ಮೃತನ ಶೇಖರಿಸಿಟ್ಟ ವೀರ್ಯ ಪೋಷಕರಿಗೆ ನೀಡಲು ಕೋರ್ಟ್ ಆದೇಶ, ಏನಿದು ಮರಣೋತ್ತರ ಸಂತಾನೋತ್ಪತ್ತಿ?

By Chethan Kumar  |  First Published Oct 4, 2024, 7:09 PM IST

ಗಂಗಾರಾಮ್ ಆಸ್ಪತ್ರೆಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೃತಪಟ್ಟ ವ್ಯಕ್ತಿಯಿಂದ ಶೇಖರಿಸಿದ ವೀರ್ಯವನ್ನು ಸಂತಾನೋತ್ಪತ್ತಿಗಾಗಿ ಪೋಷಕರಿಗೆ ನೀಡಿ ಎಂದು ಹೈಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಮರಣೋತ್ತರ ಸಂತಾನೋತ್ಪತ್ತಿ ನಿಯಮದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.


ನವದೆಹಲಿ(ಅ.04) ಭಾರತದಲ್ಲಿ ಇದೀಗ ಮರಣೋತ್ತರ ಸಂತಾಪನೋತ್ಪತ್ತಿ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ದೆಹಲಿ ಹೈಕೋರ್ಟ್ ನೀಡಿದ ಮಹತ್ವದ ಆದೇಶ. ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಶೇಖರಿಸಿಟ್ಟಿರುವ ಮೃತ ವ್ಯಕ್ತಿಯ ವೀರ್ಯವನ್ನು ಸಂತಾನೋತ್ಪತ್ತಿಗಾಗಿ ಮೃತನ ಪೋಷಕರಿಗೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ. ಭಾರತದಲ್ಲಿ ಮರಣೋತ್ತರ ಸಂತಾನೋತ್ಪತ್ತಿಗೆ ಕಾನೂನಿನಲ್ಲಿ ಅವಕಾಶಗಳಿಲ್ಲ. ಆದರೆ ಈ ಪ್ರಕರಣದಲ್ಲಿ ಮೃತನ ಪೋಷಕರ ಗಮನದಲ್ಲಿಟ್ಟುಕೊಂಡು ಕುಟುಂಬದ ಸಂತಾನೋತ್ಪತ್ತಿಗಾಗಿ ಆದೇಶ ನೀಡಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

2020ರಲ್ಲಿ ಇರುವ ಏಕೈಕ ಪುತ್ರ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಈ ವೇಳೆ ಪೋಷಕರು ಕುಟುಂಬದ ಸಂತಾನೋತ್ಪತ್ತಿಗಾಗಿ ಮೃತ ಮಗನ ವೀರ್ಯ ನೀಡುವಂತೆ ಮನವಿ ಮಾಡಿದ್ದರು. ವೀರ್ಯವನ್ನು ಶೇಖರಿಸಿ ಫ್ರೀಜರ್ ಮಾಡಿದ ಸರ್ ಗಂಗಾರಾಮ್ ಆಸ್ಪತ್ರೆಗೆ ಹಸ್ತಾಂತರಿಸಲು  ಕಾನೂನಿನ ತೊಡಕು ಎದುರಾಗಿತ್ತು. ಸರ್ಕಾರದಿಂದ ಈ ಕುರಿತು ಯಾವುದೇ ನಿರ್ದೇಶವಿಲ್ಲದ ಕಾರಣ ವೀರ್ಯವನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಹೇಳಿತ್ತು.

Tap to resize

Latest Videos

ವಿಶ್ವಾದ್ಯಂತ ಬ್ರಿಟನ್ ಪುರುಷರ ವೀರ್ಯಕ್ಕೆ ಮುಗಿಬಿದ್ದ ಜನ, ಸ್ಫೋಟಕ ವರದಿ ಬಹಿರಂಗ!

ಇತ್ತ ಪೋಷಕರು ಮೃತ ಮಗನ ವೀರ್ಯ ಪಡೆಯಲು ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತ ಆಸ್ಪತ್ರೆ IVF ಲ್ಯಾಬ್‌ನಲ್ಲಿ ಮೃತನ ವೀರ್ಯ ಶೇಖರಿಸಿಟ್ಟಿತು. ಇತ್ತ 2022ರಲ್ಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿತ್ತು. ಮರಣೋತ್ತರ ಸಂತಾನೋತ್ಪತ್ತಿ ಕುರಿತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಸ್ಪತ್ರೆಗೆ ಬಳಿ ಸ್ಪಷ್ಟನೆ ಕೇಳಿತ್ತು. ಈ ಕುರಿತು ನಿಮಯ ಹಾಗೂ ನಿರ್ಧಾರಗಳೇನು ಎಂಬುದನ್ನು ಕೇಳಿತ್ತು. ಆದರೆ ಇಲಾಖೆ ಈ ಕುರಿತು ಸ್ಪಷ್ಟ ನಿಲವು ತಾಳಲು ಅಸಾಧ್ಯವಾಯಿತು. ಈ ಕುರಿತು ಸ್ಪಷ್ಟ ನಿಯಮ ಇಲ್ಲ ಎಂದಿತ್ತು. ಇಷ್ಟೇ ಅಲ್ಲ ICMR ಮಾರ್ಗಸೂಚಿ ಹಾಗೂ ಬಾಡಿಗೆ ತಾಯ್ತನ ಕಾಯ್ದೆಯಲ್ಲಿ  ಈ ಕುರಿತು ಉಲ್ಲೇಖವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ವಿಚಾರಣೆ ಮುಂದುವರಿಸಿದ ದೆಹಲಿ ಹೈಕೋರ್ಟ್ ಬರೋಬ್ಬರಿ 4 ವರ್ಷಗಳ ಬಳಿಕ ಷರತ್ತುಗಳೊಂದಿಗೆ ಮೃತನ ವೀರ್ಯವನ್ನು ಪೋಷಕರಿಗೆ ಹಸ್ತಾಂತರಿಸಲು ಆಸ್ಪತ್ರಗೆ ಸೂಚಿಸಿದೆ. ಭಾರತದಲ್ಲಿ ಮರಣೋತ್ತರ ಸಂತಾನೋತ್ಪತ್ತಿ ಕುರಿತು ಅವಕಾಶವಿಲ್ಲ. ಆದರೆ ಮೃತನ ಪೋಷಕರಿಗೆ ಕುಟುಂಬ ಸಂತಾನೋತ್ಪತ್ತಿ ಹಾಗೂ ಮಕ್ಕಳನ್ನು ಬೆಳೆಸುವ ಉದ್ದೇಶದಿಂದ ಬಾಡಿಗೆ ತಾಯ್ತನದ ಮೂಲಕ ಸಂತಾನೋತ್ಪತ್ತಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಈ ವೀರ್ಯವನ್ನು ವಾಣಿಜ್ಯ ಉದ್ದೇಶಕಕ್ಕಾಗಿ ಬಳಸಬಾರದು ಎಂದು ಎಚ್ಚರಿಕೆ ನೀಡಿದೆ.

 ಪುರುಷರು ಇಲ್ಲೆಲ್ಲಾ ಮೊಬೈಲ್‌ ಇಟ್ಟುಕೊಂಡರೆ ಬೇಗ ಔಟ್!‌

ಈ ಆದೇಶದ ಬಳಿಕ ಇದೀಗ ಮರಣೋತ್ತರ ಸಂತಾನೋತ್ಪತ್ತಿ ಒಳಿತು ಕೆಡುಕು, ಇದರಿಂದ ಆಗುವ ಪ್ರಯೋಜನ, ಅಪಾಯಗಳ ಕುರಿತು ಚರ್ಚೆಯಾಗುತ್ತಿದೆ. 
 

click me!