ಪ್ರಧಾನಿ ಮೋದಿ ಮನವಿ ಬೆನ್ನಲ್ಲೇ ತಿರಂಗ ಡಿಪಿ ಹಾಕಿದ ಕಾಂಗ್ರೆಸ್, ಆದರೆ ಎರೆಡೆರಡು ಟ್ವಿಸ್ಟ್!

By Contributor AsianetFirst Published Aug 3, 2022, 1:39 PM IST
Highlights

ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ವ್ಯಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರೋಫೈಲ್ ಪಿಕ್‌ನ್ನು ತಿರಂಗ ಹಾಕುವಂತೆ ಮನವಿ ಮಾಡಿದ್ದಾರೆ. ಮೋದಿ ಮನವಿ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರು ತಿರಂಗ ಪ್ರೋಫೈಲ್ ಪಿಕ್ ಹಾಕಿದ್ದಾರೆ. ಆದರೆ ಅಷ್ಟಕ್ಕೆ ಕಾಂಗ್ರೆಸ್ ಸುಮ್ಮನಾಗಿಲ್ಲ. ತಿರಂಗ ಜೊತೆಗೆ ಬಿಜೆಪಿಗೆ ಎರಡು ಗುದ್ದು ನೀಡಿದೆ.
 

ನವದೆಹಲಿ(ಆ.03): ಭಾರತ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. 75ನೇ ವರ್ಷದ ಅಮೃತಮಹೋತ್ಸವ ಆಚರಣೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಜಾದಿ ಕಾ ಅಮೃತಮಹೋತ್ಸ ಸಂಭ್ರಮ ಇಮ್ಮಡಿಗೊಳಿಸಲು ಹರ್ ಘರ್ ತಿರಂಗ( ಮನೆ ಮನೆಯಲ್ಲಿ ರಾಷ್ಟ್ರಧ್ವಜ) ಹಾರಿಸಲು ಕರೆ ನೀಡಿದ್ದಾರೆ. ಇಷ್ಟೇ ಅಲ್ಲ ವ್ಯಾಟ್ಸ್ಆ್ಯಪ್, ಸಾಮಾಜಿಕ ಜಾಲತಾಣಗಳಲ್ಲಿನ ಫ್ರೋಫೈಲ್ ಪಿಕ್‌ನ್ನು ತಿರಂಗ ಆಗಿ ಬದಲಿಸುವಂತೆ ಮೋದಿ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಪ್ರೋಫೈಲ್ ಪಿಕ್ ಬದಲಿಸಿದ್ದಾರೆ. ಆದರೆ ಇದರಲ್ಲೊಂದು ಟ್ವಿಸ್ಟ್ ನೀಡಿದೆ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ರಾಷ್ಟ್ರಧ್ವಜ ಹಿಡಿದ ಇಮೇಜನ್ನು ಕಾಂಗ್ರೆಸ್ ಹಾಗೂ ನಾಯಕರು ಹಾಕಿದ್ದಾರೆ. ಇದರ ಜೊತೆಗೆ ಆರ್‌ಎಸ್ಎಸ್‌ ಕಾಲೆಳೆದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಕರೆ ಬೆನ್ನಲ್ಲೇ ಬಿಜೆಪಿ ಹಾಗೂ ಬಿಜೆಪಿ ನಾಯಕರು, ಸಚಿವರು ತಿರಂಗ ತಮ್ಮ ಪ್ರೋಫೈಲ್ ಪಿಕ್ ಆಗಿ ಬದಲಿಸಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ತಿರಂಗ ಪ್ರೋಫೈಲ್ ಪಿಕ್ ಹಾಕಿದೆ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ರಾಷ್ಟ್ರಧ್ವಜ ಹಿಡಿದಿರುವ ಚಿತ್ರ ಬಳಿಸಿದೆ. ಕಾಂಗ್ರೆಸ್ ಟ್ವಿಟರ್ ಸೇರಿಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಈ ಪಿಕ್ಚರ್ ಬಳಸಿದೆ. ಇನ್ನು ಕಾಂಗ್ರೆಸ್ ನಾಯಕರು ಇದೇ ಇಮೇಜ್ ಬಳಸಿದ್ದಾರೆ. ಬಳಿಕ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜಿಪಿಗೆ ತಿರುಗೇಟು ನೀಡಿದೆ. ತಿರಂಗ ನಮ್ಮ ಹೃದಯ ಹಾಗೂ ರಕ್ತದಲ್ಲಿದೆ. ಡಿಸೆಂಬರ್ 31, 1929ರಲ್ಲಿ ಜವಾಹರ್ ಲಾಲ್ ನೆಹರೂ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ನಮ್ಮ ಹೆಮ್ಮಯೆ ಧ್ವಜಾರೋಹವಾಗಿದೆ. ಇದನ್ನು ಕೆಳಗಿಳಿಸಬಾರದು ಎಂದಿದ್ದರು. ದೇಶದ ಐಕ್ಯತೆ ಸಾರುವ ತ್ರಿವರ್ಣ ಧ್ವಜವನ್ನು ನಾವೆಲ್ಲರು ಗುರುತಾಗಿಸೋಣ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

Latest Videos

 

India@75: ಹರ್‌ ಘರ್‌ ತಿರಂಗಾಕ್ಕೆ 7 ತಿಂಗಳು ಮೊದಲೇ ಸಲಹೆ ಕೊಟ್ಟಿದ್ದ ಕನ್ನಡಿಗ..!

ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಜೈರಾಮ್ ರಮೇಶ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಇದೇ ಪ್ರೋಫೈಲ್ ಪಿಕ್ ಬಳಸಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ಹಾಗೂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಮ್ಮ ಡಿಪಿಯಲ್ಲಿ ಜವಾಹರ್ ಲಾಲ್ ನೆಹರೂ ತ್ರಿವರ್ಣ ಧ್ವಜ ಹಿಡಿದಿರುವ ಪ್ರೋಫೈಲ್ ಪಿಕ್ ಬಳಸಿದ್ದೇವೆ. ಪ್ರಧಾನಿ ಸಂದೇಶ ಅವರ ಕುಟುಂಬಕ್ಕೆ ಇನ್ನೂ ತಲುಪಿಲ್ಲ. ಇಷ್ಟೇ ಅಲ್ಲ 52 ವರ್ಷಗಳಿಂದ ನಾಗ್ಪುರದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡದವರು ಈಗ ಪ್ರಧಾನಿ ಮಾತು ಕೇಳುತ್ತಾರೆಯೇ? ಎಂದು ಜೈ ರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

 

हम हाथ में तिरंगा लिए अपने नेता नेहरू की DP लगा रहे हैं। लेकिन लगता है प्रधानमंत्री का संदेश उनके परिवार तक ही नहीं पहुंचा। जिन्होंने 52 सालों तक नागपुर में अपने हेड क्वार्टर में झंडा नहीं फहराया, वे क्या प्रधानमंत्री की बात मानेंगे? https://t.co/JOiTkYC9cY

— Jairam Ramesh (@Jairam_Ramesh)

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಎಲ್ಲ ನಾಗರಿಕರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ರಾಷ್ಟ್ರಧ್ವಜದ ಡಿಪಿ ಹಾಕಿಕೊಳ್ಳಬೇಕು ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ರಾಷ್ಟ್ರಧ್ವಜವನ್ನು ತಮ್ಮ ಡಿಸ್‌ಪ್ಲೇ ಪಿಕ್ಚರ್‌ (ಡಿಪಿ)ನಲ್ಲಿ ಹಾಕಿಕೊಂಡಿದ್ದಾರೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಕೂಡಾ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿತೀನ್‌ ಗಡ್ಕರಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೊದಲಾದವರು ಟ್ವೀಟರ್‌ ಖಾತೆಯಲ್ಲಿ ರಾಷ್ಟ್ರಧ್ವಜದ ಡಿಪಿ ಹಾಕಿದ್ದಾರೆ.

 

Har Ghar Tiranga: 1 ಕೋಟಿ ರಾಷ್ಟ್ರಧ್ವಜ ಹಾರಾಟ ಗುರಿ: ಸಿಎಂ ಬೊಮ್ಮಾಯಿ

click me!