ದೇಶದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ ನಂಬರ್‌ 1!

By Kannadaprabha NewsFirst Published Mar 29, 2021, 7:42 AM IST
Highlights

ದೇಶದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ ನಂಬರ್‌ 1| ಅಮಿತ್‌ ಶಾ 2, ಮೋಹನ್‌ ಭಾಗವತ್‌ಗೆ 3ನೇ ಸ್ಥಾನ| ಟಾಪ್‌ 20ರಲ್ಲೂ ಇಲ್ಲ ಸೋನಿಯಾ, ರಾಹುಲ್‌ ಗಾಂಧಿ| ‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ನಿಂದ ಬಿಡುಗಡೆ

ನವದೆಹಲಿ(ಮಾ.29): ದೇಶದ ಅತ್ಯಂತ ಪ್ರಭಾವಶಾಲಿ 100 ವ್ಯಕ್ತಿಗಳ ಪಟ್ಟಿಯೊಂದನ್ನು ‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಪ್ರಕಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಆರೋಗ್ಯ ತಜ್ಞರು, ಔಷಧ ವಲಯದ ಗಣ್ಯರು ಪಟ್ಟಿಯಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ವಿಪಕ್ಷ ನಾಯಕರ ಪೈಕಿ ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ಅರವಿಂದ ಕೇಜ್ರಿವಾಲ್‌, ಪಿಣರಾಯಿ ವಿಜಯನ್‌ ಅವರು ಪಟ್ಟಿಯಲ್ಲಿ ಹಿಂದಿನ ವರ್ಷಕ್ಕಿಂತ ಮೇಲೇರಿದ್ದಾರೆ. ಇನ್ನು ದಿನೇ ದಿನೇ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ನೆಹರು-ಗಾಂಧೀ ಪರಿವಾರದ ಸೋನಿಯಾ ಗಾಂಧಿ (34), ರಾಹುಲ್‌ ಗಾಂಧಿ (39), ಪ್ರಿಯಾಂಕಾ ವಾದ್ರಾ (41) ಟಾಪ್‌ 20ರಿಂದ ಹೊರ ಬಿದ್ದಿದ್ದಾರೆ.

ಪಟ್ಟಿಯಲ್ಲಿ ಕರ್ನಾಟಕದ ಹಲವು ಗಣ್ಯರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ (16), ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (38), ಮಲ್ಲಿಕಾರ್ಜುನ ಖರ್ಗೆ (46), ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (47), ಅಜೀಂ ಪ್ರೇಮ್‌ಜಿ (53), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (79) ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಭಾವಿ ಕನ್ನಡಿಗರು

* ಬಿ.ಎಸ್‌.ಸಂತೋಷ್‌ 16

* ದತ್ತಾತ್ರೇಯ ಹೊಸಬಾಳೆ 38

* ಮಲ್ಲಿಕಾರ್ಜುನ ಖರ್ಗೆ 46

* ಬಿ.ಎಸ್‌.ಯಡಿಯೂರಪ್ಪ 47

* ಅಜೀಂ ಪ್ರೇಮ್‌ಜಿ 53

* ಡಿ.ಕೆ.ಶಿವಕುಮಾರ್‌ 79

click me!