ಹಣವಿಲ್ಲದ್ದಕ್ಕೆ ಬೆಂಗಳೂರಿಂದ ಒಡಿಶಾಗೆ ನಡೆದೇ ಹೋದ ಕಾರ್ಮಿಕರು: 1000 ಕಿ.ಮೀ. ಹೋದವ್ರಿಗೆ ಸ್ಥಳೀಯರ ನೆರವು

By Kannadaprabha News  |  First Published Apr 5, 2023, 11:55 AM IST

ಹಣವಿಲ್ಲದ್ದಕ್ಕೆ ಬೆಂಗಳೂರಿಂದ ಒಡಿಶಾಗೆ ಕಾರ್ಮಿಕರು ನಡೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಉದ್ಯೋಗದಾತ ಹಣ ಕೊಡದ್ದರಿಂದ ಸಂಕಷ್ಟ ಅನುಭವಿಸಿದ್ದು, 1000 ಕಿ.ಮೀ ನಡೆದವರಿಗೆ ಸ್ಥಳೀಯರು ನೆರವು ನೀಡಿದ್ದಾರೆ ಎಂದು ತಿಳಿದುಬಂದಿದೆ. 


ಕೋರಾಪುಟ್‌ (ಏಪ್ರಿಲ್ 5, 2023): ಕೆಲಸ ನೀಡಿದ ವ್ಯಕ್ತಿ ವೇತನ ನೀಡದ ಹಿನ್ನೆಲೆ ಬೇಸತ್ತ ಮೂವರು ಕಾರ್ಮಿಕರು ಹಣವಿಲ್ಲದೆ ಬೆಂಗಳೂರಿನಿಂದ ತಮ್ಮ ತವರು ರಾಜ್ಯ ಒಡಿಶಾಕ್ಕೆ 1,000 ಕಿ.ಮೀ ನಡೆದೇ ತೆರಳಿದ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆ ಮಧ್ಯವರ್ತಿಯೋರ್ವನ ಸಹಾಯದಿಂದ ಒಡಿಶಾದಿಂದ ಬೆಂಗಳೂರಿಗೆ ಬಂದ 12 ಜನರ ಗುಂಪಿನಲ್ಲಿದ್ದ ಇವರು ಇಲ್ಲಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಮೂವರು ಕಾರ್ಮಿಕರಿಗೆ ಉದ್ಯೋಗ ನೀಡಿದ್ದವರು ವೇತನ ನೀಡದೆ ಸತಾಯಿಸಿದ್ದಲ್ಲದೇ ಥಳಿಸಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕೈಯಲ್ಲಿ ಹಣವಿಲ್ಲದೆ (Money) ಸರಿಯಾಗಿ ಆಹಾರವೂ (Food) ಇಲ್ಲದೇ ಫೆಬ್ರವರಿ 26ರಂದು ನಡೆಯಲು ಪ್ರಾರಂಭಿಸಿದ ಕಾಟಾರ್‌ ಮಾಂಝಿ, ಭಿಕಾರಿ ಮಾಂಝಿ ಮತ್ತು ಬುಡು ಮಾಂಝಿಯನ್ನು ಕೋರಾಪುಟ್‌ನ (Koraput) ಗ್ರಾಮವೊಂದರಲ್ಲಿ ಸ್ಥಳೀಯರು ವಿಚಾರಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕನೊಬ್ಬ ಮೂವರಿಗೂ ಊಟ ನೀಡಿದ್ದಾನೆ. ಅಲ್ಲದೇ ಇನ್ನೊಬ್ಬ ವ್ಯಕ್ತಿ 1,500 ರೂ. ನೀಡಿ ತಮ್ಮ ಗ್ರಾಮಕ್ಕೆ ತೆರಳಲು ಸಹಾಯ ಮಾಡಿದ್ದಾನೆ. ಕೈಯಲ್ಲಿ ನೀರಿನ ಬಾಟಲಿ (Water Bottle), ಹಾಗೂ ಚೀಲ (Bag) ಹಿಡಿದು ಮೂವರು ನಡೆದು (Walk) ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.

Tap to resize

Latest Videos

ಇದನ್ನು ಓದಿ: ವಲಸೆ ಕಾರ್ಮಿಕರ ಮೇಲೆ ಹಲ್ಲೆ: ನಕಲಿ ವಿಡಿಯೋ ಬಿಟ್ಟ ಬಿಹಾರಿ ಸೆರೆ

VIDEO | After being denied their share of pay and exhausting their savings in Bengaluru, three migrant workers, holding just a pair of water bottles, returned to Koraput (Odisha) on Sunday after walking for almost a month covering 1000 kms, with no food and money left. pic.twitter.com/A63ADgt6zu

— Press Trust of India (@PTI_News)

ಕುಟುಂಬವನ್ನು ಪೋಷಿಸಲು ಹಣ ಸಂಪಾದಿಸುವ ಉದ್ದೇಶದಿಂದ ಬೆಂಗಳೂರಿಗೆ (Bengaluru) ಹೋಗಿದ್ದೆವು. ಆದರೆ ನಮಗೆ ಅಲ್ಲಿ ಸಂಬಳ (Salary) ಕೊಡದೆ ಹಿಂಸಿಸಲಾಯಿತು ಎಂದು ಕಾರ್ಮಿಕರು (Labourers) ನೋವು ತೋಡಿಕೊಂಡಿದ್ದಾರೆ. ಆದರೆ ಈ ವ್ಯಕ್ತಿಗಳಿಗೆ ವಂಚಿಸಿದ ಸಂಸ್ಥೆ ಅಥವಾ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Covid 19 Spike: ಮುಂದಿನ ವಾರ 3ನೇ ಅಲೆ ಗರಿಷ್ಠಕ್ಕೆ: ಲಾಕ್ಡೌನ್‌ ಭೀತಿಯಿಂದ ಮತ್ತೆ ವಲಸಿಗರ ಗುಳೆ ಶುರು!

click me!