ಮಾಸ್ಕ್‌ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಸೋಂಕು!

By Suvarna NewsFirst Published Apr 12, 2020, 1:03 PM IST
Highlights

‘ಮಾಸ್ಕ್‌ ಹಾಕಿಕೊಳ್ಳುವ ಬದಲು ದೇವರ ಮೇಲೆ ನಂಬಿಕೆ ಇಡಿ. ಸಣ್ಣ ಬಟ್ಟೆಯ ತುಂಡಿನಿಂದ ಏನೂ ಆಗಲ್ಲ’| ಮಾಸ್ಕ್‌ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಸೋಂಕು!

ಭೋಪಾಲ್(ಏ.12): ಕೊರೋನಾ ವೈರಸ್‌ ಬಾರದಿರಲೆಂದು ಎಲ್ಲರೂ ಮಾಸ್ಕ್‌ ಹಾಕಿಕೊಳ್ಳುತ್ತಿದ್ದಾರೆ. ಆದರೆ, ‘ಮಾಸ್ಕ್‌ ಹಾಕಿಕೊಳ್ಳುವ ಬದಲು ದೇವರ ಮೇಲೆ ನಂಬಿಕೆ ಇಡಿ. ಸಣ್ಣ ಬಟ್ಟೆಯ ತುಂಡಿನಿಂದ ಏನೂ ಆಗಲ್ಲ’ ಎಂದು ತಮಾಷೆಯ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಟಿಕ್‌ಟಾಕ್‌ ಸ್ಟಾರ್‌ವೊಬ್ಬ ಈ ತನ್ನ ತಪ್ಪಿಗೆ ಪರಿತಪಿಸುವಂತಾಗಿದೆ. ಏಕೆಂದರೆ, ಆತನಿಗೇ ಈಗ ಕೊರೋನಾ ಸೋಂಕು ತಗುಲಿದೆ.

ಜಬಲ್ಪುರದಲ್ಲಿರುವ ತನ್ನ ಸೋದರಿಯ ಮನೆಗೆ ಹೋಗಿದ್ದ ವೇಳೆ, ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ ವೇಳೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. 

MP: TikTok user Samir Khan who mocked face mask in video tests positive for Coronavirus pic.twitter.com/XVoAWBMoww

— Akash Modani (@akash_modani)

ಆತ ಈಗ ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಟಿಕ್‌ಟಾಕ್‌ ಮೂಲಕ ಮನವಿ ಮಾಡಿಕೊಂಡಿದ್ದಾನೆ.

click me!