ಜನಪ್ರಿಯ ಜೈಪುರ ಸಾಹಿತ್ಯೋತ್ಸವ ಇಂದಿನಿಂದ ಆರಂಭ: ವಿವೇಕ ಶಾನಭಾಗ, ಸುಧಾಮೂರ್ತಿ ಭಾಗಿ

By Kannadaprabha NewsFirst Published Feb 1, 2024, 9:19 AM IST
Highlights

ವಿಶ್ವದ ಅತಿದೊಡ್ಡ ಸಾಹಿತ್ಯ ಹಬ್ಬ ಎಂದು ಕರೆಸಿಕೊಳ್ಳುವ ಜೈಪುರ ಸಾಹಿತ್ಯೋತ್ಸವದ 17ನೇ ಸಂಚಿಕೆ ಇಂದು ಜೈಪುರದ ಹೋಟೆಲ್ ಕ್ಲಾಕ್ ಅಮೀರ್‌ನಲ್ಲಿ ಆರಂಭಗೊಳ್ಳುತ್ತಿದೆ. ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಸಾಹಿತ್ಯೋತ್ಸವವನ್ನು ಉದ್ಘಾಟನೆ ಮಾಡುತ್ತಿದ್ದಾರೆ.

ಜೈಪುರ: ವಿಶ್ವದ ಅತಿದೊಡ್ಡ ಸಾಹಿತ್ಯ ಹಬ್ಬ ಎಂದು ಕರೆಸಿಕೊಳ್ಳುವ ಜೈಪುರ ಸಾಹಿತ್ಯೋತ್ಸವದ 17ನೇ ಸಂಚಿಕೆ ಇಂದು ಜೈಪುರದ ಹೋಟೆಲ್ ಕ್ಲಾಕ್ ಅಮೀರ್‌ನಲ್ಲಿ ಆರಂಭಗೊಳ್ಳುತ್ತಿದೆ. ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಸಾಹಿತ್ಯೋತ್ಸವವನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಒಟ್ಟು 550 ಲೇಖಕರು, ಚಿಂತಕರು ಭಾಗವಹಿಸುವ ಜೈಪುರ ಸಾಹಿತ್ಯೋತ್ಸವದಲ್ಲಿ ಈ ಬಾರಿ ಐದು ಲಕ್ಷ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಫೆಬ್ರವರಿ 1ರಿಂದ 5ರ ತನಕ, ಐದು ದಿನ ಸಾಹಿತ್ಯೋತ್ಸವ ನಡೆಯಲಿದೆ.

16 ಭಾರತೀಯ ಭಾಷೆಗಳ ಹಾಗೂ 8 ಅಂತಾರಾಷ್ಟ್ರೀಯ ಭಾಷೆಗಳ ಲೇಖಕರು ಸಾಹಿತ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡದಿಂದ ಕತೆಗಾರ ವಿವೇಕ ಶಾನಭಾಗ ಹಾಗೂ ಸುಧಾಮೂರ್ತಿ ಭಾಗವಹಿಸುತ್ತಿದ್ದು, ಇಬ್ಬರೂ ತಲಾ ಎರಡು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. ಸಾಹಿತ್ಯದ ಬಹುಮುಖ್ಯ ಪ್ರಶಸ್ತಿಗಳಾದ ಬೂಕರ್, ಅಂತಾರಾಷ್ಟ್ರೀಯ ಬೂಕರ್, ಪುಲಿಟ್ಜರ್, ಸಾಹಿತ್ಯ ಅಕಾಡೆಮಿ, ದಾದಾ ಸಾಹೇಬ್ ಫಾಲ್ಕೆ, ಡಿಎಸ್‌ಸಿ, ಜೆಸಿಬಿ ಮುಂತಾದ ಪ್ರಶಸ್ತಿ ವಿಜೇತರ ಜತೆಗೆ ಯುವ ಬರಹಗಾರರೂ ಭಾಗವಹಿಸುತ್ತಿದ್ದಾರೆ. ಕಥೆ, ಕಾವ್ಯ, ಆತ್ಮಕತೆ, ಆಹಾರ, ಪುರಾಣ, ಕಾನೂನು, ರಾಜಕಾರಣ ಸೇರಿದಂತೆ ಐವತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಗೋಷ್ಠಿಗಳು ನಡೆಯಲಿವೆ.

Latest Videos

ಸೀತಾರಾಮ್‌ಗೆ ಟಿಕೆಟ್ ಸಿಕ್ಕು ಗೆದ್ದಿದ್ದರೆ ನಾವೇನಾಗ್ತಿದ್ದೆವೋ ಗೊತ್ತಿಲ್ಲ; ಸಿಎಂ

''ಈ ಸಲದ ಸಾಹಿತ್ಯೋತ್ಸವದಲ್ಲೂ ಬಹುಭಾಷಾ ಪ್ರಾತಿನಿಧ್ಯ ಇರುತ್ತದೆ. ಸುಮಾರು 25 ದೇಶಗಳ, ಹದಿನಾರು ಭಾರತೀಯ ಭಾಷೆಗಳ ಲೇಖಕರು ಭಾಗವಹಿಸುತ್ತಿದ್ದಾರೆ. ಸಾಹಿತ್ಯೋತ್ಸವದ ಸಹ ನಿರ್ದೇಶಕ ವಿಲಿಯಂ ಡಾರ್ಲಿಂಪಲ್ ಮತ್ತು ನಾನು ಸೇರಿ ಅತ್ಯುತ್ತಮ ಸಾಹಿತ್ಯ ರಸದೌತಣ ಸಿದ್ಧಪಡಿಸಿದ್ದೇವೆ'' ಎಂದು ಜೆಎಲ್ಎಫ್ ನಿರ್ದೇಶಕಿ ನಮಿತಾ ಗೋಖಲೆ ತಿಳಿಸಿದ್ದಾರೆ.

ಐರಿಶ್ ಕಾದಂಬರಿಕಾರ ಪೌಲ್ ಲಿಂಚ್, ಅರ್ಜೆಂಟೈನಾದ ಹರ್ನನ್ ಡಯಾಜ್, ಬ್ರಿಟಿಷ್ ಅಂಕಣಕಾರ ಬೆನೆಡಿಕ್ಟ್ ರಿಚರ್ಡ್ ಮ್ಯಾಕಿಂಟೈರ್, ಹಿರೋಶಿಮಾ ಬಾಂಬ್ ದಾಳಿಯ ಕುರಿತು ಬರೆದ ಅಮೆರಿಕಾದ ಲೇಖಕ ಕೈ ಬರ್ಡ್, ಇಂಗ್ಲೆಂಡಿನ ಲೇಖಕಿ ಕೆಥರೀನ್ ರಾಂಡೆಲ್-ಹೀಗೆ ಹಲವು ಪ್ರಶಸ್ತಿ ಪಡೆದ ಕಾದಂಬರಿಕಾರರು ಜೈಪುರದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಜೈಪುರ ಸಾಹಿತ್ಯೋತ್ಸವದ ಜತೆಜತೆಗೇ ನಡೆಯುವ ಜೈಪುರ್ ಬುಕ್ ಮಾರ್ಕ್‌ ಹನ್ನೊಂದನೇ ಸಂಚಿಕೆಯಲ್ಲಿ ಜಗತ್ತಿನ ಪ್ರಸಿದ್ಧ ಪ್ರಕಾಶಕರು, ಲಿಟರರಿ ಏಜೆಂಟರು, ಅನುವಾದಕರು, ಸಂಪಾದಕರು ಮತ್ತು ಲೇಖಕರು ಭಾಗವಹಿಸುತ್ತಿದ್ದಾರೆ. ಪುಸ್ತಕ ಮಾರಾಟದ ಕುರಿತು ವಿಶೇಷವಾದ ಸಂಕಿರಣ ಕೂಡ ನಡೆಯಲಿದೆ.

ಸಂಸ್ಕೃತಿ ವಿನಾಶಗೊಳಿಸುವ ಹುನ್ನಾರದ ನಡುವೆಯೂ ಎದ್ದು ನಿಂತ ನಾಗರೀಕತೆ ನಮ್ಮದು: ಅಜಿತ್ ಹನಮಕ್ಕನವರ್

click me!