ತೀರಥ್ ಸಿಂಗ್ ರಾವತ್ ಉತ್ತರಾಖಂಡ್‌ನ ನೂತನ ಸಿಎಂ!

Published : Mar 10, 2021, 12:23 PM IST
ತೀರಥ್ ಸಿಂಗ್ ರಾವತ್ ಉತ್ತರಾಖಂಡ್‌ನ ನೂತನ ಸಿಎಂ!

ಸಾರಾಂಶ

ಉತ್ತರಾಖಂಡ್ ಗೆ ಹೊಸ ಸಿಎಂ| ತೀರಥ್ ಸಿಂಗ್ ರಾವತ್ ಹೊಸ ಸಿಎಂ| ಡೆಹರಾಡೂನ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲಿ ಆಯ್ಕೆ| ಇಂದು ಸಂಜೆ 4 ಗಂಟೆಗೆ ಹೊಸ ಸಿಎಂ ಪ್ರಮಾಣ ವಚನ ಸ್ವೀಕಾರ| ತೀರಥ್ ಸಿಂಗ್ ರಾವತ್ , ಹಾಲಿ ಸಂಸದ| ಪೌರಿ ಗರ್ವಾಲ್ ಕ್ಷೇತ್ರದ ಸಂಸದ

ಡೆಹ್ರಾಡೂನ್(ಮಾ.10): ಉತ್ತರಾಖಂಡ್ ನೂತನ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. ಬಿಜೆಪಿ ಸಂಸದ ತೀರಥ್ ಸಿಂಗ್ ರಾವತ್ ಸಿಎಂ ಆಗಿ ಆಯ್ಕೆಯಾಗಿದ್ದು, ಇಂದು ಸಂಜೆ 4 ಗಂಟೆಗೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಬಳಿಕ ಇಂದು ಬೆಳಗ್ಗೆ ನಡೆದ ಶಾಂಸಕಾಂಗ ಸಭೆಯಲ್ಲಿ ಪೌರಿ ಗರ್ವಾಲ್ ಕ್ಷೇತ್ರದ ಸಂಸದ ತೀರಥ್ ಸಿಂಗ್ ರಾವತ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಉತ್ತರಾಖಂಡ್ ಸಂಸದರೂ ಆಗಿರುವ ರಾವತ್ ಈ ಹಿಂದೆ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಹೆಸರು ಕೊನೆಯ ಕ್ಷಣದವರೆಗೂ ಕೇಳಿಬಂದಿತ್ತು, ಅಂತಿಮವಾಗಿ ತೀರಥ್ ಸಿಂಗ್ ರಾವತ್ ಹೆಸರನ್ನು ಅಂತಿಮಗೊಳಿಸಲಾಗಿದೆ.

ನೂತನ ಮುಖ್ಯಮಂತ್ರಿ ಹೆಸರನ್ನು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೇ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಾರ್ಚ್ 09 ರಂದು ರಾಜೀನಾಮೆ ಸಲ್ಲಿಸಿದ್ದರು, ಪಕ್ಷದದಲ್ಲಿನ ಆಂತರಿಕ ಬೆಳವಣಿಗೆ ಬಳಿಕ ರಾವತ್ ಈ ನಿರ್ಧಾರಕ್ಕೆ ಬಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Mobile Tower Stolen: ಮೊಬೈಲ್‌ ಅಲ್ರೀ.. 40 ಅಡಿ ಟವರ್‌ ಕದ್ದ ಕಳ್ಳರು! ಖಾಲಿ ಜಾಗ ನೋಡಿ ಎಲ್ರೂ ಕಂಗಾಲು!
demographic changes: ಗಡಿ ಪ್ರದೇಶಗಳಿಗೆ ಭೇಟಿನೀಡಿ ಜನಸಂಖ್ಯಾ ಬದಲು ಪರಿಶೀಲಿಸಲು ಅಮಿತ್ ಶಾ ಮಹತ್ವದ ಆದೇಶ!