
ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಲವು ವರ್ಷಗಳ ನಂತರ ಕ್ಲಾಸ್‌ಮೇಟನ್ನು ದಾರಿ ಮಧ್ಯೆ ಭೇಟಿಯಾದ ಯುವತಿಯೊಬ್ಬಳು ಆತನಿಗೆ ನೀನು ಪಿಜ್ಜಾ ಡೆಲಿವರಿ ಬಾಯ್ ಅಗಿರೋದಾ? ಶಾಲೆಯಲ್ಲಿ ಓಡುತ್ತಿರುವಾಗ ದೊಡ್ಡ ದೊಡ್ಡದು ಹೇಳ್ತಾ ಎಲ್ಲರಿಗೆ ಪ್ರೇರಣೆ ನೀಡ್ತಿದೆ. ಈಗ ನೋಡಿದ್ರೆ ನೀನು ಪಿಜ್ಜಾ ಡೆಲಿವರಿ ಬಾಯ್ ಆಗಿದ್ಯಾ ಹೇಗನಿಸುತ್ತಿದೆ ಈ ಕೆಲಸ ಎಂದು ಪಿಜ್ಜಾ ಡೆಲಿವರಿ ಬಾಯ್‌ನಂತೆ ಗಾಡಿಯಲ್ಲಿ ಕುಳಿತಿರುವ ಯುವಕನೋರ್ವನ ಬಳಿ ಯುವತಿಯೊಬ್ಬಳು ಕೇಳುತ್ತಿರುವ ವೀಡಿಯೋ ವೈರಲ್ ಆಗಿತ್ತು. ಮುಂದುವರೆದ ಆಕೆ, ಫ್ರೆಂಡ್ಸ್, ಇವನು ನನ್ನ ಕ್ಲಾಸ್ ಮೇಟ್, ಹಲವು ವರ್ಷಗಳ ನಂತರ ಭೇಟಿ ಮಾಡ್ತಾ ಇದ್ದೇವೆ ಆತ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ ಎಂದೆಲ್ಲಾ ಆಕೆ ಹೇಳಿಕೊಂಡಿದ್ದಳು. ಈ ವೀಡಿಯೋದಲ್ಲಿ ಹುಡುಗಿ ಮುಖ ಕಾಣಿಸುತ್ತಿರಲಿಲ್ಲ ಆದರೆ ಧ್ವನಿ ಕೇಳಿಸುತ್ತಿತ್ತು, ಹುಡುಗ ಮಾತ್ರ ಪಿಜ್ಜಾ ಡೆಲಿವರಿ ಮಾಡುವ ಹುಡುಗನಂತೆಯೇ ಬಹಳ ಮುಗ್ಧವಾಗಿ ಕಾಣುತ್ತಿದ್ದ.
ಈ ವೀಡಿಯೋ ಕೆಲವೇ ಗಂಟೆಗಳಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿದ್ದು, ಮರ್ಯಾದೆಗೆ ದುಡಿದು ತಿನ್ನುವ ಯುವಕನಿಗೆ ಯುವತಿ ಅವಮಾನ ಮಾಡುತ್ತಿದ್ದಾಳೆ. ಆಕೆಗೆ ಸ್ವಲ್ಪವೂ ಕರುಣೆ ಇಲ್ಲ, ಹುಡುಗರ ಕಷ್ಟ ಆಕೆಗೇನು ಗೊತ್ತು, ವಯಸ್ಸಿಗೆ ಮೊದಲೇ ಬರುವ ಬದುಕಿನ ಜವಾಬ್ದಾರಿಗಳಿಂದಾಗಿ ಯುವಕರು ತಮ್ಮ ಕನಸುಗಳನ್ನು ಸಾಯಲು ಬಿಟ್ಟು ಹೀಗೆ ಕೆಲಸ ಮಾಡುತ್ತಾರೆ. ಎಂಬಂತಹ ಮಾತುಗಳು ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ವೀಡಿಯೋ ನೋಡಿವವರಿಂದ ಕೇಳಿ ಬಂದಿತ್ತು. ಆದರೆ ಆ ವೀಡಿಯೋದ ನಿಜವಾದ ಅಸಲಿಯತ್ತು ಈಗ ಬಯಲಾಗಿದೆ.
ಇದನ್ನೂ ಓದಿ: ಹುಡುಗಿ ಸ್ಯಾಂಡ್‌ವಿಚ್ ಮಾರ್ತಿದ್ದಾಳೆ ಅಂತ ಮಗನ ಪ್ರೀತಿ ನಿರಾಕರಿಸಿದ ತಾಯಿ: ಕಾರಿನೊಳಗೆ ನಡೆದ ಅಮ್ಮ ಮಗನ ಗಲಾಟೆ ವೈರಲ್
ಅಸಲಿಗೆ ಆತ ಪಿಜ್ಜಾ ಡೆಲಿವರಿ ಬಾಯ್ ಅಲ್ಲವೇ ಅಲ್ಲ, ಹೀಗೆ ಅವಮಾನಿಸುವಂತೆ ಮಾತನಾಡಿದ ಆ ಹುಡುಗಿ ಹಾಗೂ ಇನ್ನೂ ಇಬ್ಬರು ಆ ಹುಡುಗನ ಸ್ನೇಹಿತರು, ಅವರೆಲ್ಲಾ ಫ್ರೆಂಡ್ಸ್ ಜೊತೆಯಾಗಿ ಪಿಜ್ಜಾ ತಿನ್ನಲು ಬರ್ಗರ್ ಕಿಂಗ್‌ಗೆ ಹೋಗಿದ್ದು, ತಿಂದು ಹೊರಗೆ ಬಂದ ನಂತರ ಪಿಜ್ಜಾ ಶಾಪ್ ಮುಂದೆ ಇದ್ದ ಪಿಜ್ಜಾ ಡೆಲಿವರಿ ಗಾಡಿಯ ಮೇಲೆ ಹುಡುಗ ಕುಳಿತಿದ್ದು, ಇದೇ ವೇಳೆ ಹುಡುಗಿ ಹೀಗೆ ಆತನನ್ನು ಕೇಳುತ್ತಾ ಕೇವಲ ವೀಡಿಯೋ ಶೂಟ್ ಮಾಡಿದ್ದಾರೆ ಅಷ್ಟೇ, ನಂತರ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ವೈರಲ್ ಆಗಿ, ಹುಡುಗಿಗೆ ಜನ ಬೈಯುವುದಕ್ಕೆ ಶುರು ಮಾಡುತ್ತಿದ್ದಂತೆ ಇವರು ಈ ವೈರಲ್ ಆದ ವೀಡಿಯೋದ ಅಸಲಿ ವಿಚಾರವನ್ನು ಹೇಳಿ ಮತ್ತೊಂದು ವೀಡಿಯೋ ಮಾಡಿದ್ದಾರೆ.
ಈ ಮತ್ತೊಂದು ವೀಡಿಯೋದಲ್ಲಿ ನಾಲ್ಕು ಜನ ಸ್ನೇಹಿತರು ಕೂಡ ಕಾಣಿಸಿಕೊಂಡಿದ್ದು, ನಾವು ಕೇವಲ ಸ್ನೇಹಿತರು, ಹೀಗೆ ಪಿಜ್ಜಾ ತಿನ್ನುವಾಗ ಬಂದು ಹೀಗೆ ವೀಡಿಯೋ ಮಾಡಿದ್ದೇವೆ. ನಮಗೀಗ ಅಳಬೇಕೋ ನಗಬೇಕು ಗೊತ್ತಿಲ್ಲ ನಾವು ಇದನ್ನು ಕೇವಲ ತಮಾಷೆಗಾಗಿ ಅಷ್ಟೇ ಮಾಡಿದ್ದೇವೆ. ಆದರೆ ಇವನು ನಟನೆ ತುಂಬಾ ಚೆನ್ನಾಗಿ ಮಾಡ್ತಿದ್ದಾನೆ ಹೀಗಾಗಿ ಎಲ್ಲರೂ ಇದನ್ನು ನಂಬಿದರು. ಈ ವೀಡಿಯೋವನ್ನು ಎಲ್ಲರೂ ರಿಪೋಸ್ಟ್ ಮಾಡಿಕೊಳ್ಳುತ್ತಿದ್ದು, ನಮಗೆ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ, ಕೆಲವರು ಆತನ ಫೋಟೋ ಬಳಸಿ ನಕಲಿ ಖಾತೆಯನ್ನು ಕೂಡ ಮಾಡಿ ಆಗಿದೆ. ನಾವು ವೈರಲ್ ಆಗುವ ಉದ್ದೇಶದಿಂದ ಹೀಗೆ ಮಾಡಿಲ್ಲ, ನಮಗೆ ವೈರಲ್ ಆಗುವ ಉದ್ದೇಶವೂ ಇಲ್ಲ. ನಾವು ಹೀಗೆ ಆಗಾಗ ತಮಾಷೆ ಮಾಡುತ್ತಿರುತ್ತೇವೆ. ಇವನು ಕೇವಲ 22 ವರ್ಷದ ಹುಡುಗ. ನಾವು ಬರೀ ಕಾಮಿಡಿಗಾಗಿ ಮಾಡಿದ್ದೇವೆ. ಆದರೆ ಯಾರೋ ಆತನ ಪೋಟೋ ಬಳಸಿ ನಕಲಿ ಖಾತೆಯನ್ನು ಕೂಡ ಸೃಷ್ಟಿಸಿದ್ದು, ಹಣಕ್ಕಾಗಿ ಕೇಳಬಹುದು. ನಾವು ಹೀಗಾಗಿ ಈ ಬಗ್ಗೆ ಕ್ಲಾರಿಟಿ ನೀಡುತ್ತಿದ್ದೇವೆ ಎಂದು ಅವರು ವೀಡಿಯೋದ ಮೂಲಕ ಹೇಳಿದ್ದಾರೆ.
ಇದನ್ನೂ ಓದಿ: ತನಗೆ ಅನ್ನ ಹಾಕಿದವನ 5 ವರ್ಷಗಳ ನಂತರವೂ ಗುರುತಿಸಿದ ಬೀದಿ ನಾಯಿ: ಶ್ವಾನ ಹಾಗೂ ಯುವಕನ ಭಾವುಕ ಪುನರ್ಮಿಲನ
ಇದನ್ನು ನೋಡಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಮಾಡಿದ್ದು ಸರಿ ಅಲ್ಲ, ಯಾವುದೇ ಉದ್ಯೋಗವನ್ನು ನೀವು ಅವಮಾನಿಸುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ