Rozgar Budget 2022: 75800 ಕೋಟಿ ರೂ. ಬಜೆಟ್ ಮಂಡಿಸಿದ ಕೇಜ್ರಿವಾಲ್ ಸರ್ಕಾರ!

Published : Mar 27, 2022, 07:47 PM IST
Rozgar Budget 2022: 75800 ಕೋಟಿ ರೂ. ಬಜೆಟ್ ಮಂಡಿಸಿದ ಕೇಜ್ರಿವಾಲ್ ಸರ್ಕಾರ!

ಸಾರಾಂಶ

ನಿರುದ್ಯೋಗ ಅನ್ನೋ ಪದವನ್ನೇ ಬಂಡವಾಳ ಮಾಡಿಕೊಂಡು, ಐದು ವರ್ಷಗಳ ಮುನ್ನೋಟ ವಿಟ್ಟು, ರೋಜ್ ಗಾರ್ ಹೆಸರಿನಲ್ಲಿ ದೆಹಲಿಯ ಕೇಜ್ರಿವಾಲ್ ಸರ್ಕಾರ ಬಜೆಟ್ ಮಂಡಿಸಿದೆ.

ವರದಿ: ಡೆಲ್ಲಿ ಮಂಜು

ನವದೆಹಲಿ (ಮಾ.27): ರೋಜ್ ಗಾರ್ ಬಜೆಟ್..!  (Rozgar Budget)(ಉದ್ಯೋಗಾವಕಾಶಗಳ ಆಯವ್ಯಯ) ಈ ಪದಗಳು ಡೆಲ್ಲಿ ಕಟ್ಟೆಯಲ್ಲಿ ಬಹುವಾಗಿ ಚರ್ಚಿತವಾಗುತ್ತಿವೆ. ಪಂಚರಾಜ್ಯಗಳ ಚುನಾವಣೆ ಸೇರಿ ಇಡೀ ದೇಶವೇ ನಿರುದ್ಯೋಗ ಸಮಸ್ಯೆಯ ಬಗ್ಗೆ ಚಿಂತನಾ-ಮಂಥನ ನಡೆಸುತ್ತಿದ್ದಾಗ ನಿರುದ್ಯೋಗ ಅನ್ನೋ ಪದವನ್ನೇ ಬಂಡವಾಳ ಮಾಡಿಕೊಂಡು, ಐದು ವರ್ಷಗಳ ಮುನ್ನೋಟ ವಿಟ್ಟು, ರೋಜ್ ಗಾರ್ ಹೆಸರಿನಲ್ಲಿ ದೆಹಲಿಯ ಕೇಜ್ರಿವಾಲ್ (Kejriwal) ಸರ್ಕಾರ ಬಜೆಟ್ (Budget) ಮಂಡಿಸಿದೆ.

75,800 ಕೋಟಿ ರೂಪಾಯಿ ಬಜೆಟ್ ಮಂಡಿಸಿದರು ಈ ವರ್ಷದ ಆದ್ಯತೆ ವಲಯ ಯಾವುದು? ಅದಕ್ಕೆ ಏನು ಮಾಡಬೇಕು? ಬಜೆಟ್ ನಲ್ಲಿ ದುರದೃಷ್ಟಿ ಹೇಗೆ ಇರಬೇಕು? ಅನ್ನೋ ಅಂಶಗಳು ಗೋಚರಿಸುವಂತೆ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಇದ್ದಾಗ ಕೃಷಿಗೆ ಅಂತ್ಲೇ ಪ್ರತ್ಯಕವಾಗಿ ಬಜೆಟ್ ಮಂಡಿಸಿದ್ದರು. (ಇದರ ಅನುಷ್ಠಾನ ಎಷ್ಟಾಯ್ತು ಅನ್ನೋ ಮಾತು ಬೇರೆ) ಇದನ್ನು ಹೊರತಾಗಿ ಅವತ್ತಿನ ದೊಡ್ಡ ಸಮಸ್ಯೆಯನ್ನೇ ಅಸ್ತ್ರವಾಗಿಸಿಕೊಂಡು  ಬಜೆಟ್  ಮಂಡಿಸಿದ್ದು ಎಲ್ಲರಿಗೂ ಹೊಸದಾಗಿ ಕಂಡು ಬಂದಿದೆ. 

ಸಿಟಿ ಸ್ಟೇಟ್ ದೆಹಲಿ. ಅದು ಬೆಂಗಳೂರಿನ ಮಹಾನಗರ ಪಾಲಿಕೆ ಗೆ ಹೋಲಿಕೆ ಮಾಡ್ತಾರೆ. ಅದೊಂದು ರಾಜ್ಯ ಅದಕ್ಕೊಂದು ಬಜೆಟ್ ಎಂಬುವವರು ಇದ್ದಾರೆ.  ಆಯ್ತು ಬೆಂಗಳೂರನ್ನೂ ಹೀಗೆ ಮಾಡಬಹುದಲ್ಲ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವೇ ಇಲ್ಲ.  ಅದು ರಾಜ್ಯ ಸರ್ಕಾರದ ಬಜೆಟ್ ಇರಲಿ, ಬಿಬಿಎಂಪಿ ಬಜೆಟ್ ಇರಲಿ, ಸಿಎಂ ನಗರೋತ್ತಾನ, ಮಳೆನೀರು ಕಾಲುವೆಗಳ ವಿಷಯ, ಫ್ಲೈ ಓವರ್, ಟ್ರಾಫಿಕ್, ಅಂಡರ್ ಪಾಸ್ಕಾರ್ಪೋರೇಟರ್ ಫಂಡ್, ಮೇಯರ್ ಫಂಡ್.. ! ಇಂಥವೇ ವಿಚಾರಗಳು ತುಂಬಿರುತ್ತವೆ. 

'The Kashmir Files ಟ್ಯಾಕ್ಸ್‌ ಫ್ರೀ ಯಾಕೆ? ಯೂಟ್ಯೂಬ್‌ಗೆ ಅಪ್ಲೋಡ್‌ ಮಾಡಲಿ ಎಂದ ಕೇಜ್ರೀ ವೃತ್ತಿಪರ ನಿಂದಕ'

ಬೆಂಗಳೂರಿನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿ ಹೇಗೆ ಮಾಡಬಹುದು? ಅನ್ನೋದು ಚರ್ಚೆಯ ವಿಷಯವೇ ಅಲ್ಲ ಎನ್ನುವಂತಾಗಿದೆ.  ಇಂಥವರು ಡೆಲ್ಲಿ ಬಜೆಟ್ ಈ ಬಾರಿಯ  ಮುನ್ನೋಟ ಒಮ್ಮೆ ಓದಬೇಕು. ಚುನಾವಣಾ ವರ್ಷ ವಲ್ಲದಿದ್ದರೂ ಕೂಡ ಭರವಸೆಗಳು, ಈಡೇರಿಸುವ ಕ್ರಮಗಳನ್ನು ಜನರ ಮುಂದಿಟ್ಟು ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ ನಿಡುತ್ತೇವೆ ಎಂದು ಕೇಜ್ರಿವಾಲ್ ಸರ್ಕಾರ ಹೇಳಿದೆ.

ತಾವು ಸೃಷ್ಟಿ ಮಾಡುವ ಉದ್ಯೋಗದ ವಲಯ, ಎಷ್ಟು ಲಕ್ಷ ಅಥವಾ ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಇದಕ್ಕೆ ಪೂರಕವೆಂಬಂತೆ ಬಜೆಟ್ ನಲ್ಲಿ ಮೀಸಲಿಟ್ಟ ಹಣ ಎಲ್ಲವನ್ನೂ ಜನರ ಮುಂದೆ ಇರಿಸಿದೆ. 'ಉದ್ಯೋಗ, ಆದಾಯ, ಆವಕಾಶ' ಇವೆಲ್ಲಕ್ಕೂ ವೇದಿಕೆ ಕಲ್ಪಿಸಿದೆ. ಕೈಗಾರಿಕಾ ಪ್ರದೇಶಗಳ ಮರು ಅಭಿವೃದ್ಧಿಯ ಮೂಲಕ ಆರು ಲಕ್ಷ ಉದ್ಯೋಗ ಸೃಷ್ಟಿ, 'ಡೆಲ್ಲಿ ಬಜಾರ್'' ಚಿಲ್ಲರೇ ವ್ಯಾಪಾರಿಗಳಿಗೆ ಆನ್ ಲೈನ್ ವೇದಿಕೆ. ಇದರ ಮೂಲಕ ಐದು ವರ್ಷಗಳಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿ, ರೋಜ್ ಗಾರ್ ಬಜಾರ್ 2.0 , ಡೆಲ್ಲಿ ಶಾಪಿಂಗ್ ಫೆಸ್ಟಿವಲ್, ಹೋಲ್ ಸೇಲ್ ಶಾಪಿಂಗ್ ಫೆಸ್ಟಿವಲ್ ಈ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಬಜೆಟ್ ನಲ್ಲಿ ಹೇಳಿದ್ದಾರೆ. 

ಫುಡ್ ಹಬ್, ಗಾರ್ಮೆಂಟ್ಸ್ ಕ್ಷೇತ್ರ, ಇರುವ ಮಾರುಕಟ್ಟೆಗಳ ಮರು ಅಭಿವೃದ್ಧಿ ಹೀಗೆ ಉದ್ಯೋಗ ಜೊತೆಗೆ ಆದಾಯ,ಇದರಿಂದ ಸರ್ಕಾರಕ್ಕೂ ಆದಾಯ ಅಂತ ಹೊಸ ಪರಿಕಲ್ಪನೆ ಗಳನ್ನು ಕೇಜ್ರಿವಾಲ್ ಸರ್ಕಾರ ಮುಂದಿಟ್ಟಿದೆ. ಇದಿಷ್ಟೇ ಆಗಿದ್ದರೇ ಶಾಪಿಂಗ್ ಫೆಸ್ಟಿವಲ್ ಆಯೋಜನೆ ಮಾಡಿ, ಈ ವೇಳೆ ಗ್ರಾಹಕರ ಆಕರ್ಷಣೆ ಸಲುವಾಗಿ ವಸ್ತುಗಳ ಮಾರಾಟಗಾರರಿಗೆ ಎಸ್ ಜಿ ಎಸ್ ಟಿ (SGST) ರಿಫಂಡ್ ನೀಡುವ ಮೂಲಕ ವ್ಯಾಪಾರ ಉತ್ತೇಕ ಕ್ರಮಗಳು ಇರಲಿವೆ ಎಂದಿದೆ.

ದಿ ಕಾಶ್ಮೀರ್ ಫೈಲ್ಸ್ ಟ್ಯಾಕ್ಸ್ ಫ್ರೀ ಮಾಡಲ್ಲ, ಬೇಕಿದ್ರೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಿ!

ನೈಟ್ ಲೈಫ್ ಆದ್ಯತೆ: ದುಡಿಮೆಯ ನಾಡಿ ಮಿಡಿತ ಆರಿತ ಸರ್ಕಾರಗಳು  ಪ್ರತಿಯೊಂದು ಅವಕಾಶವನ್ನು ಉದ್ಯೋಗವಾಗಿ ಮಾರ್ಪಡಿಸುತ್ತವೆ. ಇದೇ ತಂತ್ರ ಕೇಜ್ರಿವಾಲ್ ಸರ್ಕಾರವೂ ಮಾಡಿದೆ. ನೈಟ್ ಲೈಫ್ ಮಧ್ಯರಾತ್ರಿ 2 ಗಂಟೆಯ ವರೆಗೂ ಇರುವಂತೆ ಮಾಡಿದೆ. ನೈಟ್ ಲೈಫ್ ವಿಚಾರ, ಫುಡ್ ಸ್ಟೀಟ್ ಪರಿಕಲ್ಪನೆ ಬೆಂಗಳೂರಿಗೆ ಹೊಸದಲ್ಲ.  ಬಿಎಂಪಿ ಇದ್ದಾಲೇ ಫುಡ್ ಸ್ಟ್ರೀಟ್ ಗೆ ಒತ್ತು ನೀಡಲಾಗಿತ್ತು. ವಾಡ್೯ ವೊಂದಕ್ಕೆ ಫುಡ್ ಸ್ಟ್ರೀಟ್ ಮಾಡಬೇಕು. ನಡುರಾತ್ರಿಯ ತನಕ ಊಟ ಸಿಗಬೇಕು ಅಂತೆಲ್ಲಾ ಯೋಜನೆ ರೂಪಿಸಲಾಗಿತ್ತು. ಬಳಿಕ ಎಲ್ಲವೂ ಮಾತಿಗೆ ಸೀಮಿತ ಆಯ್ತು. ಆ ಯೋಜನೆಗೆ ಸರಿಯಾಗಿ ಚಾಲನೆ ಸಿಗಲಿಲ್ಲ. ಇದೇ ಮಾಡಲ್ ಈಗ ದೆಹಲಿಯಲ್ಲಿ ವಿಜೃಂಭಿಸಲು ಹೊರಟಿದೆ. ಈಗಾಗಲೇ 20 ಸಾವಿರ ಕ್ಲೌಂಡ್ ಕಿಚಿನ್ಸ್ ಇವೆ. ರಾತ್ರಿ 8 ರಿಂದ ಮಧ್ಯರಾತ್ರಿ 2 ತನಕ ನಡೆಯುತ್ತಿವೆ. ಈಗ ಇದಕ್ಕೆ ಹೊಸ ಮಾದರಿ ಟಚ್ ನೀಡಲು ಕೇಜ್ರಿವಾಲ್ ಸರ್ಕಾರ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ