ತಿರುಮಲ ಭಕ್ತಾದಿಗಳೇ ಮೊದಲು 9552300009 ಈ ಸಂಖ್ಯೆ ಸೇವ್ ಮಾಡ್ಕೊಳ್ಳಿ

Published : Apr 10, 2025, 08:36 AM ISTUpdated : Apr 10, 2025, 11:18 AM IST
ತಿರುಮಲ ಭಕ್ತಾದಿಗಳೇ ಮೊದಲು 9552300009 ಈ ಸಂಖ್ಯೆ ಸೇವ್ ಮಾಡ್ಕೊಳ್ಳಿ

ಸಾರಾಂಶ

ತಿರುಮಲ ತಿರುಪತಿ ದೇವಸ್ಥಾನವು ವಾಟ್ಸಪ್‌ನಲ್ಲಿ 15 ಅಗತ್ಯ ಸೇವೆಗಳನ್ನು ನೀಡುತ್ತಿದೆ. ರಾಮನವಮಿ ಪ್ರಯುಕ್ತ ಉಚಿತ ಲಡ್ಡು ವಿತರಣೆ ಹಾಗೂ ಕರ್ನಾಟಕ ಭವನ ಕಾಮಗಾರಿ ಪೂರ್ಣಗೊಂಡಿದೆ.

ತಿರುಪತಿ: ಭಕ್ತಾದಿಗಳ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ವಾಟ್ಸಪ್‌ನಲ್ಲೂ ಸೇವೆ ನೀಡಲು ಮುಂದಾಗಿದೆ. ಇದರ ಭಾಗವಾಗಿ, 15 ಅಗತ್ಯ ಸೇವೆಗಳನ್ನು ವಾಟ್ಸಾಪ್‌ ಜತೆ ಸಂಯೋಜಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.  ಟಿಕೆಟ್‌ ಕಾಯ್ದಿರಿಸುವಿಕೆ, ವಸತಿ ಲಭ್ಯತೆ, ನೈಜ ಸಮಯ ಅಪ್‌ಡೇಟ್‌ಗಳಂತಹ ವ್ಯಸ್ಥೆಗಳ ಬಗ್ಗೆ ಮಾಹಿತಿ ಪಡೆಯಲು ಭಕ್ತರು ಈ ಸೌಲಭ್ಯವನ್ನು ಬಳಸಬಹುದು. 

ಬಳಕೆ ಹೇಗೆ?:
ಮೊದಲು 9552300009 ಸಂಖ್ಯೆಯನ್ನು ಸೇವ್‌ ಮಾಡಿಕೊಂಡು, ಬಳಿಕ ವಾಟ್ಸಪ್‌ನಲ್ಲಿ ಇದಕ್ಕೆ ‘ಹಾಯ್‌’ ಎಂದು ಸಂದೇಶ ಕಳಿಸಬೇಕು. ಆಗ ತೋರಿಸಲಾಗುವ ಆಯ್ಕೆಗಳಲ್ಲಿ ‘ಟಿಟಿಡಿ ದೇವಸ್ಥಾನದ ಸೇವೆ’ಯನ್ನು ಆಯ್ಕೆ ಮಾಡಬೇಕು. ಆಗ, ನಿಗದಿಯಾಗಿರುವ ಸರ್ವದರ್ಶನದ ಲೈವ್‌ ಸ್ಟೇಟಸ್‌, ಸರ್ವದರ್ಶನದ ಲೈವ್‌ ಸ್ಟೇಟಸ್‌, ಶ್ರೀ ವಾಣಿ ಟ್ರಸ್ಟ್‌ ಸ್ಟೇಟಸ್‌, ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಟೇಟಸ್‌ ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಸೂಕ್ತ ಆಯ್ಕೆಗಳನ್ನು ಆರಿಸಿಕೊಂಡು ಸೇವೆಗಳನ್ನು ಪಡೆಯಬಹುದು.

ರಾಮನವಮಿ ನಿಮಿತ್ತ ತಿರುಮಲದಲ್ಲಿ ನಾಳೆ ಉಚಿತ ಲಡ್ಡು
ತಿರುಮಲ: ರಾಮನವಮಿಯ ಪ್ರಯುಕ್ತ ಏ.11ರಂದು ಆಯೋಜಿಸಲಾಗಿರುವ ಸೀತಾ ರಾಮ ಕಲ್ಯಾಣೋತ್ಸವದ ದಿನ ಭಕ್ತರಿಗೆ ಉಚಿತ ಲಡ್ಡು ಪ್ರಸಾದ ವಿತರಿಸಲು ಟಿಟಿಡಿ ನಿರ್ಧರಿಸಿದೆ.ಕಲ್ಯಾಣೋತ್ಸವದಂದು ಭಕ್ತರಿಗೆ 2 ನೀರಿನ ಬಾಟಲಿ, ತಿಂಡಿ, ಸಹಿ ಖಾದ್ಯಗಳು, ಮುತ್ತಿನ ಅಕ್ಷತೆ ಮತ್ತು ಅಕ್ಷತೆ, ಉಪಹಾರ, ಭೋಜನ, ಅನ್ನಪ್ರಸಾದವನ್ನು ನೀಡಲಾಗುವುದು. ಇದರೊಂದಿಗೆ 50 ರು. ಬಲೆಯ ಲಡ್ಡುಗಳನ್ನೂ ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಟಿಟಿಡಿ ನೌಕರರ ವಿರೋಧ:ಉಚಿತ ಲಡ್ಡು ವಿತರಣೆಗೆ ಟಿಟಿಡಿ ಉದ್ಯೋಗಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಇದರಿಂದ ಜನ ಬೇರೆ ಹಬ್ಬಗಳಂದೂ ಇದೇ ನಿರೀಕ್ಷೆ ಇಟ್ಟುಕೊಳ್ಳಬಹುದು. ಜೊತೆಗೆ, ಪ್ರಸಾದ ಸಂಗ್ರಹಣೆ, ಅವ್ಯವಸ್ಥೆ, ಸುರಕ್ಷತೆಗೆ ಧಕ್ಕೆಯಂತಹ ಸಮಸ್ಯೆಗಳು ಉದ್ಭವಿಸಬಹುದು’ ಎಂದು ನೌಕಕರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಭಕ್ತನಿಂದ ಟಿಟಿಡಿಗೆ ₹30 ಲಕ್ಷ ದೇಣಿಗೆ
ಬೆಂಗಳೂರು ಮೂಲದ ಬಿಎಂಕೆ ನಾಗೇಶ್‌ ಅವರು ಟಿಟಿಡಿಯ ಅಧೀನ ಟ್ರಸ್ಟ್‌ ಎಸ್‌ವಿ ಸರ್ವ ಶ್ರೇಯಸ್‌ ಟ್ರಸ್ಟ್‌ಗೆ ₹30 ಲಕ್ಷ ದೇಣಿಗೆ ನೀಡಿದ್ದಾರೆ. ತಿರುಪತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಕಚೇರಿಗೆ ತೆರಳಿದ ನಾಗೇಶ್‌ ಅವರು ₹30 ಲಕ್ಷದ ಡಿಡಿಯನ್ನು ಮಂಡಳಿಯ ವೆಂಕಯ್ಯ ಚೌಧರಿ ಎನ್ನುವವರಿಗೆ ಹಸ್ತಾಂತರಿಸಿದರು. ಈ ವೇಳೆ ಮಂಡಳಿತ ಸದಸ್ಯ ಭಾನು ಪ್ರಕಾಶ್‌ ರೆಡ್ಡಿ ಇದ್ದರು.

ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಇನ್ಮುಂದೆ ಹಿಂದೂಗಳಿಗೆ ಮಾತ್ರ ಕೆಲಸ, ಸಿಎಂ ಚಂದ್ರಬಾಬು ನಾಯ್ಡು ದಿಢೀರ್ ಆದೇಶ!

ತಿರುಮಲದ ಕರ್ನಾಟಕ ಭವನ ಕಾಮಗಾರಿ ಪೂರ್ಣ
ಆಂಧ್ರದ ತಿರುಮಲದಲ್ಲಿರುವ ರಾಜ್ಯ ಧಾರ್ಮಿಕ ದತ್ತಿಗೆ ಸೇರಿದ ಕರ್ನಾಟಕ ರಾಜ್ಯ ಭವನದ ನವೀಕರಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮೇ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ತಿರುಮಲದ 7.5 ಎಕರೆ ಜಾಗದಲ್ಲಿ ಕರ್ನಾಟಕ ಭವನ ನಿರ್ಮಿಸಲಾಗಿದೆ.

ಭವನದ ಹಳೆಬೀಡು, ಐಹೊಳೆ ಬ್ಲಾಕ್‌ನಲ್ಲಿ ಒಟ್ಟು 322 ಕೊಠಡಿಗಳಿದ್ದು, ನವೀಕರಣ ಕಾರ್ಯ ಮುಗಿದಿದೆ. ಶ್ರೀಕೃಷ್ಣದೇವರಾಯ ಬ್ಲಾಕ್ ನಲ್ಲಿ 36 ವಿವಿಐಪಿ ಕೊಠಡಿಗಳು ಹಾಗೂ ಶ್ರೀಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪದ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಮೇ ತಿಂಗಳೊಳಗೆ ಪೂರ್ಣಗೊಳಲಿದೆ. ಇದರಲ್ಲಿ ಶೇ.60 ಕೊಠಡಿಗಳು ಇತರೆ ರಾಜ್ಯದವರಿಗೆ ಹಾಗೂ ಶೇ.40 ನಮ್ಮ ರಾಜ್ಯದವರಿಗೆ ಮೀಸಲಿಟ್ಟಿದ್ದೇವೆ. ಛತ್ರ ಮತ್ತು 36 ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿ 4 ಸ್ಟಾರ್ ಹೊಟೇಲ್ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.

ಇದನ್ನೂ ಓದಿ: ಯಾವ ದೇವಸ್ಥಾನದ ಪೂಜಾರಿಗೆ ಸಿಗುತ್ತೆ ಹೆಚ್ಚು ಸಂಬಳ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ