
ನವದೆಹಲಿ: ಶನಿವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಸಭೆಯಲ್ಲಿ ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ ವಿಧಿಸುವ ಕುರಿತು ನಿರ್ಣಯ ಕೈಗೊಳ್ಳಲಾಯ್ತು. ಈ ನಿರ್ಣಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಾಪ್‌ಕಾರ್ನ್ ಫೋಟೋಗಳಿಗೆ ಹೊಂದಿಸಿ ಟ್ರೋಲ್ ಮಾಡಲಾಗುತ್ತಿದೆ.
ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ರೀತಿಯ ಪಾಪ್‌ಕಾರ್ನ್ ಮೇಲೆ ಬೇರೆ ಬೇರೆ ತೆರಿಗೆ ವಿಧಿಸಲಾಗುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ಸಾಲ್ಟ್ ಆಂಡ್ ಮಸಾಲೆ ಅನ್‌ಪ್ಯಾಕಡ್ ರೆಡಿ ಟು ಈಟ್ ಪಾಪ್‌ಕಾರ್ನ್ ಮೇಲೆ ಶೇ.5, ಪ್ಯಾಕ್ ಮತ್ತು ಲೇಬಲ್ ಇರೋ ಪಾಪ್‌ಕಾರ್ನ್ ಮೇಲೆ ಶೇ.12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಕ್ಯಾರೆಮಲೈಸಡ್ ಪಾಪ್‌ಕಾರ್ನ್ ಮೇಲೆ ಶೇ.18ರಷ್ಟು ವಿಧಿಸಲಾಗುತ್ತದೆ.
ಜಿಎಸ್‌ಟಿ ಕೌನ್ಸಿಲ್ ಈ ನಿರ್ಧಾರದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಬರಲು ಶುರುವಾಗಿದೆ. ನಮ್ಮ ಮೇಲೆಯೂ ಜಎಸ್‌ಟಿ ಅನ್ವಯವಾಗುತ್ತಿದ್ದು, ಇನ್ಮುಂದೆ ನಮಗೂ ಸಂಪೂರ್ಣ ಗೌರವ ಸಿಗಬೇಕು ಎಂದು ಪಾಪ್‌ಕಾರ್ನ್ ಹೇಳುವ ರೀತಿಯಲ್ಲಿ ಮೀಮ್ಸ್ ರಚಿಸಲಾಗುತ್ತಿದೆ. ಇನ್ಮುಂದೆ ಶ್ರೀಮಂತರು ಮಾತ್ರ ಥಿಯೇಟರ್‌ನಲ್ಲಿ ಪಾಪ್‌ಕಾರ್ನ್ ತಿನ್ನಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ