ಪಾಕಿಸ್ತಾನಿ ಮೂಲದ ಸೀಮಾ ಹೈದರ್ ಮತ್ತೊಮ್ಮೆ ಅಮ್ಮನಾಗ್ತಿದ್ದಾರೆ. ಸಚಿನ್ ಮಗುವಿಗೆ ತಾಯಿಯಾಗ್ತಿರುವ ಸೀಮಾ ಈ ಖುಷಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸ್ವಲ್ಪ ದಿನ ಸುದ್ದಿಯಿಂದ ದೂರವಿದ್ದ ಸೀಮಾ ಹೈದರ್ (Seema Haider) ಈಗ ಮತ್ತೆ ಚರ್ಚೆಗೆ ಬಂದಿದ್ದಾರೆ. ತನ್ನ ಬೆಂಬಲಿಗರಿಗೆ ಸೀಮಾ ಹೈದರ್ ಖುಷಿ ಸುದ್ದಿಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾ (Social Media)ದಲ್ಲಿ ಸೀಮಾ ಹೈದರ್ ವಿಡಿಯೋ ಒಂದು ವೈರಲ್ ಆಗಿದೆ. ಇದ್ರಲ್ಲಿ ಸೀಮಾ, ತಾನು ಗರ್ಭಿಣಿ (pregnant) ಎಂಬ ವಿಷ್ಯವನ್ನು ಪತಿ ಸಚಿನ್ ಮೀನಾ (Sachin Meena)ಗೆ ಮಾತ್ರವಲ್ಲ ತನ್ನ ಫಾಲೋವರ್ಸ್ಗೆ ಹೇಳಿದ್ದಾರೆ. ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಗ್ರೇಟರ್ ನೋಯ್ಡಾಕ್ಕೆ ಅಕ್ರಮವಾಗಿ ಓಡಿ ಬಂದಿರುವ ಸೀಮಾ ಹೈದರ್ ಈಗ ಐದನೇ ಬಾರಿ ಗರ್ಭಿಣಿಯಾಗಿದ್ದಾರೆ. ಸೀಮಾ 7 ತಿಂಗಳ ಗರ್ಭಿಣಿ. ಪ್ರೆಗ್ನೆನ್ಸಿ ಕಿಟ್‌ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೀಮಾ ತಮ್ಮ ಗರ್ಭಧಾರಣೆಯನ್ನು ಬಹಿರಂಗಪಡಿಸಿದ್ದಾರೆ.
ಸೀಮಾ ಗರ್ಭಿಣಿ ಎಂಬ ವಿಷ್ಯ ಅನೇಕ ದಿನಗಳಿಂದ ಕೇಳಿ ಬರ್ತಾನೆ ಇತ್ತು. ಆದ್ರೆ ಅದಕ್ಕೆ ಯಾವುದೇ ಸ್ಪಷ್ಟೀಕರಣ ಸಿಕ್ಕಿರಲಿಲ್ಲ. ಈಗ ಸೀಮಾ ಸ್ವತಃ ತಾವೇ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪ್ರೆಗ್ನೆನ್ಸಿ ಕಿಟ್ ಅನ್ನು ಸಚಿನ್ ಮೀನಾಗೆ ತೋರಿಸುತ್ತಾರೆ. ಇದನ್ನು ನೋಡಿ ಸಚಿನ್ ಖುಷಿಯಾಗಿ, ಹೌದಾ ಎನ್ನುತ್ತಾರೆ. ವಿಡಿಯೋದಲ್ಲಿ ಸೀಮಾ ಬೇಬಿ ಬಂಪ್ ಸ್ಪಷ್ಟವಾಗಿ ಕಾಣ್ತಿದೆ. ಅವರು 7 ತಿಂಗಳ ಗರ್ಭಿಣಿಯಾಗಿದ್ದು, ಹೊಸ ವರ್ಷ ಮನೆಗೆ ಹೊಸ ಅತಿಥಿ ಬರಲಿದೆ.
undefined
ಹೃದಯ ಸಮಸ್ಯೆಗೆ ಒತ್ತಡವೇ ಶತ್ರು, ರಕ್ಷಣೆ ಹೇಗೆ ಅಂತ ಹೇಳ್ತಾರೆ ಸುಷ್ಮಿತಾ ಸೇನ್ ಡಾಕ್ಟರ್
ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮೊದಲು ಪ್ರೆಗ್ನೆನ್ಸಿ ಕಿಟ್ ಅನ್ನು ಸಚಿನ್ ಮುಂದೆ ಹಿಡಿಯುತ್ತಾರೆ. ಇದನ್ನು ನೋಡಿ ಸಚಿನ್ ಹೌದಾ ಎನ್ನುತ್ತ ಖುಷಿಯಾಗ್ತಾರೆ. ಇಷ್ಟು ದಿನ ವಿಷ್ಯವನ್ನು ಎಲ್ಲರ ಮುಂದೆ ಹೇಳಿರಲಿಲ್ಲ. ಅದಕ್ಕೆ ಕಾರಣವಿದೆ. ಕೆಟ್ಟ ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೆ ನಾವು ಹೇಳಿಲ್ಲ. ಪ್ರೆಗ್ನೆನ್ಸಿ ಆರಂಭದಲ್ಲಿ ಆರೋಗ್ಯ ಸ್ವಲ್ಪ ಏರುಪೇರಾಗ್ತಾ ಇತ್ತು. ಆರೋಗ್ಯ ಸುಧಾರಿಸಿದ ಮೇಲೆ ಎಲ್ಲ ವಿಷ್ಯವನ್ನು ಬಳಕೆದಾರರ ಮುಂದಿಡಲು ಸೀಮಾ ಯೋಚಿಸಿದ್ದರಂತೆ. ಸೀಮಾ ಗರ್ಭಿಣಿ ಎಂಬ ವಿಷ್ಯವನ್ನು ಸಚಿನ್ ಹಾಗೂ ಅವರ ತಂದೆ ಕೂಡ ಸ್ಪಷ್ಟಪಡಿಸಿದ್ದಾರೆ. ಕೈ ನೋಡಿ ಮಗು ಯಾವ್ದು ಎಂಬುದನ್ನು ಹೇಳಬಲ್ಲೆ, ಸೀಮಾಗೆ ಗಂಡು ಮಗು ಜನಿಸಲಿದ್ದು, ನಮ್ಮ ಮನೆಗೆ ಮೊಮ್ಮಗ ಬರಲಿದ್ದಾನೆ ಎಂದು ಸೀಮಾ ಮಾವ ಹೇಳಿದ್ದಾರೆ.
ಸೀಮಾ ಹೈದರ್ ಮೇ 2023 ರಲ್ಲಿ ನೇಪಾಳದ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಸೀಮಾ ಆನ್‌ಲೈನ್ ಮಾಧ್ಯಮದ ಮೂಲಕ ಸಚಿನ್ ಗೆ ಪರಿಚಿತರಾಗಿದ್ದರು. ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ಸೀಮಾ ಸಚಿನ್‌ಗಾಗಿ ತನ್ನ ಮನೆ ಮತ್ತು ಕುಟುಂಬವನ್ನು ತೊರೆದು ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದರು. ಅಂದಿನಿಂದ, ಸೀಮಾ ಹೈದರ್ ಭಾರತ ಮತ್ತು ಪಾಕಿಸ್ತಾನದಲ್ಲಿ ಹಾಟ್ ಟಾಪಿಕ್ ಆಗಿ ಉಳಿದಿದ್ದಾರೆ. ಸೀಮಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದರು. ಸೀಮಾ ಹಾಗೂ ಸಚಿನ್ ಸಂಬಂಧವನ್ನು ಅನೇಕರು ವಿರೋಧಿಸಿದ್ದರೂ ಎಲ್ಲವನ್ನು ಎದುರಿಸಿ ನಿಂತಿದ್ದಾರೆ ಈ ಜೋಡಿ. ಸೀಮಾ, ತಮ್ಮ ಭಾರತೀಯ ಪತಿ ಸಚಿನ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ.
ಮಟಮಟ ಮಧ್ಯಾಹ್ನವೇ ಓಲಾ ಕ್ಯಾಬ್‌ನಲ್ಲಾದ ಭಯಾನಕ ಅನುಭವ ಹಂಚಿಕೊಂಡ ಮಹಿಳೆ
ಸೀಮಾ ಹೈದರ್ ಪಾಕಿಸ್ತಾನದಲ್ಲಿ ಈಗಾಗಲೇ ಮದುವೆಯಾಗಿದ್ದರು. ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ಪತಿ ಗುಲಾಂ ಹೈದರ್ ಅವರನ್ನು ಪಾಕಿಸ್ತಾನದಲ್ಲಿ ಬಿಟ್ಟು, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಈಗ ಸೀಮಾ ಗರ್ಭಿಣಿ ಎಂಬ ವಿಷ್ಯ, ಸೀಮಾ ತವರಿನವರಿಗೂ ತಿಳಿಯಲಿ ಎಂಬ ಕಾರಣಕ್ಕೆ ವಿಡಿಯೋ ಹಂಚಿಕೊಂಡಿರೋದಾಗಿ ಸಚಿನ್ ಹೇಳಿದ್ದಾರೆ. ಹಾಗೆಯೇ ತಮ್ಮ ಕೆಲಸವನ್ನು ಖಂಡಿಸಿದ್ದ ಜನರಿಗೆ ಸಚಿನ್ ಮಾತಿನ ಏಟು ನೀಡಿದ್ದಾರೆ.