'ಬಾಲಿವುಡ್‌ನಿಂದ ಹಣ ಬೇಕು, ಹಿಂದಿ ಬೇಡ' ತಮಿಳುನಾಡು ನಾಯಕರ ವಿರುದ್ಧ ಪವನ್‌ ಕಲ್ಯಾಣ್‌ ಕಿಡಿ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ತಮಿಳುನಾಡಿನ ಭಾಷಾ ನೀತಿಯನ್ನು ಟೀಕಿಸಿದ್ದಾರೆ. ಆರ್ಥಿಕ ಲಾಭಕ್ಕಾಗಿ ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ ಮಾಡುವುದನ್ನು ಅವರು ಪ್ರಶ್ನಿಸಿದ್ದಾರೆ. ಹಿಂದಿ ಹೇರಿಕೆ ವಿರೋಧಿಸುವ ತಮಿಳುನಾಡು, ಹಿಂದಿ ಮಾತನಾಡುವ ರಾಜ್ಯಗಳ ಕಾರ್ಮಿಕರನ್ನು ಸ್ವಾಗತಿಸುವುದನ್ನು ಕಲ್ಯಾಣ್ ಪ್ರಶ್ನಿಸಿದ್ದಾರೆ.

They dub Tamil films in Hindi Pawan Kalyan hypocrisy jab at Tamil Nadu san

ಹೈದರಾಬಾದ್‌ (ಮಾ.15): ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ತಮಿಳುನಾಡು ಬೂಟಾಟಿಕೆ ಪ್ರದರ್ಶಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಆರ್ಥಿಕ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡಲು ಅಲ್ಲಿನ ನಾಯಕರು ಅವಕಾಶ ನೀಡುತ್ತಾರೆ ಆದರೆ ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ ಎಂದು ಅವರು ಹೇಳಿದರು. ತಮ್ಮ ಪಕ್ಷದ ಸಂಸ್ಥಾಪನಾ ದಿನದಂದು ಮಾತನಾಡಿದ ಜನಸೇನಾ ಮುಖ್ಯಸ್ಥರು, ದೇಶದ ಸಮಗ್ರತೆಗಾಗಿ ಭಾರತಕ್ಕೆ ತಮಿಳು ಸೇರಿದಂತೆ ಬಹು ಭಾಷೆಗಳ ಅಗತ್ಯವಿದೆ ಎಂದು ಹೇಳಿದರು. "ತಮಿಳುನಾಡಿನಲ್ಲಿ ಜನರು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾರೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ಅವರಿಗೆ ಹಿಂದಿ ಬೇಡವಾದರೆ, ಆರ್ಥಿಕ ಲಾಭಕ್ಕಾಗಿ ಅವರು ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡುವುದು ಏಕೆ? ಅವರು ಬಾಲಿವುಡ್‌ನಿಂದ ಹಣವನ್ನು ಬಯಸುತ್ತಾರೆ ಆದರೆ ಹಿಂದಿಯನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಅದು ಯಾವ ರೀತಿಯ ತರ್ಕ?" ಜನಸೇನಾ ನಾಯಕ ಪ್ರಶ್ನೆ ಮಾಡಿದ್ದಾರೆ.

ಹಿಂದಿ ಮಾತನಾಡುವ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳ ಕಾರ್ಮಿಕರನ್ನು ಸ್ವಾಗತಿಸಿ ಭಾಷೆಯನ್ನು ತಿರಸ್ಕರಿಸುವುದು ತಮಿಳುನಾಡಿನ ಕಡೆಯಿಂದ ಮಾಡುತ್ತಿರುವ "ಅನ್ಯಾಯ" ಎಂದು ಪವನ್‌ ಕಲ್ಯಾಣ್‌ ಹೇಳಿದ್ದಾರೆ. ಹರಿಯಾಣ, ಯುಪಿ, ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ತಮಿಳುನಾಡು ನೆಲೆಯಾಗಿದ್ದು, ಸಮೀಕ್ಷೆಯ ಪ್ರಕಾರ ಈ ಸಂಖ್ಯೆ 15, 20 ಲಕ್ಷದ ನಡುವೆ ಇರಬಹುದು ಎನ್ನಲಾಗಿದೆ.

"ಅವರು ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢಗಳಿಂದ ಆದಾಯ ಬಯಸುತ್ತಾರೆ, ಆದರೆ ಹಿಂದಿ ಬೇಡ ಎಂದು ಹೇಳುತ್ತಾರೆ. ಅದು ಅನ್ಯಾಯವಲ್ಲವೇ? ಅವರು ಬಿಹಾರದ ಕಾರ್ಮಿಕರನ್ನು ಸ್ವಾಗತಿಸುತ್ತಾರೆ ಆದರೆ ಭಾಷೆಯನ್ನು ತಿರಸ್ಕರಿಸುತ್ತಾರೆ. ಈ ವಿರೋಧಾಭಾಸ ಏಕೆ? ಈ ಮನಸ್ಥಿತಿ ಬದಲಾಗಬೇಕಲ್ಲವೇ?" ಎಂದು ಪ್ರಶ್ನೆ ಮಾಡಿದ್ದಾರೆ.

Latest Videos

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಡಿಎಂಕೆ ಆಡಳಿತದ ತಮಿಳುನಾಡು ಹೊಸ ಶಿಕ್ಷಣ ನೀತಿಯ ಭಾಗವಾಗಿರುವ 'ತ್ರಿಭಾಷಾ ಸೂತ್ರ'ದ ಬಗ್ಗೆ ತೀವ್ರ ಜಗಳದಲ್ಲಿ ತೊಡಗಿರುವ ಸಮಯದಲ್ಲಿ ಕಲ್ಯಾಣ್ ಅವರ ಹೇಳಿಕೆಗಳು ಬಂದಿವೆ.

ಅಯ್ಯಯ್ಯೋ.. ಲೀಕ್ ಆಗೋಯ್ತು ಹರಿಹರ ವೀರಮಲ್ಲು ಚಿತ್ರದ ಪವನ್ ಕಲ್ಯಾಣ್ ಇಂಟ್ರೋ ಸೀನ್, ನಿಧಿ ಪಾತ್ರದ ಡೀಟೇಲ್ಸ್!

ತಮಿಳುನಾಡು ಸಮಗ್ರ ಶಿಕ್ಷಾ ಯೋಜನೆಗೆ ಮೀಸಲಾದ 2,152 ಕೋಟಿ ರೂ.ಗಳನ್ನು ಕೇಂದ್ರವು ತಡೆಹಿಡಿದ ನಂತರ, ಎನ್‌ಇಪಿಯನ್ನು ಜಾರಿಗೆ ತರಲು ರಾಜ್ಯ ನಿರಾಕರಿಸಿದ್ದನ್ನು ಉಲ್ಲೇಖಿಸಿದ ಬಳಿಕ ವಿವಾದ ತಾರಕಕ್ಕೇರಿದೆ. 'ತ್ರಿಭಾಷಾ' ಸೂತ್ರವನ್ನು ರಾಜ್ಯದ ಮೇಲೆ ಹಿಂದಿ ಹೇರುವ ಪ್ರಯತ್ನವೆಂದು ತಮಿಳುನಾಡು ಬಹಳ ಹಿಂದಿನಿಂದಲೂ ಆರೋಪಿಸುತ್ತಿದೆ. ಆದರೆ ಈ ನೀತಿಯು ಯುವಜನರಿಗೆ ಪ್ರದೇಶಗಳಲ್ಲಿ ಉದ್ಯೋಗ ಸಿಗುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ.

ಕೆಲಸ ಮಾಡೋದ್ರಲ್ಲಿ ನಾಗಬಾಬು, ಪವನ್ ಕಲ್ಯಾಣ್ ವೀಕ್.. ಎಲ್ಲದಕ್ಕೂ ಚಿರಂಜೀವಿನೇ ಬಲಿ: ಇಲ್ಲಿದೆ ಮೆಗಾ ಫ್ಯಾಮಿಲಿ ಕತೆ!

Why don't you guys Stop Dubbing your films into Hindi first?

PawanKalyan Questions the Hindi Hate coming out of Tamilnadu 🔥 pic.twitter.com/9oEkv59pu3

— Megh Updates 🚨™ (@MeghUpdates)
click me!