75 ಸಾವಿರ ಕೋಟಿ ಮೊತ್ತದ ಪಿಎಂ ಸೂರ್ಯಘರ್ ಯೋಜನೆಗೆ ಕೇಂದ್ರ ಸಂಪುಟ ಅಸ್ತು

By Kannadaprabha NewsFirst Published Mar 1, 2024, 9:16 AM IST
Highlights

ಪಿಎಂ ಸೂರ್ಯಘರ್ ಯೋಜನೆಯನ್ವಯ 1 ಕೋಟಿ ಕುಟುಂಬಗಳು ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸಲು ಹಣಕಾಸಿನ ನೆರವನ್ನು ಪಡೆಯುತ್ತವೆ ಹಾಗೂ ಮೊದಲ 300 ಯೂನಿಟ್‌ ವಿದ್ಯುತ್ತನ್ನು ಉಚಿತವಾಗಿ ಬಳಸಿಕೊಂಡು ಮಿಕ್ಕಿದ್ದನ್ನು ಮಾರಲು ಅವಕಾಶ ನೀಡಲಾಗಿದೆ.

ನವದೆಹಲಿ: ಮನೆ ಮೇಲೆ 1 ಕೋಟಿ ಕುಟುಂಬಗಳು ಸೌರ ಸ್ಥಾವರ ಹಾಕಿಕೊಳ್ಳುವ ಪಿಎಂ ಸೂರ್ಯಘರ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. 75021 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದ್ದು, ಇದರನ್ವಯ 1 ಕೋಟಿ ಕುಟುಂಬಗಳು ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸಲು ಹಣಕಾಸಿನ ನೆರವನ್ನು ಪಡೆಯುತ್ತವೆ ಹಾಗೂ ಮೊದಲ 300 ಯೂನಿಟ್‌ ವಿದ್ಯುತ್ತನ್ನು ಉಚಿತವಾಗಿ ಬಳಸಿಕೊಂಡು ಮಿಕ್ಕಿದ್ದನ್ನು ಮಾರಲು ಅವಕಾಶ ನೀಡಲಾಗಿದೆ.

ಸಂಪಯಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಸಚಿವ ಅನುರಾಗ್‌ ಠಾಕೂರ್‌, ಮೇಲ್ಛಾವಣಿ ಸೋಲಾರ್‌ ಅಳವಡಿಸುವ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದಾಗಿ ವಿದ್ಯುತ್‌ ಉತ್ಪಾದನೆಯೊಂದಿಗೆ 17 ಲಕ್ಷ ಜನರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.

Latest Videos

ಸೋಲಾರ್ ಪ್ಯಾನೆಲ್ ಹಾಕೋಕೆ ಮೇಲ್ಚಾವಣಿನೇ ಇಲ್ವಾ? ಹಾಗಿದ್ರೆ ಈ ಸೋಲಾರ್ ಬಿಸ್ಕೆಟ್ ಕೊಂಡು ಹಣ ಉಳಿಸಿ

ಅಲ್ಲದೇ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ಕುಟುಂಬಗಳಿಗೆ 2 ಕಿಲೋವ್ಯಾಟ್‌ಗೆ ಶೇ.60ರಷ್ಟು ಅಂದರೆ 60 ಸಾವಿರ ರು. (ಪ್ರಸ್ತುತ ಮಾರುಕಟ್ಟೆ ದರ) ಮತ್ತು 2ರಿಂದ 3 ಕಿಲೋವ್ಯಾಟ್‌ಗೆ ಶೇ.40ರಷ್ಟು ಅಂದರೆ 78 ಸಾವಿರ ರು. (ಪ್ರಸ್ತುತ ಮಾರುಕಟ್ಟೆ ದರ) ಸಹಾಯಧನ ಒದಗಿಸಲಾಗುತ್ತದೆ. ಅಲ್ಲದೇ ಇದರ ಅಳವಡಿಕೆಗಾಗಿ ಮನೆಗಳು ಶೇ.7ರಷ್ಟು ಬಡ್ಡಿದರದಲ್ಲಿ ಸಾಲವನ್ನು ಸಹ ಪಡೆದುಕೊಳ್ಳಬಹುದು. ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಒಂದು ಸೌರಗ್ರಾಮವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆದರೆ ಈ ಯೋಜನೆ ಹೊಸದಾಗಿ ಸೌರಫಲಕ ಹಾಕಿಕೊಳ್ಳುವ ಕುಟುಂಬಕ್ಕೆ ಅನ್ವಯಿಸುತ್ತದೆಯೇ ವಿನಾ ಈಗಾಗಲೇ ಹಾಕಿಕೊಂಡ ಕುಟುಂಬಗಳಿಗೆ ಅಲ್ಲ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.13ರಂದು ಚಾಲನೆ ನೀಡಿದ್ದರು.

ತಮಿಳುನಾಡಿನಲ್ಲಿ ಅಮೆರಿಕದ ಫಸ್ಟ್ ಸೋಲಾರ್ ಉತ್ಪಾದನಾ ಘಟಕ ಉದ್ಘಾಟನೆ

click me!