ಮಗುವನ್ನು ಎತ್ತಿಕೊಂಡು ಪರಿಶೀಲಿಸಿದಾಗ ತಾಯಿಗೆ ಮದ್ಯದ ವಾಸನೆ ಬಂದಿದೆ. ಅನುಮಾನಗೊಂಡು ಅತ್ತೆಯ ಕೋಣೆ ಬಳಿ ಹೋದಾಗ ಕೆಳಗೆ ಮದ್ಯದ ಬಾಟೆಲ್ ಬದ್ದಿರೋದು ಕಂಡು ಬಂದಿದೆ.
ರಾಯ್ಪುರ: ಮೂರು ವರ್ಷದ ಹೆಣ್ಣು ಮಗು ಅಜ್ಜಿಯ ಮದ್ಯವನ್ನು ನೀರು ಎಂದು ಕುಡಿದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮದ್ಯ ಸೇವಿಸಿದ್ದ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತಿದ್ದಂತೆ ಪೋಷಕರು ಕಂದಮ್ಮನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುದ್ದಾದ ಹೆಣ್ಣು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸರಿತಾ ಮದ್ಯ ಸೇವಿಸಿ ಸಾವನ್ನಪ್ಪಿದ ಮೂರು ವರ್ಷದ ಮಗು. ಮೃತ ಸರಿತಾ ಬಲರಾಮ್‌ಪುರ ಜಿಲ್ಲೆಯ ತ್ರಿಕುಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕುಂತ್‌ಪುರ ಗ್ರಾಮದ ರಾಮ್ ಸೇವಕ್ ಎಂಬವರು ಮಗಳು. ಮನೆಯಲ್ಲಿ ಆಟವಾಡುತ್ತಿದ್ದ ಸರಿತಾ ಅಜ್ಜಿಯ ಕೋಣೆಗೆ ಹೋಗಿದ್ದಾರೆ. ಅಜ್ಜಿ ಇರಿಸಿದ್ದ ಮದ್ಯದ ಬಾಟೆಲ್ ಹಿಡಿದುಕೊಂಡ ಸರಿತಾ ಅದನ್ನು ಕುಡಿದಿದ್ದಾಳೆ. ಕೆಲವೇ ಸಮಯದಲ್ಲಿ ಮಗುವಿಗೆ ಮದ್ಯದ ನಶೆ ಏರಿದೆ. ಅಳುತ್ತಾ, ಅಲ್ಲಾಡುತ್ತಾ ಸರಿತಾ ತಾಯಿ ಬಳಿ ಬರುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ.
ಬಾರ್‌ನಲ್ಲಿ ಯುವತಿಯರ ಜೊತೆ ಬಿಜೆಪಿ ನಾಯಕನ ಅಶ್ಲೀಲ ಡ್ಯಾನ್ಸ್ - ವಿಡಿಯೋ ವೈರಲ್
ಮಗುವನ್ನು ಎತ್ತಿಕೊಂಡು ಪರಿಶೀಲಿಸಿದಾಗ ತಾಯಿಗೆ ಮದ್ಯದ ವಾಸನೆ ಬಂದಿದೆ. ಅನುಮಾನಗೊಂಡು ಅತ್ತೆಯ ಕೋಣೆ ಬಳಿ ಹೋದಾಗ ಕೆಳಗೆ ಮದ್ಯದ ಬಾಟೆಲ್ ಬದ್ದಿರೋದು ಕಂಡು ಬಂದಿದೆ. ಕೂಡಲೇ ಮಗುವನ್ನು ಕರೆದುಕೊಂಡು ಸಮೀಪದ ವದ್ರಾಫ್‌ನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ನಂತರ ವೈದ್ಯರಿಗೆ ಮಗು ಮದ್ಯ ಕುಡಿದಿರುವ ಬಗ್ಗೆ ಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.
ನಂತರ ಪೋಷಕರು ಮಗುವನ್ನು ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಇಲ್ಲಿಯೂ ಮಗುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸರಿತಾ ಉಸಿರು ಚೆಲ್ಲಿದೆ. ಇತ್ತ ತಮ್ಮ ನಿರ್ಲಕ್ಷ್ಯದಿಂದ ಮಗುವನ್ನು ಕಳೆದುಕೊಂಡು ತಾಯಿ ಮತ್ತು ಅಜ್ಜಿ ಅತ್ತು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಮ್ಮಿ… 10 ನಿಮಿಷದಲ್ಲಿ ಬಂದೆ ಅಂತ ಮುಂದೆ ಹೋಗ್ತಿದ್ದಂತೆ ಸಾವು, ಒಣಹುಲ್ಲಿನಂತೆ ಮಳೆ ನೀರಿನಲ್ಲಿ ಮುಳುಗಿದ ಬಾಲಕ!