
ನವದೆಹಲಿ: ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿರುವ ಜಾರಿ ನಿರ್ದೇಶನಾಲಯ, ಒಂದು ವೇಳೆ ಮುಖ್ಯಮಂತ್ರಿಯನ್ನು ಬಂಧಿಸಿದರೆ ಜೈಲಿನಲ್ಲೇ ಸಚಿವ ಸಂಪುಟ ಸಭೆ ನಡೆಸಿ, ಅಲ್ಲಿಂದಲೇ ಕಾರ್ಯ ನಿರ್ವಹಿಸುವ 'ವರ್ಕ್ ಪ್ರಂ ಜೈಲ್' ಮಾಡುವ ನಿರ್ಣಯವನ್ನು ಆಮ್ ಆದ್ಮಿ ಪಕ್ಷ (AAP) ತೆಗೆದುಕೊ೦ಡಿದೆ.
ಸಿಎಂ ಕೇಜ್ರಿವಾಲ್ ನಿನ್ನೆ ಪಕ್ಷದ ಶಾಸಕರ ಸಭೆ ಕರೆದಿದ್ದು, ಈ ಸಭೆಯಲ್ಲಿ ಒಂದು ವೇಳೆ ಕೇಜ್ರಿವಾಲ್, ಇತರೆ ಸಚಿವರನ್ನು ಬೇರೆ ಬೇರೆ ಪ್ರಕರಣದಲ್ಲಿ ಬಂಧಿಸಿದರೆ ಅವರು ಜೈಲಿನಿಂದಲೇ ಕಾರ್ಯ ನಿರ್ವಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಅಗತ್ಯಬಿದ್ದರೆ ಇದಕ್ಕೆ ಕೋರ್ ಅನುಮತಿ ಕೋರಲೂ ಸಭೆ ನಿರ್ಧರಿಸಿದೆ ಎಂದು ಸಭೆಯ ಬಳಿಕ ಸಚಿವ ಸೌರಭ್ ಭಾರದ್ವಾಜ್ ಮಾಹಿತಿ ನೀಡಿದ್ದಾರೆ. ದೆಹಲಿ ಜನತೆ ಅಧಿಕಾರ ಚಲಾಯಿಸುವ ಹಕ್ಕನ್ನು ಕೇಜ್ರಿವಾಲ್‌ಗೆ ನೀಡಿದ್ದಾರೆ. ಹೀಗಾಗಿ ಬಂಧನವಾದರೂ ಜೈಲಿನಿಂದಲೇ ಕಾರ್ಯನಿರ್ವಹಿಸಬೇಕು ಎಂಬುದು ಪಕ್ಷದ ನಿರ್ಧಾರ ಎಂದು ಭಾರದ್ವಾಜ್ (Saurabh Bhardwaj) ಹೇಳಿದರು.
ಬ್ಯಾಂಕ್ ವಂಚನೆ ಕೇಸ್: ಪಂಜಾಬ್ ಇ.ಡಿ.ಯಿಂದ ಆಪ್ ಶಾಸಕನ ಬಂಧನ
ಚಂಡೀಗಢ: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿನ ಆಪ್ ಶಾಸಕ (MLA Jaswant)ಜಸ್ವಂತ್ ಗಜ್ಜನ್ ಮಾಜ್ರಾರನ್ನು(Gajjan Majra) ಸಾರ್ವಜನಿಕ ಸಭೆಯಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಬಂಧಿಸಿದೆ. ಈ ಮೂಲಕ ಆಪ್ ಶಾಸಕರ ಮೇಲೆ ಇ.ಡಿ. ಕೆಂಗಣ್ಣು ಮುಂದುವರಿಸಿದೆ. ಈ ಹಿಂದೆ ಇ.ಡಿ. ನೀಡಿದ್ದ ಸಮನ್ಸ್ ಗೆ ಮಜ್ರಾ ಗೈರು ಹಾಜರಾಗಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ.
ಮಾಜ್ರಾ 41 ಕೋಟಿ ರು. ಬ್ಯಾಂಕ್ ವಂಚನೆ ಆರೋಪ ಹೊತ್ತಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಸಿಬಿಐ ದಾಳಿ (CBI Attack) ನಡೆಸಿತ್ತು. ಜೊತೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇ.ಡಿ. ದಾಳಿ ನಡೆಸಿ 16 ಲಕ್ಷ ನಗದು, ವಿದೇಶಿ ಹಣ ಹಾಗೂ ಹಲವು ಬ್ಯಾಂಕಿಂಗ್ ಉಪಕರಣಗಳು, ಮೊಬೈಲ್ ಸೇರಿ ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಆಪ್ ವಕ್ತಾರ, ಬಿಜೆಪಿ ತನ್ನ ನೀಚ ರಾಜಕಾರಣವನ್ನು ಮುಂದುವರೆಸಿದೆ. ಈ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದರು.
ಗಾಜಾ ನಗರ ಪೂರ್ಣ ಸುತ್ತುವರಿದ ಇಸ್ರೇಲ್‌ಗೆ ಕನಿಷ್ಠ 1 ಲಕ್ಷ ಭಾರತೀಯ ಕಟ್ಟಡ ಕಾರ್ಮಿಕರು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ