ಹಕ್ಕಿಗಳ ಉಳಿವಿಗೆ 2 ಲಕ್ಷಕ್ಕೂ ಅಧಿಕ ಗೂಡು ಕಟ್ಟಿದ Nest Man

Suvarna News   | Asianet News
Published : Feb 07, 2022, 12:57 PM IST
ಹಕ್ಕಿಗಳ ಉಳಿವಿಗೆ 2 ಲಕ್ಷಕ್ಕೂ ಅಧಿಕ ಗೂಡು ಕಟ್ಟಿದ  Nest Man

ಸಾರಾಂಶ

ಹಕ್ಕಿಗಳಿಗಾಗಿ  2 ಲಕ್ಷಕ್ಕೂ ಅಧಿಕ ಗೂಡು ಕಟ್ಟಿದ ವ್ಯಕ್ತಿ ಮಕ್ಕಳಿಗೂ ಗೂಡು ಕಟ್ಟುವ ತರಬೇತಿ ನೆಸ್ಟ್ ಮ್ಯಾನ್ ಎಂದು ಹೆಸರಿಟ್ಟ ಜನ

ನವದೆಹಲಿ(ಫೆ.7):  ರಾಷ್ಟ್ರ ರಾಜಧಾನಿಯ ವ್ಯಕ್ತಿಯೊಬ್ಬರು ಪಕ್ಷಿಗಳನ್ನು ಉಳಿಸುವ ಉದ್ದೇಶದಿಂದ ಇದುವರೆಗೂ ತಮ್ಮ ಜೀವನದಲ್ಲಿ 2.5 ಲಕ್ಷಕ್ಕೂ ಹೆಚ್ಚು ಗೂಡುಗಳನ್ನು ನಿರ್ಮಿಸಿದ್ದು, ಇವರನ್ನು ಜನ 'ನೆಸ್ಟ್ ಮ್ಯಾನ್' ಎಂದು ಕರೆಯುತ್ತಾರೆ. ದೆಹಲಿಯ ಅಶೋಕ್ ವಿಹಾರ್ ( Ashok Vihar)ಪ್ರದೇಶದ ನಿವಾಸಿಯಾಗಿರುವ, ನೆಸ್ಟ್ ಮ್ಯಾನ್ ಎಂದೂ ಕರೆಯಲ್ಪಡುವ ರಾಕೇಶ್ ಖತ್ರಿ(Rakesh Khatri) ಜನರಿಗೆ ಗೂಡುಗಳನ್ನು ರಚಿಸಲು ಕಲಿಸುತ್ತಾರೆ ಮತ್ತು ಇದುವರೆಗೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೂಡು ಕಟ್ಟುವ ಬಗ್ಗೆ ತರಬೇತಿ ನೀಡಿದ್ದಾರೆ. ತಮ್ಮ ಈ ಪರಿಸರ ಸ್ನೇಹಿ ಕಾರ್ಯಕ್ಕಾಗಿ ಅವರನ್ನು ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖತ್ರಿ, 'ನಾನು ಬಾಲ್ಯದಿಂದಲೂ ಪಕ್ಷಿಗಳೊಂದಿಗೆ ಆಟವಾಡಲು ತುಂಬಾ ಇಷ್ಟಪಡುತ್ತಿದ್ದೆ ಮತ್ತು ಅಂದಿನಿಂದ ಅವುಗಳಿಗೆ ಗೂಡುಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಇಲ್ಲಿಯವರೆಗೆ, ನಾನು ನನ್ನ ಜೀವನದಲ್ಲಿ 2.5 ಲಕ್ಷಕ್ಕೂ ಹೆಚ್ಚು ಗೂಡುಗಳನ್ನು ನಿರ್ಮಿಸಿದ್ದೇನೆ. ನಾನು ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಗೂಡು ಕಟ್ಟುವುದನ್ನು ಕಲಿಸಿದ್ದೇನೆ. ಆರಂಭದಲ್ಲಿ, ಜನರು ನನ್ನನ್ನು ಗೇಲಿ ಮಾಡುತ್ತಿದ್ದರು ಮತ್ತು ನೀವು ನಿರ್ಮಿಸಿದ ಗೂಡಿಗೆ ಪಕ್ಷಿಗಳು ಹೇಗೆ ಪ್ರವೇಶಿಸುತ್ತವೆ ಎಂದು ಅವರು ಕೇಳುತ್ತಿದ್ದರು. ಆದರೆ, ಹಕ್ಕಿಗಳು ನಾವು ಕಟ್ಟಿದ ಗೂಡುಗಳನ್ನು ಪ್ರವೇಶಿಸಲು ಪ್ರಾರಂಭಿಸಿದಾಗ, ಅವರು ಕೂಡ ತಮ್ಮ ಮನೆಗಳಲ್ಲಿ ಗೂಡುಗಳನ್ನು ಸ್ಥಾಪಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಗೂಡು ಕಟ್ಟುವ ಬಗ್ಗೆ ರಾಕೇಶ್ ಖತ್ರಿ ಅವರು ಅನೇಕ ವೆಬ್‌ನಾರ್‌ಗಳನ್ನು (webinars) ಸಹ ನಡೆಸಿದ್ದಾರೆ. ಸೆಣಬು, ಪ್ಲಾಸ್ಟಿಕ್, ಹುಲ್ಲು, ಮರ ಇತ್ಯಾದಿಗಳಿಂದ ಗೂಡುಗಳನ್ನು ಮಾಡಲು ಜನರಿಗೆ ಕಲಿಸಿದ್ದೇನೆ ಎಂದು ಅವರು ತಿಳಿಸಿದರು. ಖತ್ರಿ ಪ್ರಕಾರ, ಈ ಕಾರ್ಯಕ್ಕಾಗಿ ಅವರು ಇಲ್ಲಿಯವರೆಗೆ ಒಟ್ಟು ಐದು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೇ  ಗರಿಷ್ಠ ಸಂಖ್ಯೆಯ ಕೈಯಿಂದ ಮಾಡಿದ ಗೂಡುಗಳು ಮತ್ತು ಕಾರ್ಯಾಗಾರ ಮಾಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಅಲ್ಲೂ 2019ರಲ್ಲಿ ಅವರ ಹೆಸರು ಸೇರ್ಪಡೆಯಾಗಿದೆ.  ಗುಬ್ಬಚ್ಚಿ ಸಂರಕ್ಷಣೆ ಮತ್ತು ಇತರರಿಗೂ ಉತ್ತಮ ಅಭ್ಯಾಸ ಮಾಡಿಸಿದ್ದಕ್ಕಾಗಿ  ಲಂಡನ್ ಹೌಸ್ ಆಫ್ ಕಾಮನ್ಸ್‌ನಿಂದ ಇಂಟರ್‌ನ್ಯಾಷನಲ್ ಗ್ರೀನ್ ಆಪಲ್ ಪ್ರಶಸ್ತಿ (International Green Apple Award) ದೊರಕಿದೆ. 

ಇವಿಷ್ಟೇ ಅಲ್ಲದೇ  ರಾಕೇಶ್‌ ಖತ್ರಿ,  12 ಭಾಷೆಗಳಲ್ಲಿ 11,2000 ವಿದ್ಯಾರ್ಥಿಗಳೊಂದಿಗೆ  ಹವಾಮಾನ ಬದಲಾವಣೆಯ ಕುರಿತ ಸಾಕ್ಷ್ಯಚಿತ್ರ ನಡೆಸಿದ್ದಕ್ಕಾಗಿಯೂ ಲಿಮ್ಕಾ ಬುಕ್‌ ಅಫ್ ರೆಕಾರ್ಡ್‌ನಲ್ಲಿ ಹೆಸರು ಸೇರ್ಪಡೆಯಾಗಿದೆ. ಇವರ ಸಾಧನೆಗಾಗಿ  ಈ ವರ್ಷ ICSC ಬೋರ್ಡ್‌ನ 4 ನೇ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ ರಾಕೇಶ್ ಅವರ ಬಗ್ಗೆ ವಿಶೇಷ ವಿಶೇಷ ಪಠ್ಯವಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ