ವಿಚಿತ್ರ ಘಟನೆ: ದೇಗುಲದಲ್ಲಿ ಹಣ ಕದ್ದು ಅಲ್ಲೇ ಮಲಗಿದ್ದ ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದ!

Kannadaprabha News   | Kannada Prabha
Published : Apr 12, 2026, 05:30 AM IST
Thief who stole money from temple slept right there caught red handed by police

ಸಾರಾಂಶ

Thief sleeps in temple after theft ಕೇರಳದ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿದ ವ್ಯಕ್ತಿಯೊಬ್ಬ, ಸುಸ್ತಿನಿಂದಾಗಿ ಅಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಅರ್ಚಕರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಿರುವನಂತಪುರಂ: ಕೇರಳದ ದೇವಸ್ಥಾನವೊಂದರ ಕಚೇರಿಯಿಂದ ವ್ಯಕ್ತಿಯೊಬ್ಬ 8500 ರು. ನಗದನ್ನು ಕಳ್ಳತನ ಮಾಡಿ, ಆಯಾಸವಾಗಿ ಅಲ್ಲೇ ಮಲಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.

ಕಳ್ಳತನ ಮಾಡಿ ದೇವಾಲಯದಲ್ಲೇ ಮಲಗಿದ ಕಳ್ಳ!

ಅಂಬೂರಿನ ಕುಡಪ್ಪನಮೂಡು ಕುಜುವಲ್ವಟ್ಟಂ ಭಗವತಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಸೆಂಥಿಲ್‌ (40) ಶುಕ್ರವಾರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಕಚೇರಿಯಲ್ಲಿದ್ದ ಹಣ ಕಳ್ಳತನ ಮಾಡಿದ್ದ. ಆ ಬಳಿಕ ಸುಸ್ತಾಗಿ ಅಲ್ಲೇ ಮಲಗಿದ್ದ. 

ಅರ್ಚಕರು ದೇವಾಸ್ಥಾನಕ್ಕೆ ಬಂದಾಗ ಪ್ರಕರಣ ಬಯಲು

ಅರ್ಚಕರು ಶನಿವಾರ ನಸುಕಿನ 5.30ಕ್ಕೆ ದೇವಸ್ಥಾನಕ್ಕೆ ಬಂದಾಗ ಕಳ್ಳತನ ಗೊತ್ತಾಗಿದೆ. ಮಾತ್ರವಲ್ಲದೇ ಕಳ್ಳ 8500 ರು.ನೊಂದಿಗೆ ಅಲ್ಲೇ ಮಲಗಿರುವುದನ್ನು ನೋಡಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸದ್ಯ ಪೊಲೀಸರು ಸೆಂಥಿಲ್‌ನನ್ನು ಬಂಧಿಸಿದ್ದಾರೆ. ಆತ ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Delhi Karnataka Sangha Election: ದೆಹಲಿ ಕರ್ನಾಟಕ ಸಂಘಕ್ಕೆ ಇಂದು ಚುನಾವಣೆ, ಚುನಾವಣೆಗೆ ಮೊದಲೇ ಕುಸ್ತಿ, ಏನಿದು ಜೂಮ್ ಮೀಟಿಂಗ್ ವಿವಾದ?
ಆಕೆಯೊಟ್ಟಿಗೆ ರೂಮ್​ಗೆ ಹೋದಾಗ ಆದಿತ್ಯ, ಬಟ್ಟೆ ಬಿಚ್ಚಿದಾಗ ಅಬ್ದುಲ್ಲಾ! ಮತಾಂತರಕ್ಕೆ ಯತ್ನಿಸಿದವನಿಗೆ ಪರೇಡ್​