ವಿಚಾರಣೆಗೆ ನೀಡಿದ ತಡೆ ತಂತಾನೆ ರದ್ದಿಲ್ಲ: ಸುಪ್ರೀಂ ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು

By Anusha Kb  |  First Published Mar 1, 2024, 8:51 AM IST

ಅಧೀನ ಮತ್ತು ಹೈಕೋರ್ಟ್‌ಗಳು ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣದ ವಿಚಾರಣೆಗೆ ನೀಡಿದ ತಡೆಯು 6 ತಿಂಗಳ ತಡೆ ಅವಧಿ ಮುಗಿದ ಬಳಿಕ ತಂತಾನೆ ರದ್ದಾಗದು ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಈ ವಿಷಯದಲ್ಲಿ ತನ್ನದೇ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಬದಿಗೊತ್ತಿದೆ.


ನವದೆಹಲಿ: ಅಧೀನ ಮತ್ತು ಹೈಕೋರ್ಟ್‌ಗಳು ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣದ ವಿಚಾರಣೆಗೆ ನೀಡಿದ ತಡೆಯು 6 ತಿಂಗಳ ತಡೆ ಅವಧಿ ಮುಗಿದ ಬಳಿಕ ತಂತಾನೆ ರದ್ದಾಗದು ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಈ ವಿಷಯದಲ್ಲಿ ತನ್ನದೇ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಬದಿಗೊತ್ತಿದೆ.

ಅಲ್ಲದೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ಗಳು ತಮ್ಮ ಅಧೀನ ಕೋರ್ಟ್‌ಗಳು ನಡೆಸುತ್ತಿರುವ ಎಲ್ಲಾ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವಂತೆ ನಿರ್ದೇಶಿಸಬಾರದು. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಇಂಥ ನಿರ್ದೇಶನ ನೀಡಬೇಕು. ಪ್ರಕರಣಗಳ ಗಹನತೆ ಅರಿತು ಅದರ ಇತ್ಯರ್ಥದ ಹೊಣೆಯನ್ನು ವಿಚಾರಣಾ ನ್ಯಾಯಾಲಯಗಳ ವಿವೇಚನೆಗೆ ಬಿಡುವುದೇ ಹೆಚ್ಚು ಸೂಕ್ತ ಎಂದು ಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ 5 ಸದಸ್ಯರ ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.

Tap to resize

Latest Videos

ನೋಟು ಅಮಾನ್ಯೀಕರಣಕ್ಕೂ ಮುನ್ನ ಆರ್‌ಬಿಐ ಸಭೆಯಲ್ಲಿ ಆಗಿದ್ದೇನು? ಇದರ ಸಮಗ್ರ ವರದಿ ಸಲ್ಲಿಸಿ: ಸುಪ್ರೀಂ ಕೋರ್ಟ್‌!

ಏನಿದು ಪ್ರಕರಣ?:

ಏಷ್ಯನ್‌ ರಿಸರ್ಫೇಸಿಂಗ್‌ ಆಫ್‌ ರೋಡ್‌ ಏಜೆನ್ಸಿ ಲಿ. ಡೈರೆಕ್ಟರ್‌ ಮತ್ತು ಸಿಬಿಐ ಪ್ರಕರಣದಲ್ಲಿ 2018ರಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ಹೈಕೋರ್ಟ್‌ ಸೇರಿದಂತೆ ವಿಚಾರಣಾ ಕೋರ್ಟ್‌ಗಳು ಪ್ರಕರಣದ ವಿಚಾರಣೆಗೆ ನೀಡಿದ ತಡೆ ಅವಧಿಯನ್ನು ಪುನಃ ನಿರ್ದಿಷ್ಟವಾಗಿ ವಿಸ್ತರಣೆ ಮಾಡದೇ ಹೋದಲ್ಲಿ ಅವಧಿ ಮುಗಿದ ಬಳಿಕ ತಡೆ ತಂತಾನೆ ರದ್ದಾಗುತ್ತದೆ ಎಂದು ಹೇಳಿತ್ತು. 6 ತಿಂಗಳ ಬಳಿಕವೂ ವಿಚಾರಣೆ ತಂತಾನೆ ರದ್ದಾದ ಸ್ಥಿತಿಯಲ್ಲೇ ಮುಂದುವರೆಯಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಇಂಥ ತೀರ್ಪು ತಾನು ನೀಡಿದ್ದ ತಡೆಗೆ ಅನ್ವಯವಾಗದು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿತ್ತು.

ದೆಹಲಿ ಮೇಲೆ ದೆಹಲಿ ಸರ್ಕಾರಕ್ಕೇ ಅಧಿಕಾರ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಇದನ್ನು ಪ್ರಶ್ನಿಸಿ ಏಷ್ಯನ್‌ ರಿಸರ್ಫೇಸಿಂಗ್‌ ಆಫ್‌ ರೋಡ್‌ ಏಜೆನ್ಸಿ ಲಿ. ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠ ಇದೀಗ ಈ ಮಹತ್ವದ ತೀರ್ಪು ಪ್ರಕಟಿಸಿದೆ.

click me!