ಮಂಗಳಮುಖಿಯರೇ ನಡೆಸುವ ಹೊಟೇಲ್‌ ಇದು ವಿಡಿಯೋ ನೋಡಿ

By Suvarna NewsFirst Published Mar 10, 2022, 5:27 PM IST
Highlights
  • ಮುಂಬೈನ  ಪಶ್ಚಿಮ ಅಂಧೇರಿಯಲ್ಲಿರುವ ಹೊಟೇಲ್
  • ಮಂಗಳಮುಖಿಯರು ನಡೆಸುವ ಹೊಟೇಲ್‌
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮುಂಬೈನಲ್ಲಿ ಮಂಗಳಮುಖಿಯರೇ ನಡೆಸುತ್ತಿರುವಂತಹ ಹೊಟೇಲ್‌ ಒಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಹಭಾಶ್‌ ಎಂದಿದ್ದಾರೆ. ಮುಂಬೈನ ಪಶ್ಚಿಮ ಅಂಧೇರಿಯ (Andheri) ವೆರ್ಸೋವಾ(Versov)ದಲ್ಲಿ ನೆಲೆಗೊಂಡಿರುವ ಈ ಕೆಫೆಯನ್ನು  ಮಂಗಳಮುಖಿಯರೇ ನಡೆಸುತ್ತಿರುವುದು ಈ ಹೋಟೇಲ್‌ನ ವಿಶೇಷ 

ಮಂಗಳಮುಖಿಯರು ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ. ಇನ್ಸ್ಟಾಗ್ರಾಮ್‌ (Instagram)ನಲ್ಲಿ ಬಾಂಬೆ ಫುಡೀ ಟೇಲ್ಸ್ ಎಂಬ ಹೆಸರಿನ ಆಹಾರ ಬ್ಲಾಗಿಂಗ್ ಖಾತೆಯಿಂದ  ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಾಂಬೆ ನಜಾರಿಯಾ ಎಂಬ ಕೆಫೆಯ ದೃಶ್ಯವಿದೆ. ಅಂಧೇರಿ ಪಶ್ಚಿಮದ ವೆರ್ಸೋವಾದಲ್ಲಿ ಇರುವ ಈ ಕೆಫೆಯಲ್ಲಿ ಕೆಲವು ಉದ್ಯೋಗಿಗಳು ಗ್ರಾಹಕರನ್ನು ಸ್ವಾಗತಿಸುತ್ತಿರುವುದನ್ನು ಮತ್ತು ಅವರಿಗೆ ಆಹಾರವನ್ನು ಬಡಿಸುತ್ತಿರುವುದನ್ನು ವೀಡಿಯೊ ತೋರಿಸುತ್ತಿದೆ. ಕೆಫೆಯು 'ನಜಾರಿಯಾ ಬದ್ಲೋ, ನಜಾರಾ ಬದ್ಲೆಗಾ' (ಧೋರಣೆ ಬದಲಿಸಿಕೊಳ್ಳಿ, ದೃಷ್ಟಿಕೋನ ಬದಲಾಗುತ್ತದೆ) ಎಂಬ ಸಂದೇಶವನ್ನು ಜನರಿಗೆ ತಿಳಿಸುತ್ತಿದೆ. ಅಂದರೆ ಸಮಾಜದಲ್ಲಿ ಮಂಗಳಮುಖಿಯರ ಸ್ಥಿತಿ ಇಂದಿಗೂ ತೀರಾ ನಿಕೃಷ್ಟವಾಗಿದೆ. ಹೀಗಾಗಿ ಮಂಗಳಮುಖೀಯರ ಮೇಲಿನ ಧೋರಣೆ ಬದಲಾಗಬೇಕಿದೆ ಹಾಗಾದರೆ ಸಹಜವಾಗಿ ದೃಷ್ಟಿಕೋನ ಬದಲಾಗುವುದು ಎಂಬ ಸಂದೇಶ ನೀಡುತ್ತಿದೆ.

 

ವೀಡಿಯೊ 39 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಹಲವು ಕಾಮೆಂಟ್ ಮಾಡಿದ್ದಾರೆ. ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಇಂತಹ ಉತ್ತಮ ಅವಕಾಶವನ್ನು ಕಲ್ಪಿಸಿದ ಮಾಲೀಕರ ಪ್ರಯತ್ನವನ್ನು ಜನರು ಶ್ಲಾಘಿಸಿದ್ದಾರೆ. ಅಲ್ಲದೇ ಅನೇಕರು ಬಂದು ಇಲ್ಲಿ ಆಹಾರದ ರುಚಿ ನೋಡುವ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.

ಮಂಗಳಮುಖಿಯರಿಗೆ ಪಾದಪೂಜೆ ಸಲ್ಲಿಸಿ ವಿನಯ್‌ ಗುರೂಜಿ ದೀಪಾವಳಿ

ಮಂಗಳಮುಖಿಯರಾಗಿ ಹುಟ್ಟುವುದು ಅವರ ತಪ್ಪಲ್ಲ. ಆದರೆ ಸಮಾಜ ಅವರನ್ನು ನೋಡುವ ರೀತಿ ಮಾತ್ರ ತೀರಾ ಅಮಾನವೀಯವಾದುದು. ಅವರಿಗೆ ಯಾರೂ ಉದ್ಯೋಗ ನೀಡುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ಭಿಕ್ಷಾಟನೆ, ವೈಶ್ಯಾವಾಟಿಕೆ ಮುಂತಾದವುಗಳಿಗೆ ಇಳಿದು ಹೊಟ್ಟೆ ಹೊರೆಯುತ್ತಿದ್ದಾರೆ. ನಮ್ಮನ್ನು ಮನುಷ್ಯರಂತೆಯೇ ಕಾಣಿ ಎಂಬ ಅವರ ಕೂಗು ಯಾರರಿಗೂ ಕೇಳಿಸದೇ ಆಗಿದೆ. ಅದಾಗ್ಯೂ ಕೆಲವು ಮಹಾನಗರಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಅವರ ಏಳಿಗೆಗಾಗಿ ದುಡಿಯುತ್ತಿವೆ.

ಕಳೆದ ವರ್ಷ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಯೊಲೊ ಫೌಂಡೇಶನ್ ಮತ್ತು ಕಿನ್ನರ್ ಟ್ರಸ್ಟ್ ಜೊತೆ ಸೇರಿ ಮಂಗಳಮುಖಿಯರ ಜೊತೆ ಸೆರಳವಾಗಿ ಗಣೇಶ ಹಬ್ಬವನ್ನು ಆಚರಿಸಿದ್ದರು. ಈ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಜಾಕ್ವೆಲಿನ್ 'ಗಣಪತಿ ಬಪ್ಪಾ ಮೋರೆಯಾ ಇದೀಗ, ಎಲ್ಲಾ ಗಲ್ಲಿಗಳು ಈ ಧ್ವನಿಯನ್ನು ಪ್ರತಿಧ್ವನಿಸುತ್ತಿವೆ. ನಾನು ಎಲ್ಲಿಗೆ ಹೋದರೂ, ಗಣೇಶ ದೇವರು ನಮಗೆ ನೀಡಿದ ನಗುವನ್ನು ನಾನು ನೋಡುತ್ತೇನೆ. ಈ ಶುಭ ಸಂದರ್ಭದಲ್ಲಿ ನಾನು ಯೋಲೋ ಫೌಂಡೇಷನ್ ಅವರ ಆಚರಣೆಯ ಭಾಗವಾಗಿ ಕಿನ್ನರ್ ಟ್ರಸ್ಟ್‌ಗೆ ಭೇಟಿ ನೀಡಿದೆ. ಗಣೇಶನು ಈ ಸುಂದರ ಸಮುದಾಯವನ್ನು ಆಶೀರ್ವದಿಸಲಿ ಎಂದು ಬರೆದಿದ್ದರು.

Transgender Funeral : ರಾತ್ರಿ ನಡೆಯುವ ಶವಯಾತ್ರೆ ನೋಡಿದ್ರೆ ಏನಾಗುತ್ತೆ?
 

'ಥರ್ಡ್ ಜೆಂಡರ್' (Transgender) ಅವರನ್ನು ಮಂಗಳ ಮುಖಿಯರು ಎಂದೂ ಕರೆಯಲಾಗುತ್ತದೆ. ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸಾಮಾನ್ಯ ಜನರಿಗೆ ಸಿಗುವ ಗೌರವ (Respect),ಮರ್ಯಾದೆ ಸಿಗುತ್ತಿಲ್ಲ. ಎಷ್ಟು ಶಿಕ್ಷಣ ಹೊಂದಿದ್ದರೂ ಅವರನ್ನು ಕೀಳಾಗಿ ನೋಡಲಾಗುತ್ತದೆ. ಭಿಕ್ಷೆ ಬೇಡಿ ಜೀವನ ನಡೆಸುವ ಸ್ಥಿತಿ ಅವರಿಗಿದೆ. ಮದುವೆ ಸೇರಿದಂತೆ ಕೆಲ ವಿಶೇಷ ಸಮಾರಂಭಗಳಲ್ಲಿ ಮಂಗಳ ಮುಖಿಯರಿಗೆ ವಿಶೇಷ ಮಾನ್ಯತೆ ನೀಡಲಾಗುತ್ತದೆ. ಅವರನ್ನು ಮನೆಗೆ ಕರೆದು ಉಡಗೊರೆ ನೀಡುವ ಪದ್ಧತಿ ಕೆಲವು ಕಡೆ ಜಾರಿಯಲ್ಲಿದೆ. ಅವರ ಕೈನಿಂದ ಹಣ ಪಡೆದರೆ ಶುಭ ಎಂಬ ನಂಬಿಕೆ ಶಾಸ್ತ್ರಗಳಲ್ಲಿದೆ. ಇಷ್ಟರ ಮಧ್ಯೆಯೂ ಅವರಿಗೆ ಸಾಮಾನ್ಯರಂತೆ ಬದುಕಲು ಅವಕಾಶವಿಲ್ಲದ ಪರಿಸ್ಥಿತಿ ಇದೆ.  
 

click me!