'ಕಂಚು ಗೆದ್ದಿದ್ದು ಲೊವ್ಲಿನಾ, ಬ್ಯಾನರಲ್ಲಿ ಸಿಎಂ ಫೋಟೋ ಯಾಕಪ್ಪಾ'?

Published : Aug 05, 2021, 10:58 AM ISTUpdated : Aug 05, 2021, 11:00 AM IST
'ಕಂಚು ಗೆದ್ದಿದ್ದು ಲೊವ್ಲಿನಾ, ಬ್ಯಾನರಲ್ಲಿ ಸಿಎಂ ಫೋಟೋ ಯಾಕಪ್ಪಾ'?

ಸಾರಾಂಶ

ಲೊವ್ಲಿನಾ ಬೊರ್ಗೊಹೈನ್‌ಗೆ ಶುಭಾಶಯ ಬ್ಯಾನರ್, ಫೋಟೋ ಸಿಎಂನದ್ದು ಅಸ್ಸಾಂ ಸಿಎಂ, ರಾಜ್ಯ ಕ್ರೀಡಾ ಸಚಿವರ ಪೋಟೋ ಯಾಕಪ್ಪಾ ಎಂದ ನೆಟ್ಟಿಗರು

ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಲೊವ್ಲಿನಾ ಬೊರ್ಗಹೈನ್ ಕಂಚಿನ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವುದು ಖಚಿತವಾದಾಗ ಲೊವ್ಲಿನಾಗೆ ಶುಭಾಶಯಗಳ ಸುರಿಮಳೆ ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಲೊವ್ಲಿನಾ ಟ್ರೆಂಡ್ ಆಗಿದ್ದರು.

ಈಗ ಬಯೋಕಾನ್ ಬಯಲಾಜಿಕ್ಸ್‌ ಅಧ್ಯಕ್ಷೆ ಹಾಗೂ ಸಂಸ್ಥಾಪಕಿ ಕಿರಣ್ ಮುಜಮ್‌ದಾರ್ ವಿಶೇಷ ಟ್ವೀಟ್ ಮಾಡಿದ್ದು ಇದಕ್ಕೆ ತಮಾಷೆಯ ಕಮೆಂಟ್‌ಗಳು ಹರಿದುಬರುತ್ತಿವೆ. ಕಿರಣ್ ಫೋಟೋ ಒಂದನ್ನು ಶೇರ್ ಮಾಡಿದ್ದು ಇದು ಲೊವ್ಲಿನಾಗೆ ಶುಭಾಶಯ ತಿಳಿಸೋ ಬ್ಯಾನರ್‌ಗಳ ಫೋಟೋ. ಅಸ್ಸಾಂ ಲೊವ್ಲಿನಾಗೆ ವಿಶ್ ಮಾಡಿದ ರೀತಿಯನ್ನು ಶೇರ್ ಮಾಡಿದ್ದಾರೆ ಕಿರಣ್.

ಟೋಕಿಯೋ ಒಲಿಂಪಿಕ್ಸ್ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಸೆಮಿ ಫಯನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಪದಕವನ್ನು ಖಾತರಿಪಡಿಸಿದ್ದಾರೆ. ಪದಕದ ಬಣ್ಣ ಯಾವುದು ಎಂಬುದಷ್ಟೇ ಪ್ರಶ್ನೆ. ಆಕೆ ನೋಡಲು ಹೇಗೆ ಕಾಣುತ್ತಾಳೆ ಎಂದು ತಿಳಿಯಬೇಕಾದವರಿಗೆ ಗುವಾಹಟಿಯಲ್ಲಿ ಕೆಲವು ಬ್ಯಾನರ್ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪೋಸ್ಟರ್‌ಗಳಲ್ಲಿ ಲೊವ್ಲಿನಾಗೆ ಶುಭಾಶಯವನ್ನು ತಿಳಿಸಲಾಗಿದ್ದು ಇದರಲ್ಲಿ ಲೊವ್ಲಿನಾ ಫೋಟೋ ಬದಲು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಾಗೂ ರಾಜ್ಯ ಕ್ರೀಡಾ ಸಚಿವ ಬಿಮಲ್ ಬೋರಾ ಅವರ ಫೋಟೋ ಇತ್ತು.

ಅಸ್ಸಾಂನ ಲೊವ್ಲಿನಾ ಬೊರ್ಗೊಹೈನ್ ಬುಧವಾರ ಸೆಮಿ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ ಬಿಜೆಪಿ ಸಚಿವರು ಲೊವ್ಲಿನಾ ಗೆಲುವನ್ನು ಪ್ರೋತ್ಸಾಹಿಲು ತಮ್ಮ ಫೋಟೋಗಳನ್ನು ಯಾಕೆ ಬಳಸಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಸ್ಟರ್‌ಗಳನ್ನು ತೆಗೆಯಲಾಗಿದೆ ಎಂದು ಒಬ್ಬ ಬಳಕೆದಾರರು ಕಮೆಂಟಿಸಿದ್ದಾರೆ. ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಇವರಿಬ್ಬರಲ್ಲಿ ಲೊವ್ಲಿನಾ ಯಾರು ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ