
ನವದೆಹಲಿ (ಮಾ. 27): 1989-2003ರ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ( Jammu & Kashmir ) ನಡೆದ ಹಿಂದೂಗಳು ( Hindu ) ಮತ್ತು ಸಿಖ್ಖರ ( Sikh ) ಹತ್ಯಾಕಾಂಡದಲ್ಲಿ (genocide ) ಭಾಗಿಯಾಗಿರುವ ದುಷ್ಕರ್ಮಿಗಳನ್ನು ಗುರುತಿಸಲು ವಿಶೇಷ ತನಿಖಾ ತಂಡದಿಂದ (Special Investigation Team ) ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಸಲಾಗಿದೆ.
'ವಿ ದಿ ಸಿಟಿಜನ್ಸ್' (We the Citizens) ಎಂಬ ಎನ್‌ಜಿಒ (NGO) ಸಲ್ಲಿಸಿದ ಅರ್ಜಿಯು ಜಮ್ಮು ಮತ್ತು ಕಾಶ್ಮೀರದಲ್ಲಿ "ಹತ್ಯಾಕಾಂಡ" ಕ್ಕೆ ಬಲಿಯಾದ ಅಥವಾ ಬದುಕುಳಿದಿರುವ ಮತ್ತು ಈಗ ಭಾರತದ (India) ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಹಿಂದೂಗಳು ಮತ್ತು ಸಿಖ್ಖರ ಜನಗಣತಿಯನ್ನು ನಡೆಸಲು ನಿರ್ದೇಶನಗಳನ್ನು ಕೋರಿದೆ ಮತ್ತು ಅವರ ಪುನರ್ವಸತಿಗೂ ಮನವಿ ಮಾಡಿದೆ. ಅರ್ಜಿದಾರರು ಕಾಶ್ಮೀರದಿಂದ (Kashmir) ವಲಸೆ ಬಂದವರ ಪುಸ್ತಕಗಳು, ಲೇಖನಗಳು ಮತ್ತು ಆತ್ಮಚರಿತ್ರೆಗಳ ಮೂಲಕ ಸಂಶೋಧನೆ ನಡೆಸಿ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಿದ್ದಾರೆ.
ಅರ್ಜಿದಾರರು ಪರಿಶೀಲಿಸಿದ ಪ್ರಮುಖ ಪುಸ್ತಕಗಳಲ್ಲಿ ಜಗಮೋಹನ್ ಅವರು ಬರೆದ ‘ಮೈ ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ್’ (My Frozen Turbulence in Kashmir) ಮತ್ತು ರಾಹುಲ್ ಪಂಡಿತ್ ಅವರ ‘ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್’ (Our Moon Has Blood Clots) ಸೇರಿವೆ. ಈ ಎರಡು ಪುಸ್ತಕಗಳು 1990 ರಲ್ಲಿ ಕಾಶ್ಮೀರಿ ಹಿಂದೂಗಳು ಮತ್ತು ಸಿಖ್ಖರ ಭೀಕರ ನರಮೇಧ ಮತ್ತು ಅವರು ನಿರಾಶ್ರಿತರಾಗಿ ರಾಜ್ಯವನ್ನು ತೊರೆದ ಪ್ರತ್ಯಕ್ಷ ಖಾತೆಯನ್ನು ನೀಡುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಪ್ರಕಾರ, ಅಂದಿನ ಸರ್ಕಾರ ಮತ್ತು ಪೊಲೀಸ್ ಆಡಳಿತದ ವೈಫಲ್ಯ ಮತ್ತು ಅಂತಿಮವಾಗಿ ಸಾಂವಿಧಾನಿಕ ಯಂತ್ರಗಳ ಸಂಪೂರ್ಣ ದುರ್ಬಳಕೆಯನ್ನು ಈ ಪುಸ್ತಕಗಳಲ್ಲಿ ವಿವರಿಸಲಾಗಿದೆ. ಹಿಂದೂಗಳು ಮತ್ತು ಸಿಖ್ಖರ ಜೀವ ಮತ್ತು ಅಂಗವನ್ನು ರಕ್ಷಿಸಲು ಸರ್ಕಾರ ಮತ್ತು ರಾಜ್ಯ ಯಂತ್ರವು ವಿಫಲವಾಗಿದೆ ಮತ್ತು ದೇಶವಿರೋಧಿಗಳು ಮತ್ತು ಭಯೋತ್ಪಾದಕರು, ಸಮಾಜ ವಿರೋಧಿ ಶಕ್ತಿಗಳು ಇಡೀ ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟವು ಎಂದು ವಿವರಿಸಲಾಗಿದೆ.
ನಾವು ಶಾಂತಿಪ್ರಿಯರು, ಹಿಂದುಗಳನ್ನು 800 ವರ್ಷ ಆಳಿದ್ದೇವೆ ಎಂದ ಮೌಲ್ವಿ, ಕಾಶ್ಮೀರ್ ಫೈಲ್ಸ್ ನಿಷೇಧಕ್ಕೆ ಆಗ್ರಹ!
ಹತ್ಯಾಕಾಂಡದ ಬಳಿಕ ನಡೆದ ಎಲ್ಲಾ ಆಸ್ತಿಗಳ ಎಲ್ಲಾ ಮಾರಾಟ ಅನೂರ್ಜಿತ ಮಾಡಿ: ಈ ಕಾರಣದಿಂದಾಗಿ, ಹಿಂದೂ ಮತ್ತು ಸಿಖ್ ನಾಗರಿಕರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡರು ಮತ್ತು ಭಾರತದ ಇತರ ಭಾಗಗಳಿಗೆ ವಲಸೆ ಹೋಗಬೇಕಾಯಿತು. ಜನವರಿ 1990 ರಲ್ಲಿ ವಲಸೆಯ ನಂತರದ ಎಲ್ಲಾ ಆಸ್ತಿಗಳಾದ ಧಾರ್ಮಿಕ, ವಸತಿ, ಕೃಷಿ, ವಾಣಿಜ್ಯ, ಸಾಂಸ್ಥಿಕ, ಶೈಕ್ಷಣಿಕ ಅಥವಾ ಇತರ ಯಾವುದೇ ಸ್ಥಿರಾಸ್ತಿಯನ್ನು ಮಾರಾಟವನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲು ನಿರ್ದೇಶನಗಳನ್ನು ಪಿಐಎಲ್ ( PIL ) ಕೋರಿದೆ ಎಂದು ಸುದ್ದಿಸಂಸ್ತೆ ವರದಿ ಮಾಡಿದೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತಾಗಿ CBI, NIA ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಬಾಲಿವುಡ್ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಬಿಡುಗಡೆಯಾದ ನಂತರ ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರ ವಲಸೆಯ ಸುತ್ತಲಿನ ಚರ್ಚೆಯು ಇನ್ನಷ್ಟು ಬಿರುಸು ಪಡೆದುಕೊಂಡಿದೆ. 1990 ರ ದಶಕದ ಆರಂಭದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸಮುದಾಯವನ್ನು ಗುರಿಯಾಗಿಸಿಕೊಂಡ ನಂತರ ಅವರ ಮೂಲ ರಾಜ್ಯದಿಂದ ಕಾಶ್ಮೀರಿ ಪಂಡಿತರ ಬಲವಂತದ ನಿರ್ಗಮನದ ಸುತ್ತ ಚಿತ್ರಕಥೆಯು ಸುತ್ತುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ