ಪ್ರತಿ ಮನೆಯಿಂದ ಕನಿಷ್ಠ ಒಬ್ಬರು, ರೈತ ಪ್ರತಿಭಟನೆಗೆ ತೆರಳದಿದ್ದರೆ 1,500 ರೂ ಫೈನ್!

Published : Jan 30, 2021, 02:47 PM ISTUpdated : Jan 30, 2021, 02:57 PM IST
ಪ್ರತಿ ಮನೆಯಿಂದ ಕನಿಷ್ಠ ಒಬ್ಬರು, ರೈತ ಪ್ರತಿಭಟನೆಗೆ ತೆರಳದಿದ್ದರೆ 1,500 ರೂ ಫೈನ್!

ಸಾರಾಂಶ

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಶ್ವದ ಗಮನಸೆಳೆದಿದೆ. ಟ್ರಾಕ್ಟರ್ ರ್ಯಾಲಿ ಬಳಿಕ ಹಿಂಸಾ ರೂಪ ಪಡೆದ ರೈತರ ಪ್ರತಿಭಟನೆ ಅಸಲಿ ಮುಖಗಳು ಬಹಿರಂಗವಾಗತೊಡಗಿದೆ. ಇದೀಗ ರೈತರ ಪ್ರತಿಭಟನೆಗೆ ಜನಸಾಗರ ಸೇರಿದ್ದೇಗೆ ಅನ್ನೋ ಮಾಹಿತಿಯನ್ನು ಸ್ಪತಃ ಪಂಜಾಬ್ ಗ್ರಾಮಸ್ಥರು ಬಹಿರಂಗ ಪಡಿಸಿದ್ದಾರೆ.

ಪಂಜಾಬ್(ಜ.30):  ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಂಜಾಬ್ ಹಾಗೂ ಹರ್ಯಾಣ ಭಾಗದ ರೈತರು ಪಾಲ್ಗೊಂಡು, ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪಂಜಾಬ್ ಹಾಗೂ ಹರ್ಯಾಣದಿಂದ ಸಾವಿರ ಸಾವಿರ ಮಂದಿ ಪ್ರತಿಭಟನೆಯಲ್ಲಿ ಕಳೆದೆರಡು ತಿಂಗಳಿನಿಂದ ಪಾಲ್ಗೊಂಡಿದ್ದಾರೆ. ಆದರೆ ಪಂಜಾಬ್‌ನಿಂದ ರೈತರು ಈ ಪ್ರತಿಭಟೆಯತ್ತ ಮುಖ ಮಾಡಿದ್ದು ಹೇಗೆ ಅನ್ನೋದನ್ನು ಸ್ವತಃ ಪಂಜಾಬ್ ಹಳ್ಳಿಯ ರೈತರು ಬಹಿರಂಗ ಪಡಿಸಿದ್ದಾರೆ.

ಬಿಜೆಪಿ ಶಾಸಕನ ಕೊನೇ ಕ್ಷಣದ ನಡೆ, ಸೈಲೆಂಟ್ ಆಗಿದ್ದ ರೈತರು ವೈಲೆಂಟ್ ಆಗಲು ಅಸಲಿ ಕಾರಣ!.

ಪಂಜಾಬ್‌ನ ಭತಿಂದ ಗ್ರಾಮಪಂಚಾಯತ್ ಕಟ್ಟು ನಿಟ್ಟಿನ ಸೂಚನೆ ನೀಡಿದೆ.  ವಿರ್ಕ್ ಕುರ್ದ್ ಗ್ರಾಮಪಂಚಾಯತ್‌ ವ್ಯಾಪ್ತಿಯ ಸರ್ಪಂಚ್ ಮಂಜಿತ್ ಕೌರ್ ಇದೀಗ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಪ್ರತಿ ಮನೆಯಿಂದ ಕನಿಷ್ಠ ಒಬ್ಬರನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸೂಚಿಸಿದ್ದಾರೆ.

ಪ್ರತಿಭಟನಾ ನಿರತ ರೈತರಿಂದ ತಲ್ವಾರ್ ದಾಳಿ; ಒರ್ವ ಪೊಲೀಸ್ ಗಂಭೀರ!

ಯಾರಾದರೂ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ, 1,500 ರೂಪಾಯಿ ದಂಡದ ರೂಪದಲ್ಲಿ ನೀಡಬೇಕು. ಇನ್ನು ದಂಡ ನೀಡಲು ಸಾಧ್ಯವಾಗದಿದ್ದರೆ, ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ ಎಂದು ಮಂಜಿತ್ ಕೌರ್ ಹೇಳಿದ್ದಾರೆ.

 

ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಪ್ರತಿಮನೆಯಿಂದ ಒಬ್ಬೊಬ್ಬರು ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದರು. ಈ ಸೂಚನೆ ಬಳಿಕ ಪಂಜಾಬ್ ಹಳ್ಳಿ ಹಳ್ಳಿಗಳ ಗ್ರಾಮ ಪಂಚಾಯತ್‌ನಲ್ಲಿ ಈ ಸೂಚನೆ ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ
ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು