
ನವದೆಹಲಿ (ಏ.9): ಮಹತ್ವದ ನಿರ್ಧಾರವೊಂದರಲ್ಲಿ 2011ರ ಜನಗಣತಿ ಆಧರಿಸಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ ಎಂದು ಮೂಲಗಳು ಹೇಳಿವೆ.
ಏಪ್ರಿಲ್ 16 ರಂದು ಪ್ರಾರಂಭವಾಗುವ ಮಹಿಳಾ ಮೀಸಲು ಕುರಿತಾದ ವಿಶೇಷ ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಈ ಮಸೂದೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯೂ ಸೇರಿದೆ. ಸಂಸತ್ತಿನ ಅಂಗೀಕಾರ ದೊರೆತ ಬಳಿಕ 2029ರ ಲೋಕಸಭಾ ಚುನಾವಣೆಯೊಂದಿಗೆ ಮೀಸಲನ್ನು ಜಾರಿಗೆ ತರಲಾಗುವುದು ಎಂದು ಅವು ಹೇಳಿವೆ.
ಈ ಮುಂಚೆ ಹೊಸ ಜನಗಣತಿ ಆಧರಿಸಿ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಮಾಡುವ ಉದ್ದೇಶ ಇರಿಸಿಕೊಂಡು ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ಆದರೆ ಗಣತಿ ವಿಳಂಬ ಆಗಿರುವ ಕಾರಣ 2011ರ ಜನಗಣತಿ ಆಧರಿಸಿಯೇ ಈ ಪ್ರಕ್ರಿಯೆ ಮುಗಿಸಲು ನಿರ್ಣಯಿಸಲಾಗಿದೆ. ಹೀಗಾಗಿ ಮೂಲ ಕಾಯ್ದೆಯಾದ ನಾರಿ ಶಕ್ತಿ ವಂದನ ಕಾಯ್ದೆಗೆ (ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿ ತರುವ ಉದ್ದೇಶ ಸರ್ಕಾರದ್ದು. ಇದರ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆ 543 ರಿಂದ 816 ಕ್ಕೆ ಹೆಚ್ಚಾಗುತ್ತದೆ. ಇದರಲ್ಲಿ ಶೇ.33ರಷ್ಟು ಸ್ಥಾನಗಳು (273 ಸೀಟುಗಳು) ಮಹಿಳೆಯರಿಗೆ ಮೀಸಲಾಗಿರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ