
ನವದೆಹಲಿ(ಆ.05): ಪೂರ್ವ ಲಡಾಖ್‌ನ ಉಮ್ಲಿಂಗ್ಲಾ ಪಾಸ್ ಬಳಿ 19,300 ಅಡಿ ಎತ್ತರದಲ್ಲಿ ಜಗತ್ತಿನಲ್ಲಿಯೇ ಅತಿ ಎತ್ತರದ ಮೋಟಾರಬಲ್ (ಮೋಟಾರು ವಾಹನಗಳಿಗೆ ಬಳಕೆಯಾಗುವ ರಸ್ತೆ) ರಸ್ತೆ ನಿರ್ಮಿಸಲಾಗಿದೆ ಎಂದು ರಕ್ಷಣಾ ಇಲಾಖೆ ಬುಧವಾರ ತಿಳಿಸಿದೆ.
ಗಡಿ ರಸ್ತೆಗಳ ಸಂಘಟನೆ ಉಮ್ಲಿಂಗ್ಲಾ ಪಾಸ್ 52 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸಿದೆ. ಇದು ಚುಮಾರ್ ಸೆಕ್ಟರ್‌ನ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಲೇಹ್‌ನ ಚಿಸುಮ್ಲೇ ಮತ್ತು ಡೆಮ್ಚೋಕ್ ಸಂಪರ್ಕಿಸುವುದರಿಂದ ಸ್ಥಳೀಯರಿಗೂ ನೆರವಾಗುತ್ತದೆ.
ಲಡಾಕ್‌ನಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೂ ಸಹಾಯಕ. ಇದಕ್ಕೂ ಮೊದಲು ಬೋಲಿವಿಯಾದದಲ್ಲಿ 18,953 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ರಸ್ತೆಯೇ ಅತಿ ಎತ್ತರದ ರಸ್ತೆಯಾಗಿತ್ತು ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ