
ಲಕ್ನೋ (ಜೂ.5): ಹಾವು ಕಚ್ಚಿ ವ್ಯಕ್ತಿ ಸಾವು, ಹಾವು ಕಚ್ಚಿ ಪುಟ್ಟ ಮಗು ಸಾವು ಇಂಥ ಸುದ್ದಿಗಳನ್ನು ಸಾಮಾನ್ಯವಾಗಿಯೇ ಕೇಳಿಯೇ ಇರುತ್ತೀರಿ. ಆದರೆ, ಉತ್ತರ ಪ್ರದೇಶದ ಫಾರುಖಾಬಾದ್‌ನಲ್ಲಿ ಅಚ್ಚರಿಯ ಘಟನೆಯ ನಡೆದಿದೆ. ಆಟವಾಡುವ ವೇಳೆ ಮೂರು ವರ್ಷದ ಮಗು ಚಾಕಲೆಟ್ ಅಂದುಕೊಂಡು ಹಾವನ್ನು ಹಿಡಿದು ಬಾಯಿಗೆ ಹಾಕಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಹಾವನ್ನು ಜಗಿದಿದೆ. ಇದನ್ನು ನೋಡಿದ ಮನೆಯವರು ಮಗುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದರೊಂದಿಗೆ ಮಗುವಿನ ಬಾಯಿಯಿಂದ ಹೊರತೆಗೆದ ಸತ್ತ ಹಾವನ್ನೂ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಘಟನೆಯ ವಿವರ ಕೇಳಿದ ವೈದ್ಯರೂ ಕೂಡ ಮಗುವಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಮಗು ಆರೋಗ್ಯದಿಂದ ಇದ್ದು, ಹಾವನ್ನು ಕಚ್ಚಿದ್ದರಿಂದ ಯಾವುದೇ ದೊಡ್ಡ ಸಮಸ್ಯೆ ಆಗಿಲ್ಲ. ಮೊಹಮದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮಡ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಾಸವಾಗಿರುವ ದಿನೇಶ್ ಕುಮಾರ್ ಎನ್ನುವ ವ್ಯಕ್ತಿಯ ಮೂರು ವರ್ಷದ ಮಗ ಹಾವನ್ನು ಜಗಿದಿದ್ದಾನೆ.
ಭಾನುವಾರ ಈ ಘಟನೆ ನಡೆದಿದ್ದು, ಮನೆಯ ಹೊರಗಡೆ ಆಟವಾಡುವ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಮನೆಯ ಸಮೀಪದ ಪೊದೆಯಿಂದ ಪುಟ್ಟ ಹಾವೊಂದು ಹೊರಬಂದು ಮಗುವಿನ ಮುಂದೆ ಬಂದಿತ್ತು. ಇದಾದ ಬಳಿಕ ಮಗು ತಮಾಷೆಯಾಗಿ ಹಾವನ್ನು ಬಾಯಿಯಲ್ಲಿ ಇಟ್ಟುಕೊಂಡು ಜಗಿಯುತ್ತಿತ್ತು. ಅಷ್ಟರಲ್ಲಿ ಮಗುವಿನ ಅಜ್ಜಿಯ ಕಣ್ಣು ಅವನ ಮೇಲೆ ಬಿತ್ತು.
ಸತ್ತ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಹೋದ ಕುಟುಂಬ: ಆತನ ಕೈಯಲ್ಲಿದ್ದ ಹಾವನ್ನು ನೋಡಿ ಮಗುವಿನ ಅಜ್ಜಿ ಕಿರುಚಿಕೊಂಡಿದ್ದು, ಮಗುವಿನ ಕೈಯಿಂದ ಹಾವನ್ನು ತೆಗೆದು ಎಸೆದಿದ್ದಾರೆ. ಬಳಿಕ ಕುಟುಂಬಸ್ಥರು ತರಾತುರಿಯಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದರೊಂದಿಗೆ ಸಂಬಂಧಿಕರು ಸತ್ತ ಹಾವನ್ನು ಕೂಡ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು.
ನಿಮ್ಮ ಕನಸಿನಲ್ಲಿ ಹಾವು ಬರುತ್ತಿದೆಯಾ?: ಇದು ನಿಮ್ಮ ಅದೃಷ್ಟ ಬದಲಾಗುವ ಸಮಯ
ಇನ್ನು ಮಗುವನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಿದ್ದಾರೆ. ಆದರೆ, ಮಗುವಿನ ಬಗ್ಗೆ ಕೇಳಿದ ವ್ಯಕ್ತಿಗಳೆಲ್ಲಾ ಅಚ್ಚರಿ ಪಟ್ಟಿದ್ದಾರೆ, ಸ್ವತಃ ವೈದ್ಯರೂ ಕೂಡ ಈ ವಿಚಾರದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
ಕಾಫಿನಾಡಿನ ಉರಗ ತಜ್ಞ ಸ್ನೇಕ್ ನರೇಶ್ ಹಾವು ಕಚ್ಚಿ ಸಾವು: ರಕ್ಷಣೆ ಮಾಡಿದ ಹಾವೇ ಕಚ್ಚಿಬಿಡ್ತು!
ಮೊಮ್ಮಗ ಮನೆಯ ಹೊರಗಡೆ ಆಟವಾಡುತ್ತಿದ್ದ. ಈ ವೇಳೆ ನಾನೂ ಕೂಡ ಅಲ್ಲಿಯೇ ಇದ್ದೆ. ಕೆಲ ಹೊತ್ತಿನ ಬಳಿಕ ಅತ ಏನೋ ಜಗಿಯುತ್ತಿರುವುದನ್ನು ನೋಡಿದೆ. ಈ ವೇಳೆ ಹಾವಿನ ಬಾಲ ಕಂಡಿದೆ. ತಕ್ಷಣವೇ ನಾನು ಕಿರುಚಿಕೊಂಡಿದ್ದೆ. ಮನೆಯವರೆಲ್ಲಾ ಬಂದು ಆತನ ಬಾಯಲ್ಲಿದ್ದ ಹಾವನ್ನು ತೆಗೆದು ಎಸೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಹಾವು ಜೀವ ಬಿಟ್ಟಿತ್ತು. ಆದರೆ, ನಮಗೆ ಸಮಾಧಾನವಿರಲಿಲ್ಲ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮಗು ಹುಷಾರಾಗಿದೆ ಎಂದು ಹೇಳಿದಾಗಲೇ ಸಮಾಧಾನ ಬಂದಿತ್ತು. ಆದರೆ, ಹಾವು ಸಾವು ಕಂಡಿದೆ ಎಂದಉ ಅಜ್ಜಿ ಸುನೀತಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ