ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ (ಯುಎಪಿಎ) ಕೇಂದ್ರ ಸರ್ಕಾರ ತನ್ನ ಮೇಲೆ ವಿಧಿಸಿದ್ದ ನಿಷೇಧವನ್ನು ಪ್ರಶ್ನಿಸಿದ್ದ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ (ಯುಎಪಿಎ) ಕೇಂದ್ರ ಸರ್ಕಾರ ತನ್ನ ಮೇಲೆ ವಿಧಿಸಿದ್ದ ನಿಷೇಧವನ್ನು ಪ್ರಶ್ನಿಸಿದ್ದ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಈ ಮೂಲಕ ಸಂಘಟನೆಯನ್ನು 5 ವರ್ಷ ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಸಮ್ಮತಿಸಿದ್ದ ಯುಎಪಿಎ ನ್ಯಾಯಾಧಿಕರಣದ ಆದೇಶವನ್ನು ಕೋರ್ಟ್ ಪುರಸ್ಕರಿಸಿದೆ.
ಪಿಎಫ್‌ಐ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠ, ನಿಷೇಧಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯದ ಆದೇಶವನ್ನು ಪಿಎಫ್‌ಐ ಮೊದಲು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದು ಸೂಕ್ತ ಎಂದು ಸಲಹೆ ನೀಡಿದೆ. ಪಿಎಫ್‌ಐ (PFI) ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಹಾಜರಾಗಿ, ಸುಪ್ರೀಂಕೋರ್ಟ್ ಸಲಹೆಗೆ ಸಮ್ಮತಿಸಿದರು.
ಬಳಿಕ ಪೀಠ ಪಿಎಫ್‌ಐ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. 2022ರ ಸೆ.27 ರಂದು ಪಿಎಫ್‌ಐ ಮೇಲೆ ನಿಷೇಧ ಹೇರಿದ್ದ ಕೇಂದ್ರದ ನಿರ್ಧಾರವನ್ನು ಸಮ್ಮತಿಸಿ ಯುಎಪಿಎ ನ್ಯಾಯಾಧಿಕರಣ ಈ ಮಾ.21 ರಂದು ಸಮ್ಮತಿಸಿ ಆದೇಶಿಸಿತ್ತು. ಇದನ್ನು ಪಿಎಫ್‌ಐ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ದಿಲ್ಲಿ ನೌಕರರಿಗೆ ಕೇಜ್ರಿವಾಲ್ ದೀಪಾವಳಿ ಬೋನಸ್: ತಲಾ ₹7000 ಘೋಷಣೆ
ನವದೆಹಲಿ: ದೀಪಾವಳಿ ಹಬ್ಬದ ಅಂಗವಾಗಿ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರ ತನ್ನ ಗ್ರೂಪ್ ಬಿ ಹಾಗೂ ಸಿ ದರ್ಜೆಯ ಸರ್ಕಾರಿ ನೌಕರರಿಗೆ ತಲಾ 7000 ರು. ಬೋನಸ್ ಘೋಷಣೆ ಮಾಡಿದೆ. ಈ ಬೋನಸ್ ಗ್ರೂಪ್ ಬಿ ನಾನ್ ಗೆಜೆಟೆಡ್ ಹಾಗೂ ಗ್ರೂಪ್ ಸಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. 80,000 ನೌಕರರಿಗೆ ಬೋನಸ್ ನೀಡಲು 56 ಕೋಟಿ ರು.ಗಳನ್ನು ದೆಹಲಿ ಸರ್ಕಾರ ವೆಚ್ಚ ಮಾಡಲಿದೆ. ಆದರೆ ಇದು ಯಾವುದೇ ಗೆಜೆಟೆಡ್ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ
ನೇಪಾಳದಲ್ಲಿ ಮತ್ತೆ ಭೂಕಂಪ: ದಿಲ್ಲಿ, ಉತ್ತರ ಭಾರತದಲ್ಲೂ ಕಂಪನ
ನವದೆಹಲಿ: 157 ಜನರನ್ನು ಬಲಿ ಪಡೆದ ಭೂಕಂಪದ ದಿನಗಳ ಬಳಿಕ ನೇಪಾಳದಲ್ಲಿ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ. ಈ ಬಾರಿ 5.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರೊಂದಿಗೆ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲೂ ಭೂಕಂಪನ ದಾಖಲಾಗಿದೆ. ಕಂಪನದ ಕೇಂದ್ರ ಸ್ಥಾನ ಉತ್ತರ ಪ್ರದೇಶದ ಅಯೋಧ್ಯೆಯಿಂದ 233 ಕಿ.ಮೀ. ಉತ್ತರದಲ್ಲಿ ದಾಖಲಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ದೆಹಲಿಯಲ್ಲಿನ ಕಂಪನದಿಂದಾಗಿ ಅಲ್ಲಿನ ಜನರು ಮನೆ, ಅಪಾರ್ಟ್‌ಮೆಂಟುಗಳಿಂದ ಹೊರ ಬಂದರು. ಕಂಪನದಿಂದಾಗಿ ಮೇಜುಗಳೆಲ್ಲ ಕೆಲಕಾಲ ಅಲುಗಾಡಿದ್ದ ವಿಡಿಯೋಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.