರಮ ಕೈಗೊಂಡಿತ್ತು. ಸರ್ಕಾರದ ಆದೇಶದಂತೆ ಟಿಟಿಡಿ 18 ಉದ್ಯೋಗಿಗಳ ವಜಾ ಮಾಡಿದೆ. ತಿರುಮಲ ತಿರುಪತಿ ದೇವಸ್ಥಾನವು ಟಿಟಿಡಿ ಉತ್ಸವಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸುವಾಗ ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವ 18 ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಂಡಿದೆ. 

ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗಿಗಳಿಗೆ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಗೊಳ್ಳುವ ಅಥವಾ ಸ್ವಯಂ ನಿವೃತ್ತಿ ಯೋಜನೆಗೆ (VRS) ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೀಡಲಾಗಿತ್ತು. ಈ ಆಯ್ಕೆ ಮೂಲಕ ಕೆಲ ನೌಕರರು ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ 18 ಹಿಂದೂಯೇತರ ನೌಕರರು ನಿವೃತ್ತಿ ಹಾಗೂ ವರ್ಗಾವಣೆ ಏರಡನ್ನೂ ಆಯ್ಕೆ ಮಾಡದೇ ತಿರುಪತಿ ದೇವಸ್ಥಾನದಲ್ಲೇ ಉಳಿದುಕೊಂಡಿದ್ದರು. 

ತಿರುಪತಿಯಲ್ಲಿ ವೈಭವದ ರಥಸಪ್ತಮಿ ಆಚರಣೆ!

ಸ್ವಯಂ ನಿವೃತ್ತಿ ಅಥವಾ ಇತರ ಇಲಾಖೆಗೆ ವರ್ಗಾವಣೆ ಬಯಸದವರು  ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಮೊದಲೇ ಸೂಚಿಸಿತ್ತು. ಇದೀಗ ಕ್ರಮ ಕೈಗೊಳ್ಳಲಾಗಿದೆ. 18 ಹಿಂದೂಯೇತರ ನೌಕರರನ್ನು ಕೆಲಸದಿಂದ ಕಿತ್ತು ಹಾಕಿದೆ. ತನ್ನ ದೇವಾಲಯಗಳು ಮತ್ತು ಧಾರ್ಮಿಕ ಆಚರಣೆಗಳ ಆಧ್ಯಾತ್ಮಿಕ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಟಿಟಿಡಿಯ ಬದ್ಧತೆಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಒತ್ತಿ ಹೇಳಿದೆ. 

ಕೆಲ ಸರ್ಕಾರದ ಹಿಂದೂ ಭಾವನೆ ಧಕ್ಕೆ ಮಾಡುವ ಕೆಲಸ ಮಾಡಿತ್ತು. ಇದರಿಂದ ತಿರುಪತಿ ತಿರುಮಲ ದೇವಸ್ಥಾನ ಅಪವಿತ್ರಗೊಂಡಿದೆ ಅನ್ನೋ ಆರೋಪವನ್ನು ಆಂದ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದರು. ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ದನದ ಕೊಬ್ಬು ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಭಾರಿ ಹೋರಾಟ, ಪ್ರತಿಭಟನೆಗಳು ನಡೆದಿತ್ತು. ಈ ವೇಳೆ ಪವನ್ ಕಲ್ಯಾಣ್ ತಿರುಪತಿ ದೇವಸ್ಥಾನದ ಪಾವಿತ್ರ್ಯತೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು. 

ತಿರುಮಲ ತಿರುಪತಿ ದೇವಸ್ಥಾನವು ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಜವಾಬ್ದಾರಿಯುತ ಸ್ವತಂತ್ರ ಸರ್ಕಾರಿ ಟ್ರಸ್ಟ್ ಆಗಿದೆ.

ಏಪ್ರಿಲ್‌ ತಿಂಗಳ ತಿರುಪತಿ ದರ್ಶನ ಟಿಕೆಟ್‌ ಬುಕ್ಕಿಂಗ್‌ ದಿನಾಂಕ ಪ್ರಕಟಿಸಿದ ಟಿಟಿಡಿ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ