ಎಸಿ ಸ್ಫೋಟಗೊಂಡ ಒಂದೇ ಕುಟುಂಬದ ಮೂವರು ಸಾವು, ಐಸಿಯುವಿನಲ್ಲಿ ಮಗನಿಗೆ ಚಿಕಿತ್ಸೆ

Published : Sep 08, 2025, 04:27 PM IST
husband wife daughter killed in AC blast in Faridabad

ಸಾರಾಂಶ

ಮಲಗಿದ್ದ ವೇಳೆ ಎಸಿ ಸ್ಫೋಟಗೊಂಡ ಪರಿಣಾಮ ತಂದೆ, ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ಮಗ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಹರ್ಯಾಣ (ಸೆ.08) ಭಾರತದ ಮನೆಗಳಿಗೆ ಎಸಿ ಸಾಮಾನ್ಯವಾಗಿದೆ. ಉರಿ ಬಿಸಿಲು, ಅತೀವ ಶೆಕೆ ಸೇರಿದಂತೆ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಜನವರಿಯಿಂದಲೇ ಎಸಿ ಅನಿವಾರ್ಯವಾಗುತ್ತದೆ. ಇನ್ನು ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಎಸಿ ಅತ್ಯವಶ್ಯಕವಾಗಿದೆ. ಆದರೆ ಕುಟುಂಬವೊಂದು ಮಲಗಿದ್ದ ವೇಳೆ ಎಸಿ ಸ್ಫೋಟಗೊಂಡು ದುರಂತ ಘಟನೆ ನಡೆದಿದೆ. ತಂದೆ, ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗ ಗಂಭೀರವಾಗಿ ಗಾಯಗೊಂಡು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಹರಿಯಾಮ ಫರೀದಾಬಾದ್‌ನಲ್ಲಿ ನಡೆದಿದೆ.

ಸಚಿನ್ ಕಪೂರ್ ಹಾಗೂ ರಿಂಕೂ ಕಪೂರ್ ಕುಟುಂಬ ಗ್ರೀನ್ ಫೀಲ್ಡ್ ಕಾಲೋನಿಯಲ್ಲಿ ವಾಸವಿತ್ತು. ಭಾನುವಾರ (ಸೆ.07) ರಾತ್ರಿ ಎಸಿ ಆನ್ ಮಾಡಿ ಮಲಗಿದ್ದಾರೆ. ಪೋಷಕರು ಹಾಗೂ ಇಬ್ಬರು ಮಕ್ಕಳು ಮಲಗಿದ್ದಾರೆ. ರಾತ್ರಿ 1.30ರ ವೇಳೆ ಎಸಿ ಸ್ಫೋಟಗೊಂಡಿದೆ. ಎಸಿ ಸ್ಫೋಟದ ಶಬ್ದಕೇಳಿ ಅಕ್ಕ ಪಕ್ಕದ ಮನೆಯವರು ಭಯಭೀತಗೊಂಡಿದ್ದಾರೆ. ಎಸಿ ಸ್ಫೋಟದಿಂದ ಸಚಿನ್ ಕಪೂರ್ ಮನೆ ಧಗಧಗ ಉರಿಯಲು ಆರಂಭಿಸಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರ ತಂಡ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಬಳಿಕ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ ಸಚಿನ್ ಕಪೂರ್, ರಿಂಕೂ ಕಪೂರ್ ಹಾಗೂ ಪುತ್ರಿ ಸುಜನ್ ಕಪೂರ್ ಸ್ಥಳದಲ್ಲೆ ಸುಟ್ಟು ಕರಕಲಾಗಿದ್ದಾರೆ. ಇನ್ನು ಪುತ್ರ ಆರ್ಯನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪರ್ಫ್ಯೂಮ್ ಬಾಟಲಿ ಸ್ಫೋಟಗೊಂಡು ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯ

ಆರ್ಯನ್ ಸ್ಛಳೀಯ ಆಸ್ಪತ್ರೆ ದಾಖಲು

ಆರ್ಯನ್ ಗಂಭೀರ ಸುಟ್ಟಗಾಯಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ರಕ್ಷಣೆ ಮಾಡಿದ ತಂಡ ತಕ್ಷಣವೇ ಆಸ್ಪತ್ರೆ ದಾಖಲಿಸಿದೆ. ಬಹುತೇಕ ದೇಹ ಸುಟ್ಟು ಹೋಗಿದೆ. ತೀವ್ರ ನಿಘಾ ಘಟಕದಲ್ಲಿ ಆರ್ಯನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಅಗ್ನಿಶಾಮಕ ದಳ ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಸಚಿನ್ ಕಪೂರ್ ಕುಟುಂಬ ರಕ್ಷಿಸಲು ಅದೇ ಕಟ್ಟಡದ ಇತರ ಕುಟುಂಬದಳು ಪ್ರಯತ್ನಿಸಿದೆ. ಆದರೆ ಬೆಕಿ ಕೆನ್ನಾಲಗೆಯಿಂದ ಸಾಧ್ಯವಾಗಿಲ್ಲ.

ಎಸಿಯಲ್ಲಿ ಸಮಸ್ಯೆಯಿಂದ ಸ್ಫೋಟ

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಎಸಿಯಲ್ಲಿನ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಎಸಿ ಹಾಗೂ ವೈಯರಿಂಗ್ ಕುರಿತು ತನಿಖೆ ನಡೆಯುತ್ತಿದೆ. ಮನೆಯ ವಸ್ತುಗಳೆಲ್ಲವೂ ಸುಟ್ಟು ಹೋಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್