ಅಂತರ್ಜಾತಿ ವಿವಾಹವಾಗುವ ಜೋಡಿಗೆ ರಕ್ಷಣೆ/ ದೆಹಲಿ ಸರ್ಕಾರದಿಂದ ಸುತ್ತೋಲೆ/ ಭದ್ರತೆ ಒದಗಿಸಲಾಗುತ್ತದೆ/ ಕಿರುಕುಳವಾದರೆ ದೂರು ನೀಡಲು ಸಹಾಯವಾಣಿ
ನವದೆಹಲಿ (ಮಾ. 28) ಅಂತರ್ಜಾತಿ ವಿವಾಹವಾಗುವ ಮತ್ತು ವಿವಾಹವಾಗುವ ಜೋಡಿಗಳ ರಕ್ಷಣೆಗೆ ದೆಹಲಿ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ.
ಅಂತರ್ಜಾತಿ ಅಥವಾ ಅಂತರ್ ಧರ್ಮ ವಿವಾಹವಾದ ದಂಪತಿ ಮೇಲಿನ ಕಿರುಕುಳ ತಡೆಯಲು ದೆಹಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದೇ ಕಾರಣಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗಿದ್ದು ಇದರ ಜವಾಬ್ದಾರಿಯನ್ನು ಪೊಲೀಸ್ ಉಪ ಆಯುಕ್ತರು ವಹಿಸಲಿದ್ದಾರೆ.
ಸ್ನೇಹಿತೆಯ ಪತಿಯನ್ನೇ ಮದುವೆಯಾದ ಕೇಂದ್ರ ಸಚಿವೆ ಲವ್ ಸ್ಟೋರಿ
ಅಂತರ್ಜಾತಿ ವಿವಾಹದ ದಂಪತಿ ತಮ್ಮ ಕುಟುಂಬಗಳಿಂದ ಅಥವಾ ಸ್ಥಳೀಯ ಸಮುದಾಯದಿಂದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ದಂಪತಿಗೆ ಸರ್ಕಾರ ಸುರಕ್ಷಿತ ಮನೆಯಲ್ಲಿ (ಸೇಫ್ ಹೌಸ್) ವಸತಿ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ. ದೆಹಲಿ ಮಹಿಳಾ ಆಯೋಗದ 181 ಟೋಲ್-ಫ್ರೀ ಮಹಿಳಾ ಸಹಾಯವಾಣಿ ಕರೆ ಮಾಡಿ ಸಮಸ್ಯೆಯಾದಲ್ಲಿ ತಿಳಿಸಬಹುದಾಗಿದೆ. ಸಹಾಯವಾಣಿ ನೆರವಿಗೆ ನಿಲ್ಲಲಿದೆ.
ಕರೆ ಸ್ವೀಕರಿಸಲು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಗತ್ಯಬಿದ್ದರೆ ದಂಪತಿಗೆ ವಿಶೇಷ ಭದ್ರತೆಯನ್ನು ಒದಗಿಸಬಹುದು ಎಂದು ತಿಳಿಸಲಾಗಿದೆ. ಎನ್ ಜಿಒ ಒಂದು ಮನವಿ ಮಾಡಿಕೊಂಡಿದ್ದ ಪ್ರಕರಣಕ್ಕೆ 2018 ರಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಘಟಕ ಸ್ಥಾಪನೆ ಮಾಡಬಹುದು ಎಂದು ಹೇಳಿತ್ತು.